ಹುಬ್ಬಳ್ಳಿ:ಮದ್ಯ ಸಿಗದಿದ್ದರಿಂದ ಕುಡುಕರೆಲ್ಲ ಸ್ಯಾನಿಟೈಸರ್​ ಸೇವನೆ ಮಾಡುತ್ತಿದ್ದಾರೆ ಎಂಬ ವಿಷಯವೊಂದು ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಹುಬ್ಬಳ್ಳಿಯ ತೊರವಿ ಹಕ್ಕಲ ಪ್ರದೇಶದ್ದು ಎಂದು ಹೇಳಲಾದ ವಿಡಿಯೋವೊಂದರಲ್ಲಿ ಅನೇಕ ಸ್ಯಾನಿಟೈಸರ್​ ಬಾಟಲಿಗಳು ಬಿದ್ದಿರುವುದು ಕಾಣುತ್ತದೆ. ಅವೆಲ್ಲ ಕುಡಿದು ಬಿಸಾಕಿರುವಂಥವು ಎಂದು ಹೇಳಲಾಗಿತ್ತು.
ಮದ್ಯದಂಗಡಿಗಳು ತೆರೆಯದ ಕಾರಣ ಅಲ್ಕೋಹಾಲ್​ ಅಂಶ ಇರುವ ಸ್ಯಾನಿಟೈಸರ್​ಗಳನ್ನೇ ಕುಡಿಯುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಿಗ್ವಿಜಯ ನ್ಯೂಸ್​ ವರದಿ ಮಾಡಿತ್ತು.
ಕುಡುಕರು ಸ್ಯಾನಿಟೈಸರ್​ ಸೇವನೆ ಮಾಡುತ್ತಿದ್ದಾರೆ ಎಂಬ ವರದಿಯಿಂದ ಕೂಡಲೇ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕ್ರಮಕ್ಕೆ ಮುಮದಾಗಿದ್ದಾರೆ.
ದಿಗ್ವಿಜಯ ನ್ಯೂಸ್​​​ಗೆ ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ಪ್ರತಿಕ್ರಿಯೆ ನೀಡಿದ್ದು, ಜನ ಈ ರೀತಿ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಆರೋಗ್ಯಕ್ಕೆ ತೀವ್ರ ಹಾನಿಕಾರಕ ಇದು. ಮದ್ಯ ಸೇವನೆಯನ್ನು ಚಟ ಮಾಡಿಕೊಂಡವರು ಹೀಗೆ ವರ್ತಿಸುತ್ತಾರೆ. ನಾವು ಅಂಥವರಿಗೆ ತಿಳಿವಳಿಕೆ ಹೇಳುತ್ತೇವೆ ಎಂದಿದ್ದಾರೆ.
ಸದ್ಯ ಸ್ಯಾನಿಟೈಸರ್​ ನಿಷೇಧ​ ಮಾಡಲು ಸಾಧ್ಯವಿಲ್ಲ. ಈಗ ಅದು ಬಳಕೆಗೆ ಅನಿವಾರ್ಯವಾಗಿದೆ. ಜನರೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಕುಡಿತವನ್ನು ಚಟವಾಗಿಸಿಕೊಂಡವರು ಹೀಗೆ ಸ್ಯಾನಿಟೈಸರ್​ ಕುಡಿಯುತ್ತಿರುವ ಬಗ್ಗೆ ಧಾರವಾಡದ ಹಿರಿಯ ವೈದ್ಯ ಡಾ. ಪ್ರಕಾಶ್​ ರಾಮನಗೌಡರ್​ ಪ್ರತಿಕ್ರಿಯೆ ನೀಡಿದ್ದಾರೆ.
ಹ್ಯಾಂಡ್​ಸ್ಯಾನಿಟೈಸರ್​​ನಲ್ಲಿ ಎಥೆನಾಲ್​ ಇದ್ದರೂ, ಅದಕ್ಕೂ, ಮದ್ಯದಲ್ಲಿ ಬಳಸುವ ಎಥೆನಾಲ್​ಗೂ ವ್ಯತ್ಯಾಸವಿದೆ. ಮದ್ಯದ ಅಂಶವಿದೆ ಎಂದು ಸ್ಯಾನಿಟೈಸರ್​ ಕುಡಿದರೆ ಜೀವಕ್ಕೇ ಅಪಾಯ ತಂದುಕೊಂಡಂತೆ ಎಂದು ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)
https://www.instagram.com/p/B_CCThdHY9a/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
