ಹುಬ್ಬಳ್ಳಿ:ಸಮಾಜಕ್ಕೆ ಜೈನ ಧರ್ಮದ ಕೊಡುಗೆ ಅಪಾರ. ಜೈನರ ಧಾರ್ವಿುಕ ಪರಂಪರೆ, ಸಂಪ್ರದಾಯಗಳು ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ವಿಜಯ ಸಂಕೇಶ್ವರ ಅವರು ಹೇಳಿದರು.
ಆಚಾರ್ಯ ಶ್ರೀ ಮಹಾಶ್ರಮಣಜಿ ಅವರ ಮರ್ಯಾದಾ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆ ಪಕ್ಕದ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಶ್ವೇತಾಂಬರ ಜೈನ ತೇರಾಪಂಥದ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ವಪರಿತ್ಯಾಗಿಯಾಗಿದ್ದರೆ ಮಾತ್ರ ಸನ್ಯಾಸ ದೀಕ್ಷೆ ಕೊಡುವ ಪದ್ಧತಿ ಜೈನ ಧರ್ಮದಲ್ಲಿದೆ. ಅನ್ಯ ಧರ್ಮದಲ್ಲಿ ಕಾವಿ ತೊಟ್ಟುಬಿಟ್ಟರೆ ಸನ್ಯಾಸಿ ಎಂದೆನಿಸಿಕೊಳ್ಳುತ್ತಾರೆ. ಸನ್ಯಾಸಿಯಾಗುವವರನ್ನು ಪರೀಕ್ಷೆಗೊಳಪಡಿಸಿ ಅರ್ಹತೆ ಖಾತ್ರಿಪಡಿಸಿಕೊಂಡರೆ ಮಾತ್ರ ಅವರಿಂದ ಧರ್ಮ ಬೆಳೆಯಲು ಸಾಧ್ಯ ಎಂದು ವಿಶ್ಲೇಷಿಸಿದರು.
ಜೈನ ಧರ್ಮದ ಪರಂಪರೆ ಪಾಲನೆಯಿಂದ ಕ್ಯಾನ್ಸರ್​ನಂತಹ ಮಾರಕ ರೋಗಗಳಿಂದ ದೂರ ಇರಬಹುದು. ಸಂಜೆ 6 ಗಂಟೆಯೊಳಗೆ ಊಟ ಮಾಡುವ, ಕಡಿಮೆ ಪ್ರಮಾಣದ ಆಹಾರ ಸೇವಿಸುವ, ಮೇಲಿಂದ ಮೇಲೆ ಉಪವಾಸ ಮಾಡುವ ಆಚರಣೆಗಳು ಮಾರಕ ರೋಗಗಳು ಬಾರದಂತೆ ತಡೆಯುತ್ತವೆ. ಹೀಗಾಗಿ ಆರೋಗ್ಯಯುತ ಜೀವನ ನಡೆಸಬಹುದು. ಉಪವಾಸ ವ್ರತ ಶರೀರ ಮತ್ತು ಮನಸ್ಸನ್ನು ಪವಿತ್ರಗೊಳಿಸುತ್ತದೆ ಎಂದು ವಿವರಿಸಿದರು.
ದೇಶದ ತೆರಿಗೆ ಸಂಗ್ರಹದಲ್ಲಿ ಜೈನ ಉದ್ಯಮಿಗಳ ಪಾತ್ರ ಮಹತ್ವದ್ದಾಗಿದೆ. ತೆರಿಗೆ ಕಳ್ಳರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭ ಅವರಿಗೆ ಕಿರುಕುಳ ನೀಡಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ನಾನು ಪ್ರಧಾನಿಯವರನ್ನು ಭೇಟಿಯಾಗಿದ್ದಾಗ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದೇನೆ.
ದಾಳಿಯ ವಿಡಿಯೋ ಚಿತ್ರೀಕರಿಸಿ, ಒಂದು ಪ್ರತಿಯನ್ನು ದಾಳಿ ಮಾಡಿದ ಉದ್ಯಮಿಗೆ ನೀಡಬೇಕು. ಜಿಎಸ್​ಟಿಯಲ್ಲಿ ಶೇ.80 ಕಳ್ಳತನವಾಗುತ್ತಿರುವ ಬಗ್ಗೆಯೂ ಪ್ರಧಾನಿಯವರ ಗಮನ ಸೆಳೆದಿದ್ದಾಗಿ ಅವರು ತಿಳಿಸಿದರು. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ಆದಾಯ ಹೆಚ್ಚಳವಾಗಿದೆ. ಭ್ರಷ್ಟಾಚಾರವೂ ಹೆಚ್ಚಾಗಿದೆ. ಅನ್ಯಾಯದ ವಿರುದ್ಧ ಉದ್ಯಮಿಗಳೆಲ್ಲ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.
ತಮಗೆ ಪದ್ಮಶ್ರೀ ಪ್ರಶಸ್ತಿ ಬರುವಲ್ಲಿ ಜೈನ ಸಮಾಜದವರ ಪಾತ್ರವೂ ದೊಡ್ಡದು. ಶೇ.80 ಜೈನ ಉದ್ಯಮಿಗಳು ವಿಆರ್​ಎಲ್ ಲಾಜಿಸ್ಟಿಕ್ಸ್ ಮೂಲಕವೇ ಸರಕು ಸಾಗಾಟ ಮಾಡುತ್ತಿದ್ದಾರೆ ಎಂದು ಡಾ. ಸಂಕೇಶ್ವರ ಅವರು ಸಾಂರ್ದಭಿಕವಾಗಿ ತಿಳಿಸಿದರು.
ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆ ಚೇರ್ಮನ್ ಡಾ.ಆರ್.ಬಿ. ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಆಚಾರ್ಯ ಶ್ರೀ ಮಹಾಶ್ರಮಣ ಮರ್ಯಾದಾ ವ್ಯವಸ್ಥಾ ಸಮಿತಿ ಅಧ್ಯಕ್ಷ ಸೋಹನಲಾಲ ಕೊಠಾರಿ, ಹುಬ್ಬಳ್ಳಿ ಘಟಕದ ಶ್ರೀ ಜೈನ ಶ್ವೇತಾಂಬರ ತೇರಾಪಂಥ ಸಭಾ ಅಧ್ಯಕ್ಷ ಮಹೇಂದ್ರ ಪಾಲಗೋಟಾ, ಕೇಶ್ರಿಚಂದ ಗೊಲಾಚ್ಚಾ, ವಿನೋದ ವೇದಮುಥ್, ಮಹೇಂದ್ರ ಸಿಂಘಿ ಮತ್ತಿತರರಿದ್ದರು.
ಸಮಯ ಸದ್ಬಳಕೆಯಾಗಲಿ
ಪ್ರತಿಯೊಬ್ಬರೂ ಸಮಯ ಪಾಲನೆಗೆ ಮಹತ್ವ ನೀಡಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಹೇಳಿದರು. ಸೂರ್ಯಾಸ್ತ ವಾಯಿತೆಂದರೆ ಜೀವನದ ಒಂದು ದಿನ ಕಳೆದು ಹೋದಂತೆ. ಆ ದಿನ ಉತ್ತಮ ಕಾರ್ಯ ಮಾಡಿದ್ದರೆ ಜೀವನದ ಕ್ಷಣಗಳು ಉತ್ತಮವಾಗಿರುತ್ತವೆ. ಹಣಕ್ಕಿಂತ ಹೆಚ್ಚಿನ ಬೆಲೆ ಸಮಯಕ್ಕಿದೆ. ಹಿಂಸೆ, ಕ್ರೌರ್ಯದಲ್ಲಿ ತೊಡಗಿಕೊಳ್ಳುವವರ ಸಮಯ ವ್ಯರ್ಥವಾಗುತ್ತದೆ. ಪರೋಪಕಾರ, ಅಹಿಂಸೆಯಲ್ಲಿ ನಿರತರಾದವರ ಸಮಯ ಸದುಪಯೋಗವಾಗುತ್ತದೆ ಎಂದು ತಿಳಿಸಿದರು.
ಹಾನಿಕಾರಕ ಚಟುವಟಿಕೆ ಬೇಡ
ಇತ್ತೀಚಿನ ದಿನಗಳಲ್ಲಿ ಬಹುತೇಕ ಜೈನ ಸಮಾಜದವರೂ ಇತರ ಸಮಾಜದವರಂತೆ ತಡರಾತ್ರಿ ಊಟ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಕರವಾದ ಗುಟ್ಖಾ ತಿನ್ನುವ, ಮಾರಾಟ ಮಾಡುವ ಹಾಗೂ ಉತ್ಪಾದಿಸುವ ಕಾರ್ಯದಲ್ಲಿ ಸಮಾಜದ ಕೆಲವರು ತೊಡಗಿಕೊಂಡಿದ್ದಾರೆ ಎಂದು ಡಾ.ವಿಜಯ ಸಂಕೇಶ್ವರ ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಅಕ್ರಮ ಮಾರ್ಗದಿಂದ ಹಣ ದ್ವಿಗುಣಗೊಳ್ಳುತ್ತದೆಯೆಂಬ ಭಾವನೆ ತಪ್ಪು. ಸರಿಯಾದ ಮಾರ್ಗದಿಂದ ಮಾತ್ರ ಹಣ ದ್ವಿಗುಣಗೊಳಿಸಲು ಸಾಧ್ಯ. ನಾನು ಪ್ರಾಮಾಣಿಕವಾಗಿ ಸಾರಿಗೆ ಉದ್ಯಮ ನಡೆಸಿದ್ದರಿಂದ ಯಶಸ್ಸು ಗಳಿಸಲು ಸಾಧ್ಯವಾಯಿತು.
| ಡಾ.ವಿಜಯ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
