ಬೆಂಗಳೂರು:ಬಿಗ್​ಬಾಸ್​​ ಸೀಸನ್​​ 10ರ ವಿನ್ನರ್​​ ಪಟ್ಟವನ್ನು ಮುಡಿಗೇರಿಸಿಕೊಳ್ಳುವವರು ಯಾರು ಎನ್ನುವುದನ್ನು ತಿಳಿಯಲು ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದೆ. ಬಿಗ್​ಬಾಸ್​ ಫಿನಾಲೆ ವೀಕ್​ನಲ್ಲಿ 5 ಮಂದಿ ಸ್ಪರ್ಧಿಗಳು ಇದ್ದಾರೆ. ಆದರೆ ಈ ಸ್ಪರ್ಧಿಗಳ ಪೈಕಿ ಇಬ್ಬರ ಕುರಿತಾಗಿ ಒಂದು ವಿಚಾರ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಚರ್ಚೆಯಲ್ಲಿದೆ. ಅದೇನಪ್ಪಾ ಅಂತಾ ನೋಡುವುದಾದರೆ….
ಕಾರ್ಯಕ್ರಮ ಪ್ರಾರಂಭಿಸುವ ಮೊದಲು ಬಿಗ್​ಬಾಸ್​​ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಗ್​ನಲ್ಲಿರುವ ಕೆಲವು ಸೆಲೆಬ್ರೆಟಿಗಳನ್ನು ಪತ್ತೆ ಹಚ್ಚಿ ಅವರ ಕುರಿತಾಗಿ ಕೆಲವು ರಿಸರ್ಚ್​​ ಮಾಡಿ ದೊಡ್ಡಮನೆಗೆ ಕರೆತರಲಾಗುತ್ತದೆ. ಹೀಗೆ ಮನೆಯೊಳಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಗೆಲ್ಲಲೆ ಬೇಕು ಎನ್ನುವ ಹಠದಿಂದ ಟಾಸ್ಕ್​, ಡ್ರಾಮಾ, ಸಿಂಪತಿ, ಗೆಳತನ, ಪ್ರೀತಿ, ಎನ್ನುವ ಮುಖವಾಡ ಹಾಕಿಕೊಂಡು ಆಟ ಶುರು ಮಾಡುತ್ತಾರೆ. ಇದನ್ನು ಟಿವಿಯಲ್ಲಿ ನೋಡುವ ವೀಕ್ಷಕ ತಮ್ಮ ನೆಚ್ಚಿನ ಆಟಗಾರ ಯಾರು ಅವರಿಗೆ ಸಪೋರ್ಟ್​​ ಮಾಡುತ್ತಾ ಅವರನ್ನು ಮೆನೆಯಲ್ಲಿಯೇ ಉಳಿಸಲು ವೋಟ್​ ಮಾಡುತ್ತಾ ಬರುತ್ತಾನೆ. ಪೈನಲ್ ಆಗಿ ಯಾರು ಉಳಿತಾರೆ ಅವರಿಗೆ ಬಿಗ್​ಬಾಸ್​ ಕಪ್​, ನಗದು ಬಹುಮಾನ ನೀಡಲಾಗುತ್ತದೆ. ಬಿಗ್​ಬಾಸ್​​ನಿಂದ ಹೊರ ಬಂದ ಮೇಲೆ ಇವರಿಗೆ ನಟನೆಯ ಹಲವಾರು ಅವಕಾಶಗಳು ಒದಗಿ ಬಂದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ.
ಬಿಗ್​ಬಾಸ್​ ಸ್ಪರ್ಧಿಗಳು ಮನೆಯೊಳಗೆ ಯಾವ ರೀತಿ ಆಟ ಆಡ್ತಾ ಇದ್ದಾರೆ ಅನ್ನೋದನ್ನ ಪ್ರತಿನಿತ್ಯ ಜನರು ನೋಡ್ತಾನೆ ಇರ್ತಾರೆ. ಆ ಪ್ರಕಾರ ಜನರಿಗೆ ಗೆಲ್ಲುವವರು ಯಾರು ಎಂಬ ಒಂದು ಸಂಭವನೀಯ ಸ್ಪರ್ದಿಗಳ ಲಿಸ್ಟ್​ ಸಿಕ್ಕಿರುತ್ತದೆ. ಹೀಗೆ ಬಿಗ್​ಬಾಸ್​​ ಸೀಸನ್​​ 10ರ ಟಾಪ್​ 5 ಪಟ್ಟಿಯಲ್ಲಿ ಸಂಗೀತಾ, ತುಕಾಲಿ ಸಂತೋಷ್​, ವರ್ತೂರ್​​ ಸಂತೋಷ್​, ವಿನಯ್‌ ಗೌಡ ​, ಕಾರ್ತಿಕ್​,ಡ್ರೋನ್‌ ಪ್ರತಾಪ್‌ ಇದ್ದಾರೆ. ಇವರಲ್ಲಿ ಬಿಗ್​ಬಾಸ್​ ಕಪ್​ನಾ ಮನೆಗೆ ತಗೊಂಡು ಹೋಗುವುದು ಯಾರು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಾಗ ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಬಿಗ್​ಬಾಸ್​ಗೆ ಬರಲ್ಲ ಎಂದು ಹೇಳಿ ಹೇಳಿ ಫೈನಲ್​ ತಲುಪಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಈ ಹಿಂದೆ ಸಂಗೀತಾ ಶೃಂಗೇರಿ ಅವರನ್ನು ಬಿಗ್​ಬಾಸ್​​ ಮನೆಗೆ ಹೋಗ್ತಿರಾ? ಎಂದು ಕೇಳಿದ್ದಕ್ಕೆ ಇಲ್ಲ ಸಾಧ್ಯವೆ ಇಲ್ಲ.. ಎಷ್ಟೇ ಕೋಟಿ ಕೊಟ್ಟರು ಹೋಗಲ್ಲ.. ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದರು.
ಬಿಗ್​ಬಾಸ್​​ ಮನೆಗೆ ಪ್ರತಾಪ್​​ ಹೋಗ್ತಾರೆ ಎನ್ನುವ ಸುದ್ದಿ ಇದೆ ಎಂದು ನಿರೂಪಕರೊಬ್ಬರು ಹೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್​​.. ಬಿಗ್​ಬಾಸ್​ ತಂಡ ನನ್ನನ್ನು ಸಂಪರ್ಕಿಸಿತ್ತು. ಆದರೆ ನನಗೆ ಇಂಟ್ರಸ್ಟ್​​ ಇಲ್ಲ. ನನಗೆ ಮಾಡಲು ತುಂಬ ಕೆಲಸ ಇದೆ. ತಿಂಗಳಾನುಗಟ್ಟಲೆ ಒಂದೆ ಕಡೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಬಿಗ್​ಬಾಸ್​​ ಮನೆಗೆ ನಾನು ಹೋಗಲ್ಲ..ಹೋಗಲ್ಲ ಎಂದು ಹೇಳಿದ ಡ್ರೋನ್​​ ಪ್ರತಾಪ್​​ ಹಾಗೂ ಶೃಂಗೇರಿ ಇಂದು ಪೈನಲ್​​ ಪಟ್ಟಿಯಲ್ಲಿದ್ದಾರೆ. ಈ ಕುರಿತಾಗಿ ನೆಟ್ಟಿಗರು ಈ ಇಬ್ಬರು ಹೇಗೆ ಬಿಗ್​ಬಾಸ್​​ ಮನೆಯೊಳಗೆ ಹೋದ್ರು? ಫೈನಲಿಸ್ಟ್​​ ಕೂಡಾ ಆಗಿದ್ದಾರೆ ಹೇಗೆ ಸಾಧ್ಯ? ಇವ್ರನ್ನ ನಂಬುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.
ನಿನ್ನೆ ಬಿಗ್​ಬಾಸ್​​ ಮನೆಯೊಳಗೆ ಮಾಧ್ಯಮಮಿತ್ರರಾಗಿ ಎಂಟ್ರಿ ಕೊಟ್ಟಿರುವ ಜಾನ್ಹವಿ ಕಾರ್ತಿಕ್​​ ಹಾಗೂ ಕಿರಿಕ್​ ಕೀರ್ತಿ ಟಾಪ್​ 5 ಸ್ಪರ್ಧಿಗಳಿಗೆ ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಪ್ರತಾಪ್​ ಹಾಗೂ ಸಂಗೀತಾಗೆ ಬಿಗ್​ಬಾಸ್​ ಬರಲ್ಲ ಅಂತಾ ಹೇಳಿ ಬಿಗ್​ಬಾಸ್​ಗೆ ಬಂದಿದ್ದೀರಾ ಎಂದು ಕೇಳಿದ್ದಾರೆ? ಈ ಪ್ರಶ್ನೆಗೆ ಉತ್ತರಿಸಿದ ಸಂಗೀತಾ ಹೀಗೆ ಇರುತ್ತೆ ಅಂತಾ ಗೊತ್ತಿರಲಿಲ್ಲ.. ಇದೊಂದು ಹೊಸ ಪ್ರಪಂಚ.. ನಾನೂ ಇಲ್ಲಿಯ ನೆನಪುಗಳನ್ನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ.
ಪ್ರತಾಪ್​ ಮಾತನಾಡಿ, ಈ ಹಿಂದೆ ಕೂಡಾ ಬಿಗ್​ಬಾಸ್​​ ತಂಡನನ್ನು ಕಾಂಟೆಕ್ಟ್​​ ಮಾಡಿತ್ತು. ನಾನು ಒಪ್ಪಿರಲಿಲ್ಲ. ಆದರೆ ಈ ಬಾರಿ ಹ್ಯಾಪಿ ಬಿಗ್​ಬಾಸ್​​ ಅಂತಾ ಹೇಳಿದ್ದಕೆ ನಾನು ಬಂದೆ. ತುಂಬಾ ಬದಲಾವಣೆ ತಂದಿದೆ ಈ  ಬಿಗ್​ಬಾಸ್​​ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
