ಬೆಂಗಳೂರು: ಕ್ರೀಡೆಯಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದ್ದು, ಕ್ರೀಡಾಪಟುಗಳ ಮಾನಸಿಕ ಸ್ಥಿಮಿತತೆಯನ್ನು ಕಾಪಾಡುವುದಕ್ಕೆ ಹಾಗೂ ದೈಹಿಕ ಸದೃಢತೆಗೆ ಯೋಗ ಸಹಕಾರಿಯಾಗಿದೆ ಎಂದು ಭಾರತ ಕಬ್ಬಡ್ಡಿ ತಂಡದ ಮುಖ್ಯ ತರಬೇತುದಾರ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಇ. ಭಾಸ್ಕರನ್ ಹೇಳಿದರು.
ಉತ್ಥಾನ ಮಾಸಪತ್ರಿಕೆಯು ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2023ನೇ ಸಾಲಿನ ವಾರ್ಷಿಕ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡಾಪಟುಗಳಿಗೆ ಗಾಯಗಳಾಗುವುದು ಸಹಜ. ಸೋಲು ಗೆಲುವಿನ ಏರಿಳಿತಗಳು ಸಹಜ. ಇಂತಹ ದೈಹಿಕ ಮತ್ತು ಮಾನಸಿಕ ಗಾಯಗಳೆರಡೂ ಗುಣವಾಗುವಂತೆ ಮಾಡುವ ಶಕ್ತಿ ಯೋಗದಲ್ಲಿದೆ. ಆದ್ದರಿಂದ ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಕಡ್ಡಾಯವಾಗಿ ಯೋಗಾಭ್ಯಾಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಗಿರೀಶ್ ದೊಡ್ಡಮನಿ, ಕ್ರೀಡಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ಚಂದ್ರಶೇಖರ ಜಾಗೀರ್‌ದಾರ್, ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬೆಂಗಳೂರಿನ ಕಾವ್ಯಜೋಗಿ, ದ್ವಿತೀಯ ಬಹುಮಾನವನ್ನು ಬೆಂಗಳೂರಿನ ಇ.ಎಂ.ಸ್ವಾತಿ ತೃತೀಯ ಬಹುಮಾನವನ್ನು ಕುಮಟಾದ ಯಂಕನಗೌಡ ಪಡೆದುಕೊಂಡರು.
ಬೆಳಗಾವಿಯ ಪ್ರತೀಕ್ಷಾ ಅಶೋಕ ಜಂತಿ, ಶಿರಸಿಯ ಅಮೃತಾ ರಾಜೇಂದ್ರ ಹೆಗಡೆ, ಬೆಂಗಳೂರಿನ ನಂದಕುಮಾರ್, ಪುತ್ತೂರಿನ ಮೇಘಾ ಡಿ., ಚಿತ್ರದುರ್ಗದ ಪನ್ನಗ ಪಿ. ರಾಯ್ಕರ್, ಮೈಸೂರಿನ ದರ್ಶನ್ ಎಸ್.ಎನ್., ಬೆಂಗಳೂರಿನ ಸಹನಾ ಎಂ, ಕುಮಟಾದ ದೀಪಾ ಕೆ ಬಿ, ಮಂಗಳೂರಿನ ಶಿವಾನಿ ಬಿ ಎಸ್, ಉಡುಪಿಯ ಪೃಥ್ವಿ ನಾಯಕ್ ಮೆಚ್ಚುಗೆ ಬಹುಮಾನವನ್ನು ಪಡೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 17 =
Remember me
