ಬೆಂಗಳೂರು:ಮರುಬಳಕೆ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಹೇಳಿ ಪ್ರಸಿದ್ಧಿಯ ಶಿಖರವೇರಿ ಇತ್ತೀಚೆಗಷ್ಟೆ ನಿಜ ಬಣ್ಣ ಬಯಲಾಗಿರುವ ಡ್ರೋನ್ ಪ್ರತಾಪ್ ಹೆಸರಿನಲ್ಲಿ ಫ್ಯಾನ್ಸ್ ಕ್ಲಬ್ ಒಂದು ಫೇಸ್‌ಬುಕ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಈ ವರ್ಷದ ಜನವರಿಯಲ್ಲೇ ಜೀವ ತಳೆದಿದ್ದರೂ ಡ್ರೋನ್ ಪ್ರತಾಪ್‌ನ ಕುರಿತು ಫ್ಯಾಕ್ಟ್ ಚೆಕ್ ವರದಿ ಪ್ರಕಟವಾದ ನಂತರ, ಅಂದರೆ ಕಳೆದ 3-4 ದಿನಗಳಿಂದ ಚುರುಕಾಗಿದೆ.
ಇದನ್ನೂ ಓದಿ:ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?
ಮೇ-ಜೂನ್‌ವರೆಗೆ ಆಗೊಂದು ಈಗೊಂದು ಪೋಸ್ಟ್ ಅಪ್‌ಡೇಟ್ ಆಗುತ್ತಿದ್ದ ಈ ಪೇಜ್‌ನಲ್ಲಿ ಕೆಲವು ದಿನಗಳಿಂದ ದಿಢೀರನೆ ಪ್ರತಾಪ್ ಪರ ಪೋಸ್ಟ್‌ಗಳು ಪದೇಪದೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಆ ಪೇಜ್ ಫಾಲೋ ಮಾಡುತ್ತಿರುವವರಲ್ಲಿ ಅನುಮಾನ ಹುಟ್ಟಿಕೊಂಡಿದೆ. ಈ ಪೇಜನ್ನು ಪ್ರತಾಪ್ ಅಭಿಮಾನಿಗಳು ನಿರ್ವಹಿಸುತ್ತಿದ್ದಾರೋ ಅಥವಾ ಸ್ವತಃ ಪ್ರತಾಪ್ ಎಲ್ಲೋ ಅಜ್ಞಾತ ಸ್ಥಳದಲ್ಲಿ ಕುಳಿತು ನಿರ್ವಹಿಸುತ್ತಿದ್ದಾನೋ ಎಂಬ ಶಂಕೆ ಕಾಡಿದೆ. ಇದನ್ನು ನೆಟ್ಟಿಗರು ಅದೇ ಪೇಜ್‌ನಲ್ಲಿ ಪ್ರಶ್ನಿಸುತ್ತಿರುವುದು ಗಮನಾರ್ಹವಾಗಿದೆ.

ವಿವಿಧ ಕಾಲೇಜು-ಮಠಗಳಲ್ಲಿ ಮಾಡಿದ ಸನ್ಮಾನಗಳು, ಪ್ರೇರಣಾತ್ಮಕ ಭಾಷಣಗಳ ವಿಡಿಯೋ, ಪ್ರಶಂಸಾತ್ಮಕವಾಗಿ ಬರೆದ ಪತ್ರಿಕಾವರದಿಗಳ ತುಣುಕುಗಳು, ವಿದೇಶಕ್ಕೆ ಹೋದಾಗ ತೆಗೆಸಿಕೊಂಡ ಫೋಟೋಗಳು, ಅಲ್ಲಿಯ ಭಾರತೀಯರನ್ನು ಭೇಟಿ ಮಾಡಿದ ವಿಡಿಯೋ ಮುಂತಾದವುಗಳನ್ನು ಇಲ್ಲಿ ಈಗ ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುತ್ತಿದೆ. ಈಗ ಸ್ವಲ್ಪ ಹೊತ್ತಿಗೆ ಮೊದಲು ಈ ಪೇಜ್‌ನಲ್ಲಿ ಕೋವಿಡ್‌ಕೇರ್ ಹೆಲ್ಪ್‌ಲೈನ್ ನಂಬರ್‌ಗಳನ್ನೂ ಅಪ್‌ಡೇಟ್ ಮಾಡಲಾಗಿದೆ. ಇದಕ್ಕೆ ಜನರು ಅಲ್ಲೇ ಚಳಿ ಬಿಡಿಸುತ್ತಿದ್ದಾರೆ.
ಇದನ್ನೂ ಓದಿ: ಕೆರೆ ಕಾಮೇಗೌಡರ ಕಿರಿಕ್​ಗೆ ಸಿಡಿದೆದ್ದ ದಾಸನದೊಡ್ಡಿ ಜನತೆ

‘‘ಈ ಪೇಜ್ ನೋಡಿದ್ರೆ ಇದನ್ನು ನೀನೇ ಎಲ್ಲೋ ಕೂತ್ಕೊಂಡು ನೋಡ್ಕೊತಾ ಇದೀಯಾ ಅನ್ಸುತ್ತೆ. ಬೇರೆ ಯಾರೋ ಅಭಿಮಾನಿಗಳು ಮಾಡಿದ ಪೇಜ್ ಅಲ್ಲ ಇದು… ಯಾರೂ ಅಭಿಮಾನಿಗಳೇ ಇಲ್ಲ…’’ ಎಂದು ಮುಂತಾಗಿ ಜನರು ಪ್ರಶ್ನಿಸುತ್ತಿದ್ದಾರೆ. ‘‘ಆಗಲೇ ನಾಲ್ಕು ದಿನ ಆಯ್ತು, ಇನ್ನೂ ಯಾವಾಗ ನಿನ್ನ ಸರ್ಟಿಫಿಕೇಟ್‌ಗಳನ್ನು ತೋರಿಸ್ತೀಯಾ? ಯಾವಾಗ ಹೊರಗೆ ಬರ‌್ತೀಯಾ?’’ ಎಂದೂ ಕೇಳುತ್ತಿದ್ದಾರೆ. ಇದೆಲ್ಲಕ್ಕೂ ಕೆಲವೆಡೆ ಉತ್ತರ ಬರುತ್ತಿದೆ. ಇನ್ನುಳಿದಂತೆ ಮೌನವೇ ಉತ್ತರವಾಗಿದೆ.
https://www.facebook.com/104320387787312/photos/a.104594584426559/182448123307871/?type=3&theater
ಇದೊಂದು ಷಡ್ಯಂತ್ರ: ಡ್ರೋನ್​ ಪ್ರತಾಪ್​, ಕೆರೆ ಕಾಮೇಗೌಡರ ಬೆಂಬಲಕ್ಕೆ ನಿಂತವರ‍್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
