ಕೊಪ್ಪಳ:ರಾಜ್ಯದಲ್ಲಿ ಉಪ ಚುನಾವಣೆ ಸಮರದ ನಡುವೆಯೂ ಭಾರೀ ಸದ್ದು ಮಾಡುತ್ತಿದೆ ಡ್ರಗ್ಸ್​ ಕೇಸ್​. ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಬೀಳುತ್ತಲೇ ಇದೆ. ಬಗೆದಷ್ಟು ಆಳ ಎಂಬಂತಾಗುತ್ತಿದೆ ಡ್ರಗ್ಸ್​ ಮಾಫಿಯಾ ನಂಟು. ಇದೀಗ ಕಾಂಗ್ರೆಸ್​ ಶಾಸಕರೊಬ್ಬರು, ‘ಎಲ್ಲ ಕ್ಷೇತ್ರದ ಮನುಷ್ಯರೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳೂ ಹೊರತಾಗಿಲ್ಲ’ ಎಂದಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಮರೇಗೌಡ ಬಯ್ಯಾಪೂರ, ಪ್ರತಿಯೊಬ್ಬರಿಗೂ ಡ್ರಗ್ಸ್ ಅವಶ್ಯಕತೆ ಇದೆ. ಹಿಂದೆ ರಾಜಮಹಾರಾಜರ ಕಾಲದಿಂದಲೂ ನಶೆ ಮಾಡುವ ಪದ್ಧತಿ ಬಂದಿದೆ. ಈಗ ಬೇರೆ ಬೇರೆ ವೆರೈಟಿ ನಶೆ ಮಾಡುವ ವಸ್ತುಗಳನ್ನು ಕಂಡು ಹಿಡಿದಿದ್ದಾರೆ. ಡ್ರಗ್ಸ್ ಜತೆಗೆ ಬದುಕುವವರೂ ನಮ್ಮ ಸಮಾಜದಲ್ಲಿದ್ದಾರೆ. ಈ ಬಗ್ಗೆ ಇಷ್ಟೊಂದು ಬಿಂಬಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.ಇದನ್ನೂ ಓದಿರಿ‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’
ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟ-ನಟಿಯರು ಡ್ರಗ್ಸ್​ ಅನ್ನು ಹೆಚ್ಚು ಉಪಯೋಗ ಮಾಡುತ್ತಿರುವುದು ತಪ್ಪು. ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದರು.
ಪ್ರಭಾವಿ ನಾಯಕರಿಗೆ ಅನುಶ್ರೀ ಫೋನ್​ ಕಾಲ್​: ‘ಮಾಜಿ ಸಿಎಂ’ ಎಂದಿದ್ದಕ್ಕೆ ಕಿಡಿಕಾರಿದ ಕುಮಾರಸ್ವಾಮಿ

ಸಂಸದರ ಕಾರು, ಬಿಎಂಟಿಸಿ ಬಸ್​ಗೆ ದಂಡ ವಿಧಿಸಿದ ಪೊಲೀಸ್​!

ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
