ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ಗೆ ಸಿಸಿಬಿ ನೊಟೀಸ್​ ಜಾರಿ ಮಾಡಿದೆ.
ಸದ್ಯ ಈ ದಂಪತಿ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಬುಧವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಬರುತ್ತಾರೋ ಇಲ್ಲವೋ? ಡ್ರಗ್ಸ್​ ಕೇಸ್​ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ನಟ-ನಟಿ ಇಬ್ಬರೂ ಎಸ್ಕೇಪ್​ ಆಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿ ಇಂದು ಮಧ್ಯಾಹ್ನ ಹರಿದಾಡಿತ್ತು. ಇದರ ಬೆನ್ನಲ್ಲೇ ನೋಟಿಸ್​ ಬಗ್ಗೆ ಸ್ವತಃ ನಟಿ ಐಂದ್ರಿತಾ ಅವರೇ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿರಿಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?
‘ಸಿಸಿಬಿ ಜಾರಿ ಮಾಡಿರುವ ನೋಟಿಸ್​ ಅನ್ನು ವಾಟ್ಸ್ಆ್ಯಪ್​ ಮೂಲಕ ಸ್ವೀಕರಿಸಿದ್ದೇವೆ. ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿ ನಾವಿಬ್ಬರೂ ಆಗಮಿಸಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ’ ಎಂದು ‘ಮನಸಾರೆ’ ಬೆಡಗಿ ಐಂದ್ರಿತಾ ಟ್ವೀಟ್​ ಮಾಡಿದ್ದಾರೆ.
We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
— Aindrita Ray (@AindritaR)September 15, 2020

ಇನ್ನು ದ್ವಿಗ್ವಿಜಯ ನ್ಯೂಸ್​ ಜತೆ ಫೋನ್​ನಲ್ಲಿ ಮಾತನಾಡಿದ ದಿಗಂತ್​, ‘ನಾವು ಎಲ್ಲೂ ತಲೆಮರೆಸಿಕೊಂಡಿಲ್ಲ. ನಾಳೆ ಬೆಂಗಳೂರಿಗೆ ಬರುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
PHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
