ಮಂಡ್ಯ:ನಾಟಕ ಪ್ರದರ್ಶನದ ವೇಳೆ ರಂಗ ವೇದಿಕೆಯಲ್ಲಿ ನಟನೆ ಮಾಡುತ್ತಿರುವಾಗಲೇ ಪಾತ್ರಧಾರಿ ಪ್ರಾಣ ಬಿಟ್ಟಿರುವಂತಹ ಘಟನೆ ಮಳವಳ್ಳಿ ತಾಲೂಕಿನ ಬಂಡೂರು ಬಸವನಗುಡಿ ಸಮೀಪ ನಡೆದಿದೆ. ದುಗ್ಗನಹಳ್ಳಿ ಗ್ರಾಮದ ಡಿ.ಎನ್.ನಂಜಯ್ಯ ಮೃತ ಕಲಾವಿದ.
ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಡ್ರಾಮಾ‌ಸೀನ್ಸ್ ಸೆಟ್​​ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿದೆ.
ಕೂಡಲೇ ಅಲ್ಲಿದ್ದ ಜನರು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತೆ ಕರೆತಂದು ಚಿಕಿತ್ಸೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಕಲಾವಿದ ವೇದಿಕೆಯಲ್ಲೇ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ. ಇದೀಗ ಕಲಾವಿದ ನಂಜಯ್ಯ ಅವರಿಗೆ ವೇದಿಕೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ವಿಡಿಯೋ ಸೆರೆಯಾಗಿದೆ. ಪತಿಯ ಸಾವಿನ ಕೊನೆ ಕ್ಷಣವನ್ನು ಕಂಡ ಪತ್ನಿ, ಮಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 − ten =
Remember me
