ಡಾ. ವಿಜಯ ಸಂಕೇಶ್ವರ ಅವರಲ್ಲಿ ಧರ್ಮಶ್ರದ್ಧೆ ಇದೆ. ಜತೆಗೆ ಕೆಲಸದಲ್ಲಿ ವಿಶೇಷ ಯಶಸ್ಸನ್ನೂ ಕಂಡಿದ್ದಾರೆ. ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ ಎಂದು ಜಗದ್ಗುರುಗಳು ಮುಕ್ತ ಕಂಠದಿಂದ ಪ್ರಶಂಸಿಸಿದರು. ಕೆಲವರಿಗೆ ತಾವು ಬೆಳೆದಂತೆ ಅಹಂಕಾರವೂ ಬೆಳೆಯುತ್ತದೆ. ಆದರೆ, ಡಾ. ವಿಜಯ ಸಂಕೇಶ್ವರ ಅವರು ಈ ಮಾತಿಗೆ ಭಿನ್ನರಾಗಿದ್ದಾರೆ. ತಾವು ಬೆಳೆಯುವುದರ ಜತೆಗೆ ಸನಾತನ ಧರ್ಮದ ಸಂಸ್ಕೃತಿ-ಪರಂಪರೆಯನ್ನು ಬಿಟ್ಟಿಲ್ಲ. ತಮ್ಮ ಪುತ್ರ ಡಾ. ಆನಂದ ಸಂಕೇಶ್ವರ, ಮೊಮ್ಮಗ ಶಿವಾ ಸಂಕೇಶ್ವರ ಹಾಗೂ ಪರಿವಾರಕ್ಕೂ ಒಳ್ಳೆಯ ಸಂಸ್ಕಾರವನ್ನೂ ಕೊಟ್ಟಿದ್ದಾರೆ. ದಕ್ಷತೆ, ಪ್ರಾಮಾಣಿಕತೆ ಡಾ. ಆನಂದ ಸಂಕೇಶ್ವರ ಅವರಲ್ಲಿದೆ. ಚಿಕ್ಕ ವಯಸ್ಸಿನಲ್ಲಿಯೇ ಶಿವಾ ಸಂಕೇಶ್ವರ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಾಯಕ ಸಂಸ್ಕೃತಿಯ ಜತೆಗೆ ಧಾರ್ವಿುಕ ಮನೋಭಾವ ಇಡೀ ಪರಿವಾರದಲ್ಲಿರುವುದು ಸಂತಸದ ವಿಷಯ ಎಂದರು. ಸಂಕೇಶ್ವರ ಅವರಿಗೆ ದೇವಸ್ಥಾನ ನಿರ್ವಿುಸುವ ಸಂಕಲ್ಪ ಇತ್ತು. ಅದರಂತೆ ನಿರ್ವಿುಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೆ ಮಾಘ ಶುದ್ಧ ತ್ರಯೋದಶಿ ಮುಹೂರ್ತ ನಿಗದಿಯಾಗಿತ್ತು. ಶೃಂಗೇರಿಯಲ್ಲಿ ಜಗದ್ಗುರು ಶಂಕರಾಚಾರ್ಯರು ಇದೇ ಮುಹೂರ್ತದಲ್ಲಿ ದೇವಾಲಯವನ್ನು ನಿರ್ವಿುಸಿದ್ದಾರೆ. ಅದರ ವಾರ್ಷಿಕೋತ್ಸವೂ ಇದೇ ದಿನ ಇದೆ. ಇಂದೇ ಈ ದೇವಸ್ಥಾನದಲ್ಲಿ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವಾಗಿದೆ. ಶೀಘ್ರವೇ ದೊಡ್ಡ ಕ್ಷೇತ್ರವಾಗಿ ಬೆಳೆಯಲಿದೆ. ದೇವರ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗಲಿದ್ದಾರೆ. ಚೈತನ್ಯ ಉಂಟು ಮಾಡುವ ಕೇಂದ್ರವಾಗಿ, ದೊಡ್ಡ ಶ್ರದ್ಧಾ ಕೇಂದ್ರವಾಗಿ ಜಗತ್ಪ್ರಸಿದ್ಧವಾಗಲಿದೆ ಎಂದರು.
ಶ್ರೀ ಶಂಕರಾಚಾರ್ಯರ ಸಾಧನೆ ಅಮೋಘ
1500 ವರ್ಷಗಳ ಹಿಂದೆ ಶಂಕರಾಚಾರ್ಯರು ಕೇರಳದ ಕಾಲಡಿಯಲ್ಲಿ ಜನಿಸಿದರು. 8ನೇ ವಯಸ್ಸಿನಲ್ಲಿಯೇ ಅವರು ಸರ್ವಸಂಗ ಪರಿತ್ಯಾಗ ಮಾಡಿ ಧರ್ಮ ಸಂಸ್ಥಾಪನೆಗೆ ಹೊರಟರು. 32ನೇ ವರ್ಷದಲ್ಲಿಯೇ ಅವರು ಕಾಲವಾದರು. ಆದರೆ, ಅವರು ಮಾಡಿದ ಸಾಧನೆ 32 ಯುಗಗಳಿಗೆ ಆಗುವಷ್ಟು. ಅವರು ಮೊದಲು ಧರ್ಮ ಸಂಸ್ಥಾಪನೆಗಾಗಿ ದಿಗ್ವಿಜಯ ಯಾತ್ರೆ ಮಾಡಿದರು. ಬಹಳಷ್ಟು ಗ್ರಂಥಗಳನ್ನು ರಚನೆ ಮಾಡಿದರು. ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಪೀಠದಿಂದ ಇನ್ನೊಂದು ಪೀಠಕ್ಕೆ 1800 ಕಿ.ಮೀ. ಅಂತರವಿದೆ. ಕೃಷ್ಣದೇವರಾಯನ ಕಾಲದಲ್ಲಿ ಶ್ರೀ ವಿದ್ಯಾರಣ್ಯರು ಮಾರ್ಗದರ್ಶನ ನೀಡಿದ್ದರು. ಅವರು ಶೃಂಗೇರಿ ಪೀಠದ 12ನೇ ಅಧಿಪತಿಗಳು. ಹಿಂದು ಧರ್ಮದ ರಕ್ಷಣೆಗಾಗಿ ಅವರು ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ನಮ್ಮ ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ 36ನೇ ಪೀಠಾಧಿಪತಿ. ರಾಜಕೀಯ-ಲೌಕಿಕದೊಂದಿಗೆ ಸ್ವಾಮೀಜಿಗಳು ಬೆರೆಯುವುದಿಲ್ಲ. ಸದಾ ಜಪಾನುಷ್ಠಾನ, ವೇದಾಂಗ ಅಧ್ಯಯನದಲ್ಲಿರುತ್ತಾರೆ ಎಂದು ಶ್ರೀ ವಿಧುಶೇಖರ ಭಾರತೀ ಜಗದ್ಗುರುಗಳು ವಿವರಿಸಿದರು.
ಹಿಂದುಗಳ ಐಕ್ಯತೆಗೆ ಅಂತರ್ಜಾತಿ ವಿವಾಹ ಅವಶ್ಯ

ಹಿಂದುಗಳಲ್ಲಿರುವ ಮೇಲು-ಕೀಳು ಭಾವನೆ ನಿವಾರಣೆಯಾಗಿ ಹಿಂದುಗಳು ಒಗ್ಗಟ್ಟಾಗಲು ಅಂತರ್ಜಾತಿ ವಿವಾಹ ಅವಶ್ಯವೆಂದು ಡಾ. ವಿಜಯ ಸಂಕೇಶ್ವರ ಪ್ರತಿಪಾದಿಸಿದರು. ಪಾಲಿಕೊಪ್ಪದಲ್ಲಿ ನೂತನವಾಗಿ ನಿರ್ವಿುಸಿರುವ ಶಿವಶಕ್ತಿ ಧಾಮದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಒಗ್ಗಟ್ಟು ಮತ್ತು ಸಂಘಟನೆಗೆ ಸಂಬಂಧಪಟ್ಟಂತೆ ಅನೇಕ ಮಹಾತ್ಮರು ಬಹಳ ಹಿಂದಿನಿಂದಲೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ಈವರೆಗೆ ಅದು ಪೂರ್ಣ ಪ್ರಮಾಣದಲ್ಲಿ ಫಲ ನೀಡಿಲ್ಲ. ಹಿಂದುಗಳಲ್ಲಿರುವ ಜಾತಿ ಭೇದ, ಅಸ್ಪೃಶ್ಯತೆ, ತಾರತಮ್ಯಗಳಿಂದ ಹಿಂದುಗಳು ಒಂದಾಗಲು ಸಾಧ್ಯವಾಗಿಲ್ಲ. ಹಿಂದುಗಳಲ್ಲಿ ಸಮಗ್ರತೆ, ಸಮಷ್ಠಿಪ್ರಜ್ಞೆ ಜಾಗೃತವಾಗಬೇಕು. ಅಂತರ್ಜಾತಿ ವಿವಾಹದಿಂದ ಪರಸ್ಪರ ಪ್ರೀತಿ, ಬಾಂಧವ್ಯ ಮೂಡುತ್ತದೆ. ಇದರಿಂದ ಹಿಂದು ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಅವರು ವಿವರಿಸಿದರು. ಕಳೆದ 10 ವರ್ಷಗಳ ಹಿಂದೆ ರಾಮನ ಹೆಸರು ಹೇಳುವುದಾಗಲೀ, ರಾಮನ ಮಂದಿರ ನಿರ್ಮಾಣ ಮಾಡುವುದಾಗಲೀ ಅಥವಾ ನಾನೊಬ್ಬ ಹಿಂದು ಎಂದು ಹೇಳಿಕೊಳ್ಳುವುದಕ್ಕೂ ಪೂರಕವಾದ ಪರಿಸ್ಥಿತಿ ಇರಲಿಲ್ಲ. ಆದರೆ, ಇಂದು ಜಗತ್ತಿನ ಎಲ್ಲಿ ಬೇಕಾದರೂ ನಾನೊಬ್ಬ ಹಿಂದು ಎಂಬುದನ್ನು ಹೆಮ್ಮೆಯಿಂದ ಹೇಳಬಹುದು. ಇಂತಹ ಪರಿಸ್ಥಿತಿಯನ್ನು ನಿರ್ವಿುಸಿಕೊಟ್ಟ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದರು.
ಡಾ. ವಿಜಯ ಸಂಕೇಶ್ವರ ಅವರು ಸ್ವತಃ ಧರ್ಮ ಪ್ರಜ್ಞೆ ಇರುವ ವ್ಯಕ್ತಿ, ಆಧ್ಯಾತ್ಮಿಕ ಜೀವಿ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಮತ್ತು ದೇಶದ ಹಲವು ಕಡೆ ಇಂತಹ ಅನೇಕ ಧಾರ್ವಿುಕ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ತಮ್ಮ ಧರ್ಮ ಕಾರ್ಯ ನಿರಂತರವಾಗಿ ಮುಂದಿನ ಪೀಳಿಗೆಗೂ ಮುಂದುವರಿಯಬೇಕೆಂಬ ಸಂಕಲ್ಪದಿಂದ ಶಿವಶಕ್ತಿ ಧಾಮವನ್ನು ನಿರ್ವಿುಸಿದ್ದಾರೆ. ಸನಾತನ ಧರ್ಮದ ಸತ್ಸಂಪ್ರದಾಯಗಳು ನಿರಂತರವಾಗಿ ಮುಂದುವರಿಯಬೇಕು ಎಂಬುದನ್ನು ಸದಾ ಪ್ರದಿಪಾದಿಸುವ ಡಾ. ವಿಜಯ ಸಂಕೇಶ್ವರ ಅವರು ಅದೇ ಹಾದಿಯಲ್ಲಿ ತಮ್ಮ ಮಗ ಡಾ. ಆನಂದ ಸಂಕೇಶ್ವರ ಅವರನ್ನು ಬೆಳೆಸಿದ್ದಾರೆ. ನೂತನವಾಗಿ ನಿರ್ವಣವಾಗಿರುವ ಈ ಬೃಹತ್ ದೇವಾಲಯದ ಹಿಂದೆ ಅವರ ಧರ್ಮಶ್ರದ್ಧೆ ಅಡಕವಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:7 + 9 =
Remember me
