ಮೈಸೂರು:ಕೆಎಸ್​ಆರ್ಟಿಸಿ ಬಸ್ಸನಲ್ಲಿ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಅದನ್ನು ಹುಡುಕಿಕೊಂಡು ಆ ಮಹಿಳೆ ಡಿಪೋವರೆಗೆ ಬಂದಾಗ ಈ ಚಾಲಕ ಹಾಗೂ ನಿರ್ವಾಹಕರು ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ.
ಈ ಘಟನೆ ನಡೆದದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ-ನಿರ್ವಾಹಕರಾದ ತಾಂಡವಮೂರ್ತಿ ಹಾಗೂ ಆರ್.ಪಿ.ಶಿವಕುಮಾರ್​ಗೆ ಈ ಮಹಿಳೆಯ ಚಿನ್ನದ ಸರ ಸಿಕ್ಕಿತ್ತು.
ಇದನ್ನೂ ಓದಿ:ನಕಲಿ ಮಾಂಗಲ್ಯ ಸರವಿಟ್ಟು ಅಸಲಿ ಕದ್ದವಳ ಸೆರೆ
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುಮ ಎಂಬುವವರು ಇತ್ತೀಚೆಗೆ ನಂಜನಗೂಡಿನಿಂದ ಚಾಮರಾಜನಗರಕ್ಕೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಚಿನ್ನದ ಸರ ಕಳೆದುಕೊಂಡಿದ್ದರು. ಅವರು ಕುಳಿತಿದ್ದ ಸೀಟಿನ ಕೆಳಗೆಯೇ ಮಾಂಗಲ್ಯದ ಸರ ಬಿದ್ದಿತ್ತು. ತಮ್ಮ ವಾಹನದಲ್ಲಿ ಸರ ಪತ್ತೆ ಆಗುತ್ತಿದ್ದಂತೆಯೇ ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರು ಡಿಪೋಗೆ ಮಾಹಿತಿ ನೀಡಿದ್ದರು.
ಇದಾಗುತ್ತಿದ್ದಂತೆಯೇ ಬಸ್‌ನಲ್ಲಿ ಸರ ಬಿದ್ದಿರಬಹುದು ಎಂದು ಡಿಪೋಗೆ ಸುಮ ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಸುಮಗೆ ಚಾಲಕ ನಿರ್ವಾಹಕ ಮಾಂಗಲ್ಯ ಸರ ವಾಪಸ್ಸು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
