ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಶೀಘ್ರವೇ ಅರೆಸ್ಟ್ ಆಗ್ತಾರೆ ಎಂದು ಶುಕ್ರವಾರವಷ್ಟೇ ಸರಣಿ ಟ್ವೀಟ್​ ಮೂಲಕ ಬಾಂಬ್​ ಸಿಡಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ, ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
‘ಕರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸ ಡ್ರಾಮ. ಪೊಲೀಸರು ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಈ ಕಥೆ. ನಾಟಕದ ರಾಣಿಯ ಹೊಸ ಅವತಾರ ಇಂದು’ ಎಂದು ಪರೋಕ್ಷವಾಗಿ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀಗೆ ಪ್ರಶಾಂತ್ ಸಂಬರಗಿ ಟಾಂಗ್​ ಕೊಟ್ಟಿದ್ದಾರೆ.
ಇದನ್ನೂ ಓದಿರಿನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ
ಸಿಸಿಬಿ ವಿಚಾರಣೆ ಕುರಿತು ನಿರೂಪಕಿ ಅನುಶ್ರೀ ಮಾತನಾಡಿರುವ ವಿಡಿಯೋವನ್ನು ತನ್ನ ಫೇಸ್​ಬುಕ್ ಪೇಜ್​ನಲ್ಲಿ ನಿನ್ನೆ(ಶುಕ್ರವಾರ ಬೆಳಗ್ಗೆ)ಯಷ್ಟೇ ಅಪ್ಲೋಡ್​ ಮಾಡಿಕೊಂಡಿದ್ದರು. ಅದರಲ್ಲಿ ‘ಸಿಸಿಬಿ ವಿಚಾರಣೆ ನಡೆಸಿದ್ದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ…’ ಎಂದು ಕಣ್ಣೀರು ಹಾಕಿದ್ದರು. ಇದರ ಬೆನ್ನಲ್ಲೇ ಸರಣಿ ಟ್ವೀಟ್​ ಮಾಡಿದ್ದ ಸಂಬರಗಿ, ”ಇಲ್ಲಿಯವರೆಗೆ ಅನುಶ್ರೀಯನ್ನು ಅರೆಸ್ಟ್ ಆಗದಂತೆ ಶುಗರ್​ ಡ್ಯಾಡಿ ತಡೆದಿದ್ದಾರೆ. ಆಕೆಯ ತಪ್ಪಿಗೆ ಕೆಲವೇ ದಿನಗಳಲ್ಲಿ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯ ಹೊರಬರಲಿವೆ” ಎಂದಿದ್ದರು.
ಇಂದು ಬೆಳಗ್ಗೆ (ಶನಿವಾರ) ಮತ್ತೊಂದು ಟ್ವೀಟ್​ ಮಾಡಿರುವ ಸಂಬರಗಿ, ಅರೆಸ್ಟ್ ಆಗೋ ಭಯದಲ್ಲಿ ತನಗೆ ಕರೊನಾ ಸೋಂಕು ದೃಢಪಟ್ಟಿದೆ, ಹತ್ತಿರ ಬರಬೇಡಿ ಎಂದು ಡ್ರಾಮ ಶುರುಮಾಡುತ್ತಾಳೆ ಎಂದು ಟೀಕಿಸಿದ್ದಾರೆ.
ಕೊರೊನಾ ಇದೆ, ಹತ್ತಿರ ಬರಬೇಡಿ.. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸಾ ಡ್ರಾಮ. ಪೊಲೀಸ್ ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಕಥೆ. ನಾಟಕದ ರಾಣಿಯ ಹೊಸ ಅವತಾರ ಇಂದು.#drugsmafia#SandalwoodDrugScandal#Karnataka#Kannada#coronavirus#TV#Anchor#drama#Queen#drugsmuktakarnataka
— Veera Prashanth Sambargi (@vip_sambaragi)October 3, 2020

ಸಂಸದರ ಕಾರು, ಬಿಎಂಟಿಸಿ ಬಸ್​ಗೆ ದಂಡ ವಿಧಿಸಿದ ಪೊಲೀಸ್​!

‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eighteen =
Remember me
