ಬೆಂಗಳೂರು:ಬಿಗ್​ಬಾಸ್​ ಸೀಸನ್​-10ರ ಸ್ಪರ್ಧಿ, ವಾಣಿಜ್ಯೋದ್ಯಮಿ ಡ್ರೋನ್​ ಪ್ರತಾಪ್​ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಇವರ ಕಾರ್ಯವು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಹಿಂದೆ ಬಿಗ್​ಬಾಸ್​ ವೇದಿಕೆಯಲ್ಲಿ ಅವರ ಆಡಿದ ಮಾತಿನ ಪ್ರಕಾರ ಮನೆಯಿಂದ ಹೊರಬಂದ ಬಳಿಕ ಸಾಮಾಜಿಕ ಕೆಲಸ ಮಾಡುತ್ತಿರುವ ಪ್ರತಾಪ್​ ಇದೀಗ ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ.
ಜೂನ್​ 11ರಂದು ಜನ್ಮದಿನ ಆಚರಿಸಿಕೊಂಡ ಪ್ರತಾಪ್​ ಅಂದು ಬಡವರಿಗೆ ಕಣ್ಣಿನ ಆಪರೇಶನ್ ಮಾಡಿಸುವೆ ಎಂದು ಹೇಳಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವೆ ಎಂದು ಹೇಳಿದ್ದರು. ಇದೀಗ ಪ್ರತಾಪ್​ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.
View this post on InstagramA post shared by Prathap N M (@droneprathap)

A post shared by Prathap N M (@droneprathap)
ಇದನ್ನೂ ಓದಿ:ಬೆಂಗಳೂರು ಲೇಡಿಸ್​ ಪಿಜಿಯಲ್ಲಿ ಹತ್ಯೆ ಪ್ರಕರಣ; ಮಧ್ಯಪ್ರದೇಶದಲ್ಲಿ ಆರೋಪಿ ಅರೆಸ್ಟ್
ಡಾ ರಾಜ್ ಕುಮಾರ್ ಅವರು ನೇತ್ರದಾನ ಮಹಾದಾನ ಅಂತ ಹೇಳುತ್ತಾರೆ. ಈ ಬಾರಿ ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿ ನಾನು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಐದು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದುಕೊಂಡಿದ್ದೇನೆ ಎಂದು ಟ್ರೋನ್​ ಪ್ರತಾಪ್​ ತಮ್ಮ ಜನ್ಮದಿನದಂದು ಹೇಳಿದ್ದರು.
ಅದರಂತೆ ಇಬ್ಬರು ಮಕ್ಕಳಿದ್ದರೂ ಕೂಡ ಗುಡಿಸಿಲಿನಲ್ಲಿ ಇದ್ದುಕೊಂಡು ವಾಸ ಮಾಡುತ್ತಿದ್ದ ಬಡ ಅಜ್ಜಿಯ ಕಣ್ಣಿನ ಆಪರೇಶನ್ ಮಾಡಿಸಿದ್ದಾರೆ. ಆ ಅಜ್ಜಿಯು ಪ್ರತಾಪ್ ಅವರನ್ನು ಹರಿಸಿದ್ದು, ನನಗೆ ಈಗ ಸರಿಯಾಗಿ ಕಣ್ಣು ಕಾಣುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಡ್ರೋನ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟುದಿನ ನನಗೆ ಒಬ್ಬ ಮೊಮ್ಮಗ ಇದ್ದನು, ಈಗ ಇನ್ನೊಬ್ಬ ಮೊಮ್ಮಗನಾಗಿ ನೀನು ಇದ್ದೀಯಾ. ನನಗೆ ನಿಜವಾಗಿಯೂ ಖುಷಿಯಾಗಿದೆ, ನಿನಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ ಎಂದು ಅಜ್ಜಿ ಡ್ರೋನ್​ ಪ್ರತಾಪ್​ಗೆ ಹಾರೈಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + thirteen =
Remember me
