ಬೆಂಗಳೂರು:ಡ್ರಗ್ಸ್​ ವ್ಯಸನಿಯೊಬ್ಬನ ಕರ್ಮಕಾಂಡದ ಬಗ್ಗೆ ಆತನ ಪತ್ನಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಈ ಸುದ್ದಿ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ.
ಗಂಡನ ವಿಕೃತ ಮನಸ್ಥಿತಿ ಕುರಿತ ಕೇಸ್​, ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ. ಕೋರಮಂಗಲ ನಿವಾಸಿ ಲೋಹಿತ್ ವಿರುದ್ಧ ಈತನ ಪತ್ನಿಯೇ ದೂರು ದಾಖಲಿಸಿದ್ದಾರೆ.
ಲೋಹಿತ್​ನ ಡ್ರಗ್ಸ್​ ಚಟದಿಂದ ಈತನ ಪತ್ನಿಗೆ ಜೀವನವೇ ಸಾಕುಸಾಕು ಅನ್ನಿಸುವಷ್ಟು ಹಿಂಸೆಯಾಗಿದೆ. ಈ ಬಗ್ಗೆ ದೂರು ದಾಖಲಿಸಿರುವ ಪತ್ನಿ, ‘ಮೊಬೈಲ್ ಮೇಲೆ ಕೊಕೇನ್​ ಇಟ್ಟು ಹೇಗೆ ಎಳೀಬೇಕು? ಎಂದು ಹೇಳಿಕೊಟ್ತಿದ್ದ. ಡ್ರಗ್ಸ್​ ಬಗ್ಗೆ ಬಲವಂತವಾಗಿ ಎಕ್ಸ್​ಪ್ಲೇನ್ ಮಾಡ್ತಿದ್ದ. ಅವನು ಡ್ರಗ್ಸ್​ ಸೇವಿಸುವ ದೃಶ್ಯವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡುವಂತೆ ಪೀಡಿಸುತ್ತಿದ್ದ. ಅಷ್ಟೇ ಅಲ್ಲ ಆ ದೃಶ್ಯವನ್ನು ಫೇಸ್​ಬುಕ್​ಗೆ ಹಾಕೋದಾಗಿ ಹೇಳುತ್ತಿದ್ದ. ಪತಿಯ ಮಾದಕ ಚಟಕ್ಕೆ ಅವರ ತಂದೆ-ತಾಯಿಯೇ ಸಪೋರ್ಟ್ ಮಾಡ್ತಾರೆ…’ ಎಂದು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ನನ್ನ ಪತಿ ಥಣಿಸಂದ್ರದಲ್ಲಿ ವಾಸವಿರುವ ನೀಗ್ರೋಗಳ ಬಳಿ ಕೊಕೇನ್ ಖರೀದಿಸುತ್ತಿದ್ದ. ತಾನು ಡ್ರಗ್ಸ್​ ಚಟಕ್ಕೆ ಬಿದ್ದಿದ್ದು ಸಾಲದು ಅಂತ ನನ್ನನ್ನೂ ಡ್ರಗ್ಸ್​ ಸೇವಿಸುವಂತೆ ಪೀಡಿಸುತ್ತಿದ್ದ. ಹಲವು ಬಾರಿ ಮಾದಕ ಟ್ಯಾಬ್ಲೇಟ್ ತಿನ್ನಿಸಿ ವಿಕೃತಿ ಮೆರೆದಿದ್ದ. ಬಲವಂತವಾಗಿ ಡ್ರಿಂಕ್ಸ್​ ಮಾಡಿಸಿ ಚಿತ್ರಹಿಂಸೆ ಕೊಡ್ತಿದ್ದ. ಮನೆಯಲ್ಲಿ ಕೊಕೇನ್​ ಜತೆಗೆ ಗಾಂಜಾವನ್ನೂ ಸ್ಟಾಕ್ ಮಾಡಿಕೊಂಡಿರುತ್ತಿದ್ದ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆರೋಪಿ ಲೋಹಿತ್​, ವಿದ್ಯಾವಂತ, ಐಟಿ ಕಂಪನಿ ಉದ್ಯೋಗಿ. ಅವರ ತಂದೆ ಇಸ್ರೋ ಉದ್ಯೋಗಿ.
ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?

ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + ten =
Remember me
