ಬೆಂಗಳೂರು:ವಾಹನದಲ್ಲಿ ಹೋಗುವಾಗ ಅಕಸ್ಮಾತ್ ಮೂಕಪ್ರಾಣಿ ಎದುರಾದರೆ ಗಾಡಿಯನ್ನು ನಿಲ್ಲಿಸಿ ಅದು ಹೋದ ಮೇಲೆ ಅಥವಾ ಅದರ ಪಕ್ಕದಲ್ಲಿ ವಾಹನ ಹೋಗುವಷ್ಟು ಜಾಗ ಸಿಕ್ಕಿದ ಮೇಲೆ ಮುಂದಕ್ಕೆ ಹೋಗುವವರಿದ್ದಾರೆ. ರಸ್ತೆಯಲ್ಲಿ ಅಡ್ಡಬಂದ ಹಸು-ನಾಯಿ-ಹಾವಿಗೆ ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾದ ಪ್ರಕರಣಗಳು ಬಹಳಷ್ಟಿವೆ.
ಆದರೆ ಇಲ್ಲೊಬ್ಬ ಭೂಪ ರಸ್ತೆಯ ಬದಿಯಲ್ಲಿ ಮಲಗಿದ್ದ ಬೀದಿನಾಯಿ ಮೇಲೆ ಐಷಾರಾಮಿ ಆಡಿ ಕಾರನ್ನು ಹತ್ತಿಸಿಕೊಂಡು ಹೋಗಿ ಶ್ರೀಮಂತಿಕೆಯ ದರ್ಪ ಮೆರೆದಿದ್ದಾನೆ. ಹೀಗೆ ಬೀದಿನಾಯಿ ಮೇಲೆ ವಿಕೃತಿ ಮೆರೆದಾತನ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನ ಜಯನಗರ 1ನೇ ಬ್ಲಾಕ್​ 10ನೇ ಬಿ ಮುಖ್ಯರಸ್ತೆಯಲ್ಲಿ ಈ ಪ್ರಕರಣ ಜ. 26ರ ಸಂಜೆ ಸುಮಾರಿಗೆ ನಡೆದಿದೆ. ಮಾತ್ರವಲ್ಲ, ಆತ ಬೇಕಂತಲೇ ನಾಯಿ ಮೇಲೆ ಕಾರನ್ನು ಹತ್ತಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಕೂಡ ಸೆರೆಯಾಗಿದೆ. ಈ ಬಗ್ಗೆ ಬದ್ರಿಪ್ರಸಾದ್ ಎಂಬವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆದಿ ಎಂಬಾತನ ವಿರುದ್ಧ ಆರೋಪ ಹೊರಿಸಿದ್ದಾರೆ.
ಕೆಎ 51 ಎಂಇ 0045 ನೋಂದಣಿ ಸಂಖ್ಯೆಯ ಆಡಿ ಕಾರನ್ನು ಚಲಾಯಿಸಿಕೊಂಡು ಬಂದ ಆದಿಕೇಶವನಾಯ್ಡು ಎಂಬಾತ, ರಸ್ತೆ ಪಕ್ಕ ಮಲಗಿದ್ದ ಬೀದಿನಾಯಿ ಮೇಲೆ ಬೇಕಂತಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ವಿಲವಿಲ ಒದ್ದಾಡುತ್ತಿದ್ದ ನಾಯಿಗೆ ಚಿಕಿತ್ಸೆ ನೀಡಲು ಹುಡುಕಾಡಿದರೂ ಅದು ಪತ್ತೆಯಾಗಿಲ್ಲ. ಈ ಕಾರು ವಿಷ್ಣು ಎಂಬವರಿಗೆ ಸೇರಿದ್ದು, ದುಷ್ಕೃತ್ಯ ಎಸಗಿದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..ವಿವರಗಳಿಗೆhttps://t.co/YaFZZchMRhನೋಡಿpic.twitter.com/eYrpTKfT4V— Vijayavani (@VVani4U)January 30, 2022
ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..ವಿವರಗಳಿಗೆhttps://t.co/YaFZZchMRhನೋಡಿpic.twitter.com/eYrpTKfT4V
ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಬಿದ್ದ ತಹಸೀಲ್ದಾರ್​; ಆತ್ಮಹತ್ಯೆ ಮಾಡಿಕೊಂಡ ಚಾಲಕ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 1 =
Remember me
