ಬೆಂಗಳೂರು:ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿರುವ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್​ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತೇಲೇ ಇರುತ್ತಾರೆ. ಮರುಬಳಕೆ ವಸ್ತುಗಳಿಂದ ಡ್ರೋನ್​ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್​ ಪ್ರತಾಪ್​, ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಅವರ ವಿರುದ್ಧ ಸಾಕಷ್ಟು ಟ್ರೋಲ್​ಗಳು ಆಗಿದ್ದವು.​ ಇಂದಿಗೂ ಅವರನ್ನು ಟ್ರೋಲ್​ ಮಾಡುತ್ತಲೇ ಇರುತ್ತಾರೆ.
ಇದೀಗ ಟ್ರೋಲ್​ ಮಾಡುವವರ ವಿರುದ್ಧ ಡ್ರೋನ್​ ಪ್ರತಾಪ್​ ಕಾನೂನು ಸಮರ ಸಾರಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​ ಅವರು ಹಳ್ಳಿಗಳಿಗೆ ಹೋಗಿ ಡ್ರೋನ್​ ಪರಿಚಯ ಮಾಡಿಕೊಡುವ ಮೂಲಕ ಅವುಗಳ ಮಾರಾಟವನ್ನು ಮಾಡುತ್ತಿದ್ದಾರೆ. ಅವರು ಡ್ರೋನ್​ ಹಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಿರುತ್ತವೆ. ಅಲ್ಲದೆ, ಹಲವರು ಪ್ರತಾಪ್​ ಅವರನ್ನು ಇಂದಿಗೂ ಟ್ರೋಲ್​ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದ್ದು, ಇದೀಗ ಅವರ ವಿರುದ್ಧ ಕಾನೂನಿನ ಸಮರ ಸಾರಿದ್ದಾರೆ.
ಇದನ್ನೂ ಓದಿ:ಹೀಗೂ ಉಂಟು | ಟೈಲರ್ ಸ್ವಿಫ್ಟ್ ಹಾಡಿಗೆ ಕುಣಿದಾಡಿದ ಅಭಿಮಾನಿಗಳು; ರಿಕ್ಟರ್​ ಮಾಪಕದಲ್ಲಿ ದಾಖಲಾಯ್ತು ಭೂಕಂಪನ!
ತನ್ನ ವಿರುದ್ಧ ಟ್ರೋಲ್​ ಮಾಡಿದ ಯೂಟ್ಯೂಬರ್ಸ್​ ವಿರುದ್ಧ ಡ್ರೋನ್​ ಪ್ರತಾಪ್​, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಡ್ರೋನ್​ ಪ್ರತಾಪ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೇಮಿಸ್​ ಮಧು ಎಂಬ ಯೂಟ್ಯೂಬರ್​ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿರುವುದಾಗಿ ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, ಸಂದೀಪ್​, ಉತ್ತರ ಕರ್ನಾಟಕದ ಉಡಾಳ್​ ಪಾವ್ಯ ಮತ್ತು ದಿವ್ಯಾ ವಂಸತ ವಿರುದ್ಧ ಡ್ರೋನ್​ ಪ್ರತಾಪ್​ ಮೊಕದ್ದಮ್ಮೆ ಹೂಡಿದ್ದು, ನೋಟಿಸ್​ ಸಹ ಕಳುಹಿಸಿದ್ದಾರೆ. 30 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಕೇಳಿದ್ದಾರೆ. ನೀವು ಸುಳ್ಳಾ? ನಾನು ಸುಳ್ಳಾ? ಅಂತಾ ನೋಡೋಣ. ಬನ್ನಿ ಕೋರ್ಟಿನಲ್ಲಿ ನಿರ್ಧಾರವಾಗುತ್ತೆ. ಕೋರ್ಟಿನಲ್ಲೇ ನಿರ್ಧಾರ ಮಾಡಿಕೊಳ್ಳಿ. ಇನ್ಮೇಲೆ ನಮ್ಮ ನಿಮ್ಮ ಭೇಟಿ ಕೋರ್ಟಿನಲ್ಲಾಗುತ್ತೆ ಎಂದು ಡ್ರೋನ್​ ಪ್ರತಾಪ್​ ಸವಾಲು ಹಾಕಿದ್ದಾರೆ.
How to make money.
1. Do something dumb that gets you trolled.
2. Wait for right time.
3. File defamation case.pic.twitter.com/wdZGSRQB2j
— ಮೀಮರ್ ಮುತ್ತಣ್ಣ (@ijnani)July 28, 2023

ಡ್ರೋನ್​ ಪ್ರತಾಪ್​ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೇಗೆ ಹಣ ಮಾಡಬೇಕು? ಟ್ರೋಲ್​ ಆಗುವಂತೆ ಏನಾದರೊಂದನ್ನು ಮಾಡಿ ಮತ್ತು ಸರಿಯಾದ ಸಮಯಕ್ಕೆ ಕಾಯಿರಿ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿ ಎಂದು ಕಾಮೆಂಟ್​ ಮೂಲಕ ಡ್ರೋನ್​ ಪ್ರತಾಪ್​ ಅವರ ನಡೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.
ಮೆಟ್ರೋ ರೈಲಿನ ಒಳಗೆ ಯುವಜೋಡಿಯ ಕಿತ್ತಾಟ: ಯುವಕನನ್ನು ನೋಡಿ ಅಯ್ಯೋ ಪಾಪ ಎಂದ ನೆಟ್ಟಿಗರು!

ಉಡುಪಿ ಟಾಯ್ಲೆಟ್​ನಲ್ಲಿ ವಿಡಿಯೋ ಮಾಡಿದ ಪ್ರಕರಣ; ತಯಾರಾಗುತ್ತಾ ಮಹಿಳಾ ಪೊಲೀಸರ ಹೊಸ ತನಿಖಾ ತಂಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 1 =
Remember me
