
ಬೆಂಗಳೂರು:ರಾಜ್ಯ ಸರ್ಕಾರದಿಂದ ತಕ್ಷಣ ಮೊದಲ ಕಂತಿನ ಬೆಳೆ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರ ಹಣ ಕೊಡುವುದು ನಿಧಾನ ಆಗಿರುವುದರಿಂದ ಅರ್ಹ ರೈತರಿಗೆ ಎರಡು ಸಾವಿರ ರೂ. ವರೆಗೆ ಬೆಳೆ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ. ನಾಲ್ಕೈದು ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಅರ್ಹ ರೈತರಿಗೆ ಹಣ ವಿತರಿಸಲಾಗುತ್ತದೆ. ಕೇಂದ್ರದಿಂದ ನೆರವು ಬಂದ ಬಳಿಕ‌ ಲೆಕ್ಕ ಹೊಂದಾಣಿಕೆ ಮಾಡಿ‌ ಹೆಚ್ಚುವರಿ ನೆರವು ನೀಡಲು ನಿರ್ಧರಿಸಲಾಗಿದೆ.
ಸಿಎಂ ಹೇಳಿದ್ದೇನು?
ರಾಜ್ಯದಲ್ಲಿ ಈ ವರ್ಷ ಬರ ಮತ್ತೆ ಬಂದಿದೆ.‌ 236 ತಾಲೂಕಲ್ಲಿ  223 ತಾಲೂಕು ಬರ ಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಲಾಗಿದೆ.
48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೇಂದ್ರಕ್ಕೆ 18,171.44 ಕೋಟಿ ಪರಿಹಾರ ಕೇಳಿದ್ದೆವು. ಸೆಪ್ಟೆಂಬರ್ ನಲ್ಲಿ ಮನವಿ ಕೊಟ್ಟಮೇಲೆ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಿತು.
ಇವತ್ತಿನ ವರೆಗೆ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಭೆ ಮಾಡಿಲ್ಲ. ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವರು ದೆಹಲಿಗೆ ಹೋದಾಗ ಸಚಿವರು ಸಿಕ್ಕಿಲ್ಲ. ಅಧಿಕಾರಿಗಳಿಗೆ ವಿವರಿಸಿ ಬಂದಿದ್ದರು.
4,663 ಕೋಟಿ ಬೆಳೆ ಪರಿಹಾರ ಅಪೇಕ್ಷಿಸಿದ್ದೆವು. ಕೇಂದ್ರವೇ ಮಳೆ ಆಶ್ರಿತ ಪ್ರತಿ ಹೆಕ್ಟೇರ್‌ಗೆ 8,500 ರೂ., ನೀರಾವರಿಯಾದರೆ 17 ಸಾವಿರ ರೂ., ಬಹು ವಾರ್ಷಿಕ ಬೆಳೆಯಾದರೆ 22500 ರೂ. ನಿಗದಿ ಮಾಡಲಾಗಿದೆ. ಗರಿಷ್ಠ ಐದು ಎಕರೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ.
ಶನಿವಾರವೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗೆ ಸಮಯ ಕೇಳಿದ್ದೆ. ಇವತ್ತಿನ ವರೆಗೂ ಅವಕಾಶ ಕೊಟ್ಟಿಲ್ಲ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ವಿಮೆಗಾಗಿ 460 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 327 ಕೋಟಿ ರೂ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಿಡುಗಡೆ ಮಾಡಲಾಗಿದೆ.
ಒಂದೆರೆಡು ಕಡೆ ಹೊರತುಪಡಿಸಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಲ್ಲೂ ಸಮಸ್ಯೆ ಆಗದಂತೆ ನೋಡಲು ಸೂಚಿಸಲಾಗಿದೆ. ಅಗತ್ಯವಾದರೆ ಹೊಸ ಬೋರ್ ವೆಲ್ ತೆಗೆಯಲು ಸೂಚಿಸಲಾಗಿದೆ. ಸದ್ಯ ಅರವತ್ತು ಹಳ್ಳಿಗಳಲ್ಲಿ ಸಮಸ್ಯೆ ಇದೆ. ಮೇವಿನ‌ ಸಮಸ್ಯೆ ಆಗಿಲ್ಲ. ಹೊರ ರಾಜ್ಯಕ್ಕೆ ಮೇವಿನ ಸಾಗಾಟ ನಿಲ್ಲಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
