| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್​ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಚಾಲನಾ ತರಬೇತಿ 2024ರ ಜ.1ರಿಂದ ದುಬಾರಿಯಾಗಲಿದ್ದು, ಕಾರು ಚಾಲನೆ ಕಲಿಯಬೇಕೆಂದರೆ 7 ಸಾವಿರ ರೂ. ವ್ಯಯಿಸಬೇಕಾಗುತ್ತದೆ. ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದಾಗಿ 10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ.ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಲಘು ಮೋಟಾರು ವಾಹನ (ಕಾರು) ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂ. ನಿಗದಿ ಪಡಿಸಲಾಗಿದೆ. ಇದಲ್ಲದೆ ಎಲ್​ಎಲ್​ಗೆ 350 ರೂ. ಹಾಗೂ ಡಿಎಲ್​ಗೆ 1,000 ರೂ. ಪ್ರತ್ಯೇಕವಾಗಿ ಆರ್​ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್​ಗೆ 4 ಸಾವಿರ ರೂ. ಶುಲ್ಕ ಇದೆ. ಎಲ್​ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್​ಗಳು 8 ಸಾವಿರ ರೂ.ವರೆಗೆ ಅಭ್ಯರ್ಥಿಯಿಂದ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 4 ಸಾವಿರ ರೂ. ಸ್ವೀಕರಿಸುತ್ತಿದ್ದಾರೆ. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡದಂತೆ ಸಾರಿಗೆ ಇಲಾಖೆ ಎಚ್ಚರಿಕೆ ಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಶುಲ್ಕ ಏರಿಕೆ ಯಾಕೆ?ಡ್ರೖೆವಿಂಗ್ ಸ್ಕೂಲ್​ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್, ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಪರಿಗಣಿಸಿ ತರಬೇತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್​ಟಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ತಯಾರಿಸಿ 2 ವರ್ಷಗಳ ಹಿಂದೆಯೇ ಇಲಾಖೆಗೆ ಸಲ್ಲಿಸಿತ್ತು. ಈಗ ವರದಿ ಅಂಗೀಕರಿಸಿ ಶುಲ್ಕ ಜಾಸ್ತಿ ಮಾಡಲಾಗಿದೆ.
ಶುಲ್ಕ ಪರಿಷ್ಕರಣೆ, ವಾಹನ ಮೊದಲು ಈಗ (ರೂ.ಗಳಲ್ಲಿ)
ಮೋಟಾರು ಸೈಕಲ್: 2,200-3000
ಆಟೋರಿಕ್ಷಾ: 3,000-4000
ಕಾರುಗಳು: 4,000-7000
ಸಾರಿಗೆ ವಾಹನ: 6,000-9000
ಈಗಿನ ವಾಹನ ಚಾಲನೆ ಹಾಗೂ ಸಂಚಾರ ದಟ್ಟಣೆಯ ಸವಾಲುಗಳನ್ನು ಗಮನಿಸಿದರೆ ಡ್ರೖೆವಿಂಗ್ ಟ್ರೖೆನಿಂಗ್​ನ ಕೌಶಲ್ಯವೂ ಜಾಸ್ತಿಯಾಗಬೇಕು. ಅದರ ಜತೆಗೆ ಚಾಲನಾ ತರಬೇತಿ ಶುಲ್ಕವೂ ಹೆಚ್ಚಾಗಬೇಕು.
|ಎಚ್.ರಾಜಣ್ಣ, ನಿವೃತ್ತ ಆರ್​ಟಿಒ, ಸಮಿತಿ ಸದಸ್ಯರು
2013ರಲ್ಲಿ ಡ್ರೖೆವಿಂಗ್ ಶಾಲೆಗಳ ತರಬೇತಿ ಶುಲ್ಕ ಹೆಚ್ಚಿಸಲಾಗಿತ್ತು. ದರ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪರಿಗಣಿಸಿರಲಿಲ್ಲ. ಈಗ ಹೆಚ್ಚಿಸಿರುವ ಶುಲ್ಕ ತೀರಾ ಕಡಿಮೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಇನ್ನಷ್ಟು ದರ ಹೆಚ್ಚಿಸುವಂತೆ ಸಾರಿಗೆ ಆಯುಕ್ತರು ಹಾಗೂ ಕಾರ್ಯದರ್ಶಿಗೆ ಮತ್ತೆ ಮನವಿ ಸಲ್ಲಿಸುತ್ತೇವೆ.
|ಕೆ.ಸಿ. ಮಹದೇವಪ್ಪ, ರಾಜ್ಯ ಡ್ರೖೆವಿಂಗ್ ಸ್ಕೂಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ
ಸ್ಕೂಲ್​ಗಳಿಗೆ ನಿಬಂಧನೆ ಏನು?
* ಪಠ್ಯಸೂಚಿಯಂತೆ ಅಭ್ಯರ್ಥಿ ಪೂರ್ಣ ತರಬೇತಿ ಪಡೆದಾಗಲೇ ನಮೂನೆ 5ರಲ್ಲಿ ಪತ್ರ ನೀಡಬೇಕು.
* ಅಭ್ಯರ್ಥಿ ವಾಹನ ಚಾಲನೆ ಮಾಡಿದ ಸಮಯವನ್ನು ನಮೂನೆ-15ರಲ್ಲಿ ನಮೂದಿಸಬೇಕು.
* ಅಧಿಕಾರಿಗಳು ಶಾಲೆಗೆ ತಪಾಸಣೆಗೆ ಬಂದಾಗ ಎಲ್ಲ ದಾಖಲೆಗಳನ್ನು ತಪ್ಪದೇ ಒದಗಿಸಬೇಕು.
* ಶಾಲೆಯ ಪ್ರತಿನಿಧಿ ಆರ್​ಟಿಒಗೆ ಬಂದಾಗ ಸಮವಸ್ತ್ರದಲ್ಲಿರಬೇಕು. ನಾಮಫಲಕ ಧರಿಸಿರಬೇಕು.
* ಶಾಲೆಯ ಪ್ರತಿನಿಧಿ ಅಭ್ಯರ್ಥಿಯ/ಇನ್ನಿತರರ ಪರವಾಗಿ ಮಧ್ಯವರ್ತಿಯಾಗಿ ವರ್ತಿಸುವಂತಿಲ್ಲ.
* ನಿಬಂಧನೆ ಉಲ್ಲಂಘಿಸಿದಲ್ಲಿ ಶಾಲೆಯ ಅನುಜ್ಞಾ ಪತ್ರ ಅಮಾನತು ಅಥವಾ ರದ್ದುಗೊಳ್ಳುತ್ತದೆ.
ಪ್ರಯಾಣಿಕರ ಗಮನಕ್ಕೆ… ನೈರುತ್ಯ ರೈಲ್ವೇಯ 22 ರೈಲುಗಳು ಡಿ.14ರಿಂದ ಸ್ಥಗಿತ; ಇಲ್ಲಿವೆ ಪೂರ್ಣ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
