ದಾವಣಗೆರೆ:ನಕಲಿ ವಿಜ್ಞಾನಿ ಎಂಬುದು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಡ್ರೋನ್​ ಪ್ರತಾಪ್​ಗೆ ಹೀಗೆಲ್ಲಾ ಆಗುತ್ತೆ ಎಂದು ಈ ಮೊದಲೇ ತಿಳಿದಿತ್ತಂತೆ. ಈ ವಿಚಾರವನ್ನು ದಾವಣಗೆರೆಯ ಹೋಟೆಲ್​ ಮಾಲೀಕರೊಬ್ಬರು ದಿಗ್ವಿಜಯ ನ್ಯೂಸ್​ಗೆ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?
ಜುಲೈ 1ರಿಂದ 8ರವರೆಗೆ ದಾವಣಗೆರೆ ನಗರದ ಅರುಣಾ ಸರ್ಕಲ್ ಸಮೀಪದ ಶ್ರೀಗಂಧ ರೆಸಿಡೆನ್ಸಿಯಲ್ಲಿ ಪ್ರತಾಪ್​ ತಂಗಿದ್ದರು. ಈ ವೇಳೆ ಮಾತನಾಡಿದ್ದ ಪ್ರತಾಪ್​, ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮಾಡಿ ನನಗೆ ಕೆಲಸದ ಆಫರ್ ಕೊಟ್ಟಿದ್ದರು, ನಾನು ನಿರಾಕರಿಸಿದ್ದೆ. ಇನ್ನೊಂದು ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಟೀಕೆಗಳು ಬರುತ್ತವೆ ನೋಡ್ತಿರಿ ಎಂದು ಪ್ರತಾಪ್​ ಹೇಳಿದ್ದಾಗಿ ಹೋಟೆಲ್​ ಮಾಲೀಕ ವಿನಾಯಕ್​ ಅವರು ಮಾಹಿತಿ ನೀಡಿದ್ದಾರೆ.

ಎಂಟು ದಿನಗಳು ಹೋಟೆಲ್​ನಲ್ಲಿ ತಂಗಿದ್ದ ಪ್ರತಾಪ್​, 8ನೇ ತಾರೀಖಿನಂದು ಬೆಂಗಳೂರಿಗೆ ಹೊರಟರು ಎಂದು ಮಾಲೀಕರು ತಿಳಿಸಿದ್ದಾರೆ. ಹೋಟೆಲ್​ನಲ್ಲಿ​ ತಂಗಿದ್ದ ಸಮಯದ ನಡುವೆ ಪ್ರತಾಪ್​, ಶಿವಮೊಗ್ಗ ಹಾಗೂ ರಾಣೇಬೆನ್ನೂರ್​ಗೂ ಪ್ರಯಾಣ ಬೆಳೆಸಿದ್ದರಂತೆ. ಆದರೆ, ಯಾವ ಉದ್ದೇಶಕ್ಕೆ ತೆರಳಿದ್ದರು ಎಂಬುದನ್ನು ಬಹಿರಂಗಪಡಿಸಲಿಲ್ಲ ಎನ್ನತ್ತಾರೆ ವಿನಾಯಕ್​.
ರಾತ್ರಿಯೆಲ್ಲ ವಿದೇಶಿಗರಿಗೆ ಆನ್​ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ನಿದ್ರಿಸಲು ಸಮಯ ಇರುವುದಿಲ್ಲ. ನಾನು ಮಲಗುವುದು ಬೆಳಗ್ಗೆ 4 ಗಂಟೆಯಾಗುತ್ತದೆ ಎಂದೆಲ್ಲಾ ಹೋಟೆಲ್​ ಮಾಲೀಕರ ಜತೆ ಪ್ರತಾಪ್​ ಹೇಳಿಕೊಂಡಿದ್ದಾರೆ.​​

ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್
ಮಾಲೀಕರ ಜತೆ ಕುಳಿತು ಊಟ ಮಾಡುವಾಗ ಈ ಎಲ್ಲ ವಿಚಾರಗಳು ಪ್ರಸ್ತಾಪವಾಗಿವೆ. ಅಲ್ಲದೆ, ವಿಡಿಯೋವೊಂದರಲ್ಲಿ ಹೋಟೆಲ್​ ಬಗ್ಗೆಯೂ ಮಾತನಾಡಿರುವ ಪ್ರತಾಪ್​, ಇಲ್ಲಿ ಎಲ್ಲಾ ಸೇವೆಗಳು ಚೆನ್ನಾಗಿವೆ. ಒಮ್ಮೆ ಭೇಟಿ ನೀಡಿ ಎಂತಲೂ ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ದಿಢೀರನೇ ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ವೈರಲ್​ ಪೋಸ್ಟ್​ ಮಾಯ: ಏನಿದರ ಮರ್ಮ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 2 =
Remember me
