ಬೆಂಗಳೂರು:ಮಿಕ್ಸಿ ಹಾಗೂ ಟಿವಿ ಬಿಡಿ ಭಾಗಗಳಿಂದ ಸುಮಾರು 600 ಡ್ರೊನ್​ಗಳನ್ನು ತಯಾರಿಸಿದ್ದೇನೆಂದು ಹೇಳಿ ಜನಮನ್ನಣೆ ಗಳಿಸಿ, ಇದೀಗ ನಕಲಿ ವಿಜ್ಞಾನಿ ಎಂಬ ಕುಖ್ಯಾತಿ ಗಳಿಸಿರುವ ಡ್ರೋನ್​ ಪ್ರತಾಪ್​, ತಮ್ಮ ಸಾಧನೆಯನ್ನು ಸಾಬೀತುಪಡಿಸಲು ಕೊನೆಗೂ ಸಮಯ ನಿಗದಿ ಮಾಡಿದ್ದಾರೆ.
ಕನ್ನಡದ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಇಂದು ರಾತ್ರಿ ಏಳು ಗಂಟೆಗೆ ಲೈವ್​ ಬರುವುದಾಗಿ ಪ್ರತಾಪ್​ ಒಂದು ಗಂಟೆ ಹಿಂದಷ್ಟೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ. ಸಾಕ್ಷಿಯೊಂದಿಗೆ ನಾನು ಲೈವ್​ನಲ್ಲಿ ಬರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮರುಬಳಕೆ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಹೇಳಿ ಪ್ರಸಿದ್ಧಿಯ ಶಿಖರವೇರಿದ್ದ ಪ್ರತಾಪ್​ ನಿಜಬಣ್ಣ ಇತ್ತೀಚೆಗಷ್ಟೆ ಫ್ಯಾಕ್ಟ್​ಚೆಕ್​ ವರದಿಯಿಂದ ಬಯಲಾಗಿತ್ತು. ಪ್ರತಾಪ್​ ಯಾವುದೇ ಡ್ರೋನ್​ ಕಂಡುಹಿಡಿದಿಲ್ಲ. ಆತನ ಹೆಸರಲ್ಲಿ ಪ್ರಶಸ್ತಿಗಳು ಇಲ್ಲ. ಅಲ್ಲದೆ, ಡಿಗ್ರಿಯಲ್ಲಿ ಎರಡು ವಿಷಯ ಬಾಕಿ ಇದೆ. ಎಲ್ಲಿಯೂ ತಾನು ತಯಾರಿಸಿದ ಡ್ರೋನ್​ ಪ್ರದರ್ಶನ ಮಾಡಿಲ್ಲ ಹೀಗೆ ಸಾಕಷ್ಟು ಆರೋಪಗಳ ಕೇಳಿಬಂದಿದ್ದವು.
ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್​ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಅನೇಕ ನೆಟ್ಟಿಗರು ಪ್ರತಾಪ್​ ಬಳಿ ಸಾಕ್ಷಿ ಕೇಳಿದ್ದರು. ಇದೀಗ ಅದಕ್ಕೆಲ್ಲ ಉತ್ತರ ಎಂಬಂತೆ ಇಂದು ಏಳು ಗಂಟೆಗೆ ಕನ್ನಡ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಲೈವ್​ ಬರುವುದಾಗಿ ಪ್ರತಾಪ್​ ಹೇಳಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fifteen =
Remember me
