ಬೆಂಗಳೂರು:ಶಿಕ್ಷಕರ ಕಡ್ಡಾಯ ವರ್ಗಾವಣೆ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಹೆಸರು ಬದಲು ಮಾಡುವುದು ಸೇರಿ ಹಲವು ನಿಯಮ ಸೇರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಚಿವ ಎಸ್. ಸುರೇಶ್​ಕುಮಾರ್ ಮಂಗಳವಾರ ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆಗಳ ಅಧ್ಯಕ್ಷರ ಜತೆ ರ್ಚಚಿಸಿದ್ದಾರೆ.
ಕರಡು ಪ್ರತಿಯಲ್ಲೇನಿದೆ?: ಕಡ್ಡಾಯ ವರ್ಗಾವಣೆ ತೆಗೆದು ವಲಯ ವರ್ಗಾವಣೆ ಎಂದು ಮರು ನಾಮಕರಣ. ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ನು ನೀಡಲಾಗಿದ್ದ ವಿಶೇಷ ವಿನಾಯಿತಿ ಹಾಗೂ ಶೇ.20ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳಿರುವ ತಾಲೂಕುಗಳಿಗೆ ಮಾತ್ರ ವರ್ಗಾವಣೆ ಮಾಡಬೇಕು ಎನ್ನುವ ಮಾನದಂಡ ಕೈಬಿಡಲಾಗಿದೆ. ವಲಯ ವರ್ಗಾವಣೆಯಲ್ಲಿ 50 ವರ್ಷ ಮೀರಿದ ಶಿಕ್ಷಕಿಯರು, 55 ವರ್ಷ ಮೀರಿದ ಶಿಕ್ಷಕರಿಗೆ ವಿನಾಯಿತಿ ನೀಡುವ ಪ್ರಸ್ತಾಪ. ವಿಶೇಷ ಪ್ರಕರಣಗಳನ್ನು ಶೇ.15ರ ವರ್ಗಾವಣೆ ಮಿತಿಯಿಂದ ಹೊರಗಿಡಲಾಗಿದೆ.
ಪತಿ-ಪತ್ನಿ ಪ್ರಕರಣಗಳಲ್ಲಿ ಸರ್ಕಾರದ ಸಾಮಾನ್ಯ ವರ್ಗಾವಣೆ ನೀತಿಯಲ್ಲಿರುವಂತೆ ಕೇವಲ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಉಳಿದ ಎಲ್ಲ ಪ್ರಕರಣ ಕೈ ಬಿಟ್ಟಿದೆ. ಸಮಗ್ರ ಹೊಸ ಕಾಯ್ದೆ, ನಿಯಮಗಳ ಕರಡನ್ನು ಮೇಲ್ಮನೆ ಸದಸ್ಯರಿಗೆ ಸಲ್ಲಿಸಿ, ಸಲಹೆ ಪಡೆದು ಬಳಿಕ ಪರಿಷತ್​ನಲ್ಲಿ ಮಂಡಿಸಲು ಇಲಾಖೆ ನಿರ್ಧರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
