ಬೆಂಗಳೂರು:ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ 120 ತಾಲೂಕುಗಳಲ್ಲಿ ಬರ ಆವರಿಸಿದೆ. ಬಹಳಷ್ಟು ಕಡೆ ಬಿತ್ತಿದ ಬೆಳೆಗಳು ಒಣಗಲಾರಂಭಿಸಿವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ವಿವರಿಸಿದರು. ಕೇಂದ್ರ ಸರ್ಕಾರ ವಿಧಿಸಿದ ಮಾನದಂಡಗಳ ಪ್ರಕಾರ ತಕ್ಷಣಕ್ಕೆ ಬರ ಘೋಷಣೆ ಅಸಾಧ್ಯ. ಬರ ಘೋಷಣೆಗೆ ನಿರ್ದಿಷ್ಟ ಮಾರ್ಗಸೂಚಿ, ಅರ್ಜಿ ನಮೂನೆಯನ್ನು ಒದಗಿಸಿದೆ.
ಆ ಪ್ರಕಾರ ಬರಪೀಡಿತ ತಾಲೂಕುಗಳ ಆಯ್ದ 10 ಗ್ರಾಮಗಳಲ್ಲಿ ತಲಾ ಐದು ಬೆಳೆಗಳ ಸ್ಥಳ ಸಮೀಕ್ಷೆ ನಡೆಸಿ, ಶೇ.60ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಬರಪೀಡಿತವೆಂದು ಪರಿಗಣಿಸಬೇಕಾಗುತ್ತದೆ ಎಂದರು.
ಕಳವಳಕಾರಿ ಸ್ಥಿತಿ:ಮುಂಗಾರು ಹಂಗಾಮಿನ ಗುರಿಗೆ ಹೋಲಿಸಿದರೆ ಬಿತ್ತನೆ ಕಡಿಮೆಯಾಗಿದೆ. ಬಿತ್ತಿದ ಬೆಳೆಗಳು ಬಹಳಷ್ಟು ಕಡೆಗಳಲ್ಲಿ ಒಣಗಲಾರಂಭಿಸಿದ್ದು, ಬರ ಪರಿಹಾರ ಕ್ರಮಕೈಗೊಳ್ಳಲು ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ 30ರವರೆಗೂ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಲಿದೆ. ಸಂಭಾವ್ಯ ಕಳವಳಕಾರಿ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಕುಡಿಯುವ ನೀರಿನ ಅಭಾವ ತಲೆದೋರಿದ ಗ್ರಾಮಗಳು, ನಗರ-ಪಟ್ಟಣಗಳ ವಾರ್ಡ್​ಗಳಲ್ಲಿ ಪರ್ಯಾಯ ವ್ಯವಸ್ಥೆಯಾಗಿದೆ. ಕೆಲ ತಾಲೂಕುಗಳಲ್ಲಿ 15 ವಾರಗಳು, ಇನ್ನೂ ಕೆಲವು ತಾಲೂಕುಗಳಲ್ಲಿ 34 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನಿದೆ ಎಂದು ತಿಳಿಸಿದ್ದಾರೆ.
ವಸ್ತುನಿಷ್ಠ ಪತ್ರವೆಂಬ ಅನಿಸಿಕೆ:ತಾಪಮಾನ ಬದಲಾವಣೆ, ಮಳೆ ಏರುಪೇರು, ವ್ಯಾಪಕತೆಯಲ್ಲಿ ವ್ಯತ್ಯಾಸ ಪರಿಗಣಿಸಿ ಬರ ಘೋಷಣೆಗೆ 2020ರ ಮಾನದಂಡ ಬದಲಾವಣೆ ಕೋರಿ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರ ಉತ್ತರಿಸಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು. ಆದರೆ, ಕೇಂದ್ರ ಕೃಷಿ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ ಅಂಶಗಳು ವಸ್ತುನಿಷ್ಠವಾಗಿವೆ. ಕೇಂದ್ರದ ಅಧಿಕಾರಿಗಳು ಈ ಅಭಿಪ್ರಾಯವನ್ನು ನಮ್ಮ ಅಧಿಕಾರಿಗಳ ಜತೆಗೆ ಅನೌಪಚಾರಿಕವಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ನೀಡಿದ ನಿರ್ದಿಷ್ಟ ಅರ್ಜಿ ನಮೂನೆಯಂತೆ ಬರಪೀಡಿತ ತಾಲೂಕುಗಳಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಜಂಟಿಯಾಗಿ ಸ್ಥಳ, ಬೆಳೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. 75 ತಾಲೂಕುಗಳ ಆಯ್ದ 10 ಗ್ರಾಮಗಳಲ್ಲಿ ತಲಾ ಐದು ಬೆಳೆಗಳ ಸಮೀಕ್ಷೆ ನಡೆಯಲಿದ್ದು, 10 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
| ಕೃಷ್ಣಬೈರೇಗೌಡ, ಕಂದಾಯ ಸಚಿವ
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೊಸದಾಗಿ ಅದರಲ್ಲೂ ನೀರಾವರಿ ಬೆಳೆಗಳ ಬದಲು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲು ರೈತರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು. ಸದ್ಯ ಕಟ್ಟು/ವಂತು ನೀರು (ಆನ್ ಅಂಡ್ ಆಫ್ ಸಿಸ್ಟಮ್ ಪದ್ಧತಿ ಪ್ರಕಾರ 15 ದಿನಗಳಿಗೊಮ್ಮೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಸಂಗ್ರಹದ ಪ್ರಕಾರ ಕಟ್ಟು ನೀರು ಪದ್ಧತಿಯಡಿ ಮೂರು ತಿಂಗಳು ತನಕ ಪೂರೈಕೆ ಸಾಧ್ಯವಿದೆ. ಮಳೆ ಬಂದರೆ ಪರಿಸ್ಥಿತಿ ಸುಧಾರಿಸಲಿದೆ. ಚಾಲ್ತಿ ಸಂಗ್ರಹ, ಬಳಕೆ ಲೆಕ್ಕಾಚಾರದಲ್ಲಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆಯಬೇಡಿ ಎಂದು ರೈತರಿಗೆ ವಿನಂತಿಸಲಾಗಿದೆ ಎಂದು ಚೆಲುವರಾಯಸ್ವಾಮಿ ಸಮಜಾಯಿಷಿ ನೀಡಿದರು.
ಒಬ್ಬನಲ್ಲೇ ಇದ್ದವು ಎರಡೂ ಜನನಾಂಗ; ದೇಶದಲ್ಲಿ ಇಂಥ ಇಪ್ಪತ್ತು ಪ್ರಕರಣ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
