ಹಾವೇರಿ:ಡ್ರಗ್ಸ್​ ಕೇಸ್​ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್​​ ಲಮಾಣಿ ಅರೆಸ್ಟ್​ ಆಗುತ್ತಿದ್ದಂತೆ ಸ್ಥಳೀಯ ಶಾಸಕ ಓಲೇಕರ್​ ಲಮಾಣಿ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.
ಹಾವೇರಿ ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ರುದ್ರಪ್ಪ ಲಮಾಣಿಯ ಇತಿಹಾಸವೇ ಕ್ರಿಮಿನಲ್ ಎಂದು ವಾಗ್ದಾಳಿ ನಡೆಸಿದರು.
ರುದ್ರಪ್ಪ ಲಮಾಣಿ ಮೊದಲು ಏನ್ ಮಾಡ್ತಾ ಇದ್ರು ಗೊತ್ತಾ? ಹುಡುಗಿಯರನ್ನು ಕದ್ದು ಮಾರಾಟ ಮಾಡುತ್ತಿದ್ದರು ಎಂದು ಪತ್ರಿಕೆಯಲ್ಲಿ ನೋಡಿದ್ದೇವೆ. ಖಂಡೆರಾಯನಹಳ್ಳಿಯಲ್ಲಿ 7 ಎಕರೆ ಈರುಳ್ಳಿ ಬೆಳೆಯನ್ನು ಹಾಳು ಮಾಡಿದೂ ಅವರೇ. ಅಲ್ಲದೆ 50 ರಿಂದ 60 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆ. ಇದಕ್ಕೆ ಜೀವಂತ ಸಾಕ್ಷಿಯೂ ಇದೆ ಓಲೇಕಾರ್​ ಗಂಭೀರ ಆರೋಪ ಮಾಡಿದರು.
ಅಪ್ಪನೇ ಕ್ರಿಮಿನಲ್ ಕೆಲಸದಲ್ಲಿರುವಾಗ ಇನ್ನು ಅವರ ಮಗನ ಬಗ್ಗೆ ಹೇಳಬೇಕಾ? ಎಂದು ಲೇವಡಿ ಮಾಡಿದ ಓಲೇಕಾರ್, ರುದ್ರಪ್ಪ ಅವರನ್ನೂ ಮಗ ದರ್ಶನ್​ ಲಮಾಣಿ ಮೀರಿಸುತ್ತಾನೆ ಎಂದರು. ಹಾವೇರಿಯ ನೇತಾಜಿ ನಗರ ಮನೆ ಜಾಗವನ್ನೂ ಒತ್ತು
ವರಿ ಮಾಡಿಕೊಂಡಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿದ್ದರ ಕುರಿತು ಅವರಿಗೆ ನೋಟಿಸ್ ನೀಡಲಾಗಿದೆ. ಇವರು ನೋಡಲಿಕ್ಕೆ ಆಕಳ‌ ಮುಖ ಕತ್ತಿ ಒದಿಕಿ ಅನ್ನೋ ಥರ ಚರಿತ್ರೆ ಇದೆ ಎಂದು ಕಿಡಿಕಾರಿದರು.
ಡ್ರಗ್ಸ್​ ಕೇಸ್​ನಲ್ಲಿ ಮಾಜಿ ಸಚಿವರ ಪುತ್ರ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
