ಪ್ರಸಕ್ತ ವರ್ಷದಲ್ಲಿಮುಂಗಾರು, ಹಿಂಗಾರು ಎರಡೂ ಋತುಮಾನಗಳಲ್ಲಿ ಸರಿಯಾದ ಮಳೆಯಾಗದೆ ಇರುವುದರಿಂದ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಮತ್ತು ಅಂತರ್ಜಲದ ಮಟ್ಟ ಕುಸಿದಿದೆ. ಮುಂದಿನ ದಿನಗಳಲ್ಲಿ ಜನ ಮತ್ತು ಜಾನುವಾರಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಬಹುದು. ಮತ್ತೊಂದೆಡೆ ವಿದ್ಯುತ್ ಕೊರತೆಯಿಂದಾಗಿ ಕೆಲಕಡೆ ಬೆಳೆಗಳಿಗೆ ನೀರು ಸಿಗದೆ ಒಣಗುತ್ತಿವೆ. ಪರಿಣಾಮ ಆಹಾರಧಾನ್ಯಗಳ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆಗಳು ಗಗನಮುಖಿಯಾಗಿವೆ.
ಹೀಗಾಗಿ ರೈತರ, ಕೃಷಿ ಕೂಲಿಕಾರ್ವಿುಕರ ಬದುಕಿನಲ್ಲಿ ಮಾನಸಿಕ ಒತ್ತಡ ಮತ್ತು ಆತಂಕ ಸೃಷ್ಟಿಯಾಗಿದೆ. ರೈತರು ನೀರು, ಮೇವಿಲ್ಲದೆ ಜಾನುವಾರುಗಳ ಪೋಷಣೆ ಮಾಡಲಾಗದೆ ಕಡಿಮೆ ದರದಲ್ಲಿ ಅವುಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಶೀಘ್ರವಾಗಿ ಬೆಳೆವಿಮೆ ಪರಿಹಾರ ಮೊತ್ತವನ್ನು ರೈತರಿಗೆ ಒದಗಿಸಬೇಕು. ಗುಣಮಟ್ಟದ ಆಹಾರಧಾನ್ಯಗಳು ಕಡಿಮೆ ಬೆಲೆಯಲ್ಲಿ ಜನರಿಗೆ ಲಭ್ಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಆಮದು, ಸಂಗ್ರಹಣೆ ಮುಂತಾದ ಕ್ರಮಗಳನ್ನು ಕೈಕೊಳ್ಳಬೇಕು.
ಜಲಸಂರಕ್ಷಣೆಯ ದೃಷ್ಟಿಯಿಂದ ಬರಗಾಲದ ಸಮಯದಲ್ಲಿ ಜನಸಾಮಾನ್ಯರು ತೆಗೆದುಕೊಳ್ಳಬಹುದಾದ ತಕ್ಷಣದ ಕ್ರಮವೆಂದರೆ ನೀರಿನ ಬಳಕೆಯ ಬಗ್ಗೆ ಎಚ್ಚರದಿಂದಿದ್ದು, ಮಿತವಾಗಿ ಬಳಸಬೇಕು. ದೇಶದ ಯಾವ ಭಾಗದಲ್ಲಿ ಹೆಚ್ಚು ನೀರು ಲಭ್ಯವಿದೆಯೋ ಆ ರಾಜ್ಯಗಳು ಇತರ ರಾಜ್ಯಗಳಿಗೆ ನೀರು ಒದಗಿಸಲು ಸಹಕರಿಸಬೇಕು. ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿ ಕಾರ್ಯದ ಯೋಜನೆ ರೂಪಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರಲು ಕೃಷಿ ಕೂಲಿಕಾರ್ವಿುಕರಿಗೆ ಉದ್ಯೋಗ ಒದಗಿಸಿದರೆ ವಲಸೆ ಹೋಗುವುದು ತಪ್ಪುತ್ತದೆ. ಕೆರೆ, ಬಾವಿಗಳಲ್ಲಿಯ ಹೂಳನ್ನು ತೆಗೆಸಿ ಮುಂದಿನ ಮಳೆಗಾಲದಲ್ಲಿ ನೀರು ಸಂಗ್ರಹಿಸುವಂತೆ ಮಾಡಬೇಕು. ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚಳದ ಯೋಜನೆ ರೂಪಿಸಬೇಕು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರದತ್ತ ಬೊಟ್ಟು ಮಾಡದೆ ತಮ್ಮಿಂದಾದ ನೆರವನ್ನು ಶೀಘ್ರದಲ್ಲಿ ನೀಡಬೇಕು. ಕೇಂದ್ರ ಸರ್ಕಾರವೂ ಸೂಕ್ತ ನೆರವಿಗೆ ಮುಂದಾಗಲಿ. ಅಲ್ಲದೆ, ಸರ್ಕಾರಗಳು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಜನರಿಗೆ ಆರ್ಥಿಕವಾಗಿ ಹೊರೆ ಕಡಿಮೆಯಾಗುವ ಕ್ರಮ ಕೈಗೊಡು ಶ್ರೀಸಾಮಾನ್ಯರು ಬರದಿಂದ ನಲುಗದಂತೆ ನೋಡಿಕೊಳ್ಳಲಿ.
| ಉದಯ ಮ. ಯಂಡಿಗೇರಿ ಧಾರವಾಡ
ಬೆಂಗಳೂರು ಕಂಬಳ; ಹೆಚ್ಚು ಶಬ್ಧ ಮಾಡಬೇಡಿ..!

ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್; 994 ಕೇಸ್ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
