ಬೆಂಗಳೂರು:ಡ್ರೋನ್​ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್​ ಪ್ರತಾಪ್​ ಇಂದು ತೀವ್ರ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಪ್ರತಾಪ್​ ವಿರುದ್ಧ ದೂರು ದಾಖಲಾಗಿ, ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದರ ನಡುವೆ ಟ್ವಿಟರ್​ನಲ್ಲಿ ಸಕ್ರೀಯರಾಗಿರುವ ಪ್ರತಾಪ್​, ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವ ಮೂಲಕ ಹಾಗೂ ತಮ್ಮ ಸಾಧನೆಗಳನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ಸಾರ್ವಜನಿಕ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಸ್ಟೇವ್​ ಹಫ್​ ಯಾರು? ಸುಶಾಂತ್​ ಆತ್ಮದ ಜತೆ ಸಂಪರ್ಕ ಸಾಧಿಸಿದ್ಹೇಗೆ?: ಇಲ್ಲಿದೆ ಕುತೂಹಲಕರ ಸಂಗತಿ!
ತನ್ನನ್ನು ತೆಗಳುತ್ತಿರುವ ಜನರಿಗೆ ನಿನ್ನೆ ಪ್ರತಾಪ್ ಸವಾಲೊಂದನ್ನು ಎಸೆದಿದ್ದಾರೆ. ಇಂದು ಅನೇಕ ಜನರು ನನ್ನನ್ನು ನಕಲಿ ಎಂದು ಕರೆಯುತ್ತಿದ್ದಾರೆ. ನಾನಿಂದು ಸವಾಲು ಹಾಕುತ್ತೇನೆ. ಅದೇ ಜನರು ಒಂದು ದಿನ ಪಶ್ಚಾತಾಪ ಪಡುತ್ತಾರೆ ಎಂದಿದ್ದಾರೆ. ​
ಪ್ರತಾಪ್​ ಟ್ವೀಟ್​ಗೆ ಕೆಲ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ನಿನ್ನಲ್ಲೂ ಪಾಸಿಟಿವ್ ವಿಚಾರಗಳಿವೆ. ಆತ್ಮವಿಶ್ವಾಸ ಹಾಗೂ ನೀನು ಉತ್ತಮ ವಾಗ್ಮಿ. ಆದರೆ ಅವುಗಳನ್ನೆಲ್ಲ ಜನರನ್ನು ಮರಳು ಮಾಡೋಕೆ ಬಳಸಿದ್ದೀಯಾ, ಒಂದು ಸುಳ್ಳು ಮುಚ್ಚುವುದಕ್ಕೆ ನೂರು ಸುಳ್ಳು ಹೇಳಿ ಬೆತ್ತಲೆಯಾಗಿದ್ದೀಯಾ, ಈಗಿನ ಸ್ಥಿತಿ ಅರಿತು ಮೊದಲು ಬದಲಾಗು, ನಿನ್ನನ್ನು ಕಸಕ್ಕಿಂತ ಕೀಳಾಗಿ ನೋಡ್ತಿದ್ದಾರೆ ಎಂದು ಬುದ್ದಿಮಾತು ಹೇಳಿದ್ದಾರೆ.
ತಮ್ಮ ನಿನ್ನಲ್ಲಿ ಟ್ಯಾಲೆಂಟ್ ಇರಬಹುದು ಆದ್ರೆ, ಅದನ್ನು ತೋರಿಸೋದು ಬಿಟ್ಟು ನಿನ್ನ ಅಹಂ ತೋರಿಸಿ ಜನರನ್ನು ಇನ್ನೂ ಕೆರಳಿಸೋಕೆ ಹೋಗ್ಬೇಡ. ಜನರಿಗೆ ನೀನು ಬೇರೆ ಬೇರೆ ದೇಶಕ್ಕೆ ಹೋಗಿರೋದು ಬೇಕಾಗಿಲ್ಲ. ನೀನೇ ಹೇಳ್ಕೊಂಡು ತಿರಿಗಿರೋದನ್ನು ಸಾಬೀತು ಮಾಡು ಅಂತ ಕೇಳ್ತಿದ್ದಾರೆ ಎಂದು ತಿಳಿಹೇಳಿದ್ದಾರೆ.
ಇದನ್ನೂ ಓದಿ:ಹಿಂದುಳಿದ ಸಮುದಾಯಗಳಿಗೆ ಮೀಸಲು ಮುಂದುವರಿಸಲು ಒತ್ತಾಯಿಸಿ ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ
https://twitter.com/PratapNM/status/1286269201896751104?s=20
ಈ ಅದ್ಭುತ ಚಿತ್ರ ಸೆರೆಹಿಡಿಯಲು ಫೋಟೋಗ್ರಾಫರ್ ಕಬಿನಿ​ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
