ಬೆಂಗಳೂರು:ಡ್ರಗ್ಸ್​ ಕೇಸ್​ ಸಂಬಂಧ ನಟ ದಿಗಂತ್​ಗೆ ಸಿಸಿಬಿ ಮತ್ತೊಮ್ಮೆ ನೋಟಿಸ್​ ಜಾರಿ ಮಾಡಿದ್ದು, ಬುಧವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸೆ.17ರಂದು ಸ್ಯಾಂಡಲ್​ವುಡ್​ನ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಇದೀಗ ದಿಗಂತ್​ಗೆ ಸಿಸಿಬಿ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ಬಂಧನ ಭೀತಿ ಆವರಿಸಿದೆ.ಇದನ್ನೂಓದಿರಿಕುಡಿತ-ಸಿಗರೇಟ್​ ಅಭ್ಯಾಸ ಇದ್ದದ್ದು ನಿಜ ಎಂದ ಲೂಸ್​ಮಾದ, ರಾಗಿಣಿ ಬಗ್ಗೆ ಹೇಳಿದ್ದೇನು?
ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರನ್ನೂ ಪ್ರತ್ಯೇಕ ವಿಚಾರಣೆ ನಡೆಸಿರುವ ಸಿಸಿಬಿ ಮಹತ್ತರ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಆ ವೇಳೆ ಇಬ್ಬರ ಮೊಬೈಲ್​ಗಳನ್ನು ವಶಕ್ಕೆ ಪಡೆದು ಎಫ್​ಎಸ್ ಎಲ್​ಗೆ ಕಳುಹಿಸಿ ಡೇಟಾ ರಿಟ್ರೀವ್ ಮಾಡಲಾಗಿದೆ.
ಟೆಕ್ನಿಕಲ್ ಎವಿಡನ್ಸ್, ಡಿಜಿಟಲ್ ಎವಿಡನ್ಸ್ ಮತ್ತು ಬಂಧಿತ ಆರೋಪಿ ಹೇಳಿಕೆ ಆಧರಿಸಿ ದಿಗಂತ್​ಗೆ ಮತ್ತೆ‌ ಸಿಸಿಬಿ ಡ್ರಿಲ್ ಶುರುವಾಗಿದೆ.ಮೊದಲ ನೋಟಿಸ್ ಹಾಗೂ ಎರಡನೇ ನೋಟಿಸ್ ಮಧ್ಯದ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರವನ್ನು ಸಿಸಿಬಿ ಕಲೆ ಹಾಕಿದ್ದು, ಇನ್ನಷ್ಟು ವಿಚಾರಣೆ ನಡೆಸಲಿದೆ. ಚಾಮರಾಜಪೇಟೆಯ ಸಿಸಿಬಿ ಮುಖ್ಯ ಕಚೇರಿಗೆ ಆಗಮಿಸುವಂತೆ ನೋಟಿಸ್​ನಲ್ಲಿ ವಿವರಿಸಲಾಗಿದೆ.
ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಸಿಸಿಬಿ ಅಧಿಕಾರಿಗಳ ಎದುರು ಎಲ್ಲವನ್ನೂ ಒಪ್ಪಿಕೊಂಡ ದಿಗಂತ್​-ಐಂದ್ರಿತಾ ರೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
