
ಬೆಂಗಳೂರು:ರಾಜ್ಯದಲ್ಲಿ ತೀವ್ರ ಬರದಿಂದ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಗಂಭೀರವಾಗಿ ಪರಿಗಣಿಸದ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ರೈತರ ಖಾತೆಗೆ ನಯಾ ಪೈಸೆ ಪರಿಹಾರ ಹಣವನ್ನು ಜಮೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಹಣ ಬಂದ ಕ್ಷಣದಲ್ಲಿ ರೈತರಿಗೆ ನೀಡುವುದಾಗಿ ಹೇಳಿದ್ದರು. ಕೇಂದ್ರದಿಂದ ಹಣ ಬಂದು ಕ್ಷಣಗಳು ಹೋಗಿ ದಿನಗಳೇ ಕಳೆದಿದ್ದರೂ, ಪರಿಹಾರ ನೀಡಲು ಕ್ರಮ ವಹಿಸಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸದ ಕಟುಕ- ಕರುಣೆ ಇಲ್ಲದ ಸರ್ಕಾರವಿದು ಎಂದು ವಾಗ್ದಾಳಿ ನಡೆಸಿದರು.ರಾಜ್ಯಾದ್ಯಂತ ಮೇವಿನ ಕೊರತೆ ಕಾಡುತ್ತಿದೆ. ಹುಲ್ಲು ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಹಲವಾರು ಬೋರ್‌ವೆಲ್ಗಳು ಒಣಗಿ ಹೋಗಿವೆ. ಕರೆಂಟಿಲ್ಲದೆ ಕೊಳವೆಬಾವಿಯಿಂದ ನೀರೆತ್ತಲಾಗದ ದುಸ್ಥಿತಿ ಇದೆ. ಈ ಗಂಭೀರತೆಯನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು. ಗೋಶಾಲೆಗಳನ್ನು ಕೂಡಲೇ ತೆರೆಯಬೇಕು ಎಂದು ಅವರು ಆಗ್ರಹಿಸಿದರು.ಬಿಸಿಲಿನ ಬೇಗೆಯಿಂದ ಹಾಹಾಕಾರವೆದ್ದಿದೆ. ದನಕರುಗಳನ್ನು ಕಟುಕರಿಗೆ ಮಾರಾಟ ಮಾಡುವ ಸ್ಥಿತಿಗೆ ರೈತರು ಬಂದಿದ್ದಾರೆ. ಕನಿಷ್ಠ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತಾತ್ವಾರ ಬಂದಿದೆ. ಆದರೂ ಇತ್ತ ಗಮನ ನೀಡದ ಸರ್ಕಾರ ಬೂಟಾಟಿಕೆ ಮಾಡಿಕೊಂಡು, ಕೇವಲ ಪ್ರಚಾರಕ್ಕಾಗಿ ಜಾಹೀರಾತುಗಳನ್ನು ಕೊಡುತ್ತಿದೆ ಎಂದು ಟೀಕಿಸಿದರು.ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿತ್ತು. ಇಂಥ ಸಂದರ್ಭದಲ್ಲಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಇದುವರೆಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಬರಪೀಡಿತ ಪ್ರದೇಶ ಘೋಷಣೆಯನ್ನೂ ವಿಳಂಬ ಮಾಡಿದ್ದರು ಎಂದು ದೂರಿದರು.
ಗ್ಯಾರಂಟಿಗಳಿಗೆ ಹಣ ಬಳಕೆಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ. ತಾನೇ ೋಷಣೆ ಮಾಡಿರುವ 2 ಸಾವಿರ ರೂ ಹಣವನ್ನುಅಕೌಂಟ್‌ಗೆ ಹಾಕಿಲ್ಲ. ಇವರೊಂಥರ ಬಂಡವಾಳ ಇಲ್ಲದ ಬಡಾಯಿಗಳಾಗಿದ್ದಾರೆ ಎಂದರು.ನಾನು ಕಂದಾಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ ಬಹಳ ಕೆಲಸ ಮಾಡಬೇಕಾದ್ದಿಲ್ಲ. ಕುಳಿತಲ್ಲಿಯೇ ಕಂಪ್ಯೂಟರ್ ಬಟನ್ ಒತ್ತಿದರೆ, ಎಲ್ಲರ ಅಕೌಂಟ್‌ಗೆ ಹಣ ಹೋಗುತ್ತದೆ ಎಂದರು.ಚುನಾವಣಾ ಪ್ರಚಾರದ ವೇಳೆ ಜನರು, ಸಚಿವರು ಮತ್ತು ಶಾಸಕರಿಗೆ ಬರ ಪರಿಹಾರದ ಮೊತ್ತ ಕೇಳಿದರೆ, ನಿಮ್ಮ ಹೆಂಗಸರಿಗೆ 2 ಸಾವಿರ ಕೊಟ್ಟಿಲ್ವ ಎಂದು ಧಮ್ಕಿ ಹಾಕುತ್ತಿದ್ದಾರೆ. ಎಷ್ಟು ದಿನ ಗ್ಯಾರಂಟಿ ಹೆಸರಿನಲ್ಲಿ ರೈತರು, ಜನರಿಗೆ ಮೋಸ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಟಾಸ್ಕ್ ಫೋರ್ಸ್ ರಚಿಸಿತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಕೂಡಲೇ ಕಾರ್ಯಪ್ರವೃತ್ತ ಆಗುವಂತೆ ಆದೇಶ ಹೊರಡಿಸಬೇಕು. ಕೇಂದ್ರದ ಹಣವನ್ನು ಸದ್ಬಳಕೆ ಮಾಡುವಂತೆ ಒತ್ತಾಯಿಸಿ ನಾನು ಇಂದೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂದರು.
ಮಜಾವಾದಿ ಸಿದ್ದರಾಮಯ್ಯಬರದ ವಿಚಾರದಲ್ಲಿ ಗಂಭೀರತೆ ತೋರಿಸದ ಸಿದ್ದರಾಮಯ್ಯ ಮಜವಾದಿ ಸಿಎಂ ಆಗಿದ್ದಾರೆ. ಅವರು ಹೇಳಿದ ಮಾತಿಗೆ ಅವರೇ ಬದ್ದರಾಗಿಲ್ಲ. ಈ ಬರಗಾಲದಲ್ಲಿ ಗೊಬ್ಬರ ಸಂಗ್ರಹ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ಆದರೆ ಮುಂಗಾರು ಮಳೆ ಬರುತ್ತೆಯೋ ಇಲ್ಲವೋ ಎಂಬ ಜ್ಞಾನವೂ ಮುಖ್ಯಮಂತ್ರಿಗಿಲ್ಲ. ಕೃಷಿ ಸಚಿವರು ಈ ಕುರಿತು ಸಭೆಗಳನ್ನೇ ನಡೆಸಿಲ್ಲ. 5 ಸಾವಿರ ಕೋಟಿ ರೂ. ಬರ ನಿರ್ವಹಣೆಗೆ ಇಡುತ್ತೇನೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ನಯಾ ಪೈಸೆಯೂ ಕಾಣುತ್ತಿಲ್ಲ ಎಂದು ದೂರಿದರು.
ಬಡ್ಡಿ ವ್ಯಾಪಾರಿ ಅಧಿಕಾರಿಗಳುಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಿದ 2 ಸಾವಿರ ರೂ ಕೇಂದ್ರ ಸರ್ಕಾರ ನೀಡಿದ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮಾನವೀಯತೆ ಇಲ್ಲದೆ ಮೀಟರ್ ಬಡ್ಡಿ ವ್ಯಾಪಾರಿಗಳಂತೆ ವರ್ತಿಸುತ್ತಿದ್ದಾರೆ. ಆ ಹಣವನ್ನು ವಾಪಸ್ ಕೇಳಲು ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಿಜೆಪಿ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು. ಆ ಹಣವನ್ನು ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಕ್ಕೆ ಅನ್ಯಾಯಹಿಂದುಳಿದ ವರ್ಗಗಳ ಪರ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿದೆ. ದೇವರಾಜ ಅರಸು ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 100 ಕೋಟಿ ರೂ. ಗೆ ಇಳಿಸಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಅಂಬಿಗರ ಚೌಡಯ್ಯ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದ್ದು, ಕಾಂಗ್ರೆಸ್ ಸರ್ಕಾರ ಅದನ್ನೂ ಅರ್ಧಕ್ಕಿಳಿಸಿದೆ. ವೀರಶೈವ ನಿಗಮಕ್ಕೆ ಬಿಜೆಪಿ 100 ಕೋಟಿ ನೀಡಿದ್ದರೆ, ಅದನ್ನು ಕಾಂಗ್ರೆಸ್ 60 ಕೋಟಿ ರೂ.ಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಭಯರಾಹುಲ್ ಗಾಂಧಿಯನ್ನು ಕೇರಳದ ಸಿಎಂ ಅಮೂಲ್ ಬೇಬಿ ಎಂದಿದ್ದಾರೆ. ಆದ್ದರಿಂದ ಅಲ್ಲಿಂದ ಬಂದು ಮಿಂಚಿನ ಓಟ ಮಾಡಿದ ರಾಹುಲ್ ರಾಯ್‌ಬರೇಲಿಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಮೋದಿ ಎಂದರೆ ಭಯವಿದೆ ಎಂದರು.ಶಾಸಕರಾದ ಸಿ.ಕೆ. ರಾಮಮೂರ್ತಿ, ರವಿ ಸುಬ್ರಹ್ಮಣ್ಯ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + eighteen =
Remember me
