ಮಂಡ್ಯ:ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿದ್ದಾನೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್.
ಕೆಲ ದಿನಗಳ ಹಿಂದೆ ಈತನ ಸಾಧನೆ ಕುರಿತು ಚರ್ಚೆ ನಡೆದಿತ್ತು. ಈತ ಹಲವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ. ಆತನ ಭಾಷಣಗಳನ್ನು ಯೂಟ್ಯೂಬ್​ನಲ್ಲಿ ಲಕ್ಷಾಂತರ ಜನ ವೀಕ್ಷಿಸಿ, ಶಹಬ್ಬಾಸ್​ಗಿರಿ ಕೊಟ್ಟಿದ್ದರು. ದೇಶಕ್ಕಾಗಿ ದೊಡ್ಡ ಕೊಡುಗೆ ನೀಡುತ್ತಿದ್ದಾನೆ, ಆತನ ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ಹಲವರು ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿದ್ದರು. ಆದರೆ, ಆತ ಅಸಲಿ ವಿಜ್ಞಾನಿಯೇ ಅಲ್ಲ. ಅಸಲಿಗೆ ಬಿಎಸ್​ಸಿ ಪದವಿಯನ್ನೂ ಪೂರ್ಣಗೊಳಿಸಿಲ್ಲ ಎಂಬ ವಿಚಾರ ಈಗ ಬಯಲಾಗಿದೆ.
‘ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನ್ನ ಡ್ರೋನ್​ಗೆ 2018ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್​ಸ್ಟೀನ್ ಚಿನ್ನದ ಪದಕ, ಅಂತಾರಾಷ್ಟ್ರೀಯ ಡ್ರೋನ್ ಎಕ್ಸ್​ಪೋದಲ್ಲಿ ಗೋಲ್ಡ್ ಮೆಡಲ್, ಸಿಬಿಟ್​ನಲ್ಲಿ ಮೊದಲ ಬಹುಮಾನ ಬಂದಿದೆ. 2017ರ ಜಪಾನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ರೋಬೋಟಿಕ್ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ನನಗೆ ಸುಮಾರು 87 ದೇಶಗಳು ಕೆಲಸಕ್ಕೆ ಆಫರ್ ನೀಡಿವೆ.
ಆದರೆ, ನನ್ನ ಸೇವೆ ಏನಿದ್ದರೂ ನನ್ನ ದೇಶಕ್ಕೆ ಮಾತ್ರ’ ಎಂದು ಪ್ರತಾಪ್ ಹೇಳುತ್ತಿದ್ದ. ಹಲವು ಬೃಹತ್ ವಿದ್ಯಾಸಂಸ್ಥೆಗಳು ಅಭಿನಂದಿಸಿ, ಆತನ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿ ಸಿದ್ದವು. ‘ಜರ್ಮನಿಗೆ ಹೋಗಲು ಹಣ ಇರಲಿಲ್ಲ. ನನ್ನ ತಾಯಿ ತಾಳಿ ಕೊಟ್ಟರು. ನಾನು 300 ಕೆಜಿ ಭಾರವನ್ನು ಡ್ರೋನ್​ನಲ್ಲಿ ಸಾಗಿಸಿದೆ…’ ಹೀಗೆ ಕಥೆ ಹೇಳುತ್ತಿದ್ದ ಪ್ರತಾಪ್, ತಾನು ತಯಾರಿಸಿರುವ ಡ್ರೋನ್​ಗಳನ್ನು ಈವರೆಗೆ ಎಲ್ಲಿಯೂ ಪ್ರದರ್ಶನ ಮಾಡಿಲ್ಲ.
ಐಷಾರಾಮಿ ಜೀವನ
‘ದೇಶಕ್ಕೆ ಕೊಡುಗೆ ನೀಡಬೇಕೆಂದು ಪಣ ತೊಟ್ಟಿದ್ದೇನೆ’ ಎಂದು ಭಾಷಣ ಬಿಗಿಯುತ್ತಿದ್ದ ಪ್ರತಾಪ್​ಗೆ ಹಣ ನೀರಿನಂತೆ ಹರಿದು ಬಂದಿದೆ. ಆತನ ಸಂಶೋಧನೆಗೆ ಸಹಾಯವಾಗಲಿ ಎಂದು ಜನತೆ ಕಣ್ಣುಮುಚ್ಚಿಕೊಂಡು ಹಣ ನೀಡಿದ್ದಾರೆ. ಹಣದ ಹರಿವು ಹೆಚ್ಚಳವಾಗುತ್ತಿದ್ದಂತೆ ಆತ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ಮನೆ ಖರೀದಿಸಿದ್ದಾನೆ. ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಯಾರಿಗೂ ಡ್ರೋನ್ ತೋರಿಸಿಲ್ಲ
ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳುವ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈತನಕ ತೋರಿಸಿಲ್ಲ.
ಕರೆ ಸ್ವೀಕರಿಸುತ್ತಿಲ್ಲ:ಪ್ರತಾಪ್​ನನ್ನು ಸಂರ್ಪಸಲು ವಿಜಯವಾಣಿ ಹಲವು ಬಾರಿ ಮೊಬೈಲ್​ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
| ಮಾದರಹಳ್ಳಿ ರಾಜು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
