ಬೆಂಗಳೂರು:ಇಂದು ಸರ್ಜಾಪುರ ರಸ್ತೆಯಲ್ಲಿ ಬಿಎಂಟಿಸಿ ಬಸ್​ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ಗಾಯಗಳಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಇದೀಗ ಹೊರಬಿದ್ದಿದೆ. ಬಸ್ ಚಲಾಯಿಸುವ ವೇಳೆ ಚಾಲಕ ತೂಕಡಿಸಿದ್ದೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಾಗಿದೆ.
ವರ್ತೂರು ಡಿಪೋ 41ಕ್ಕೆ ಸೇರಿದ ಬಿಎಂಟಿಸಿ ಬಸ್​ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಸರ್ಜಾಪುರ-ಅತ್ತಿಬೆಲೆ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಬಳಿಕ ಬಸ್​ ಚಾಲಕನ ಮೇಲೆ ಹಲ್ಲೆ ಕೂಡ ನಡೆದಿದೆ.
ಸಾರಿಗೆ ನೌಕರರ ಹಿನ್ನೆಲೆಯಲ್ಲಿ ಚಾಲಕರಿಲ್ಲದ್ದರಿಂದ ಬಿಎಂಟಿಸಿ ಮೆಕ್ಯಾನಿಕ್​ ಮೂಲಕ ಸಂಸ್ಥೆಯು ಬಸ್​ ಆಪರೇಟ್​ ಮಾಡಿದೆ. ಸಂಸ್ಥೆ ಸೂಚನೆ ಮೇರೆಗೆ ವರ್ತೂರು ಡಿಪೋ ಮೆಕ್ಯಾನಿಕ್ ಹರೀಶ್​ ಹಾಗೂ ಮ್ಯಾನೇಜರ್ ಬಸ್​ ರಸ್ತೆಗಿಳಿಸಿದ್ದಾರೆ. ಆದರೆ ಹೆಚ್ಚುವರಿ ಕೆಲಸವಾಗಿ ಬಸ್​ ಚಾಲನೆಗಿಳಿದ ಮೆಕ್ಯಾನಿಕ್​, ಮಾರ್ಗಮಧ್ಯೆ ತೂಕಡಿಸಿದ್ದರಿಂದ ಬಸ್​ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಮಧ್ಯೆ ಅಪಘಾತದ ಬಳಿಕ ಬಸ್​ ಚಲಾಯಿಸಿದ್ದ ಮೆಕ್ಯಾನಿಕ್​ಗೆ ಹೊಡೆದವರು ಬಿಎಂಟಿಸಿಯ ಮುಷ್ಕರನಿರತ ಸಿಬ್ಬಂದಿ ಎಂಬ ಶಂಕೆಯೂ ವ್ಯಕ್ತವಾಗಿದೆ. ಸರ್ಜಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾರಿಗೆ ನೌಕರರ ಯುಗಾದಿ ಸಂಭ್ರಮಕ್ಕೆ ಕತ್ತರಿ? ನಾಳೆಯಿಂದ ಕೆಲಸಕ್ಕೆ ಬಂದರೆ ಬೆಲ್ಲ… ಇಲ್ಲದಿದ್ದರೆ ಬೇವು!

ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + sixteen =
Remember me
