ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್​ನಿಂದ ಜಾಮೀನು ಸಿಕ್ಕಿ ಮೂರು ದಿನವಾದರೂ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ.
ನಾಲ್ಕೂವರೆ ತಿಂಗಳ ಬಳಿಕ ಜೈಲಿನಿಂದ ಬಿಡುಗಡೆ ಆಗುವ ಖುಷಿಯಲ್ಲಿದ್ದ ರಾಗಿಣಿಗೆ ಇನ್ನೂ ಎರಡು ದಿನ ಜೈಲುವಾಸವೇ ಗಟ್ಟಿ ಎಂಬಂತಾಗಿದೆ. 2020ರ ಸೆಪ್ಟೆಂಬರ್​ 14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವ ರಾಗಿಣಿ, ಜಾಮೀನು ಕೋರಿ ಸುಪ್ರೀಂಕೋರ್ಟ್​ನ ಮೊರೆಹೋಗಿದ್ದರು. ಸುಪ್ರೀಂಕೋರ್ಟ್‌ ಜ.21ರಂದೇ ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂಕೋರ್ಟ್​ನ ಆದೇಶ ಪ್ರತಿ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಕೆ ಯಾಗಿದ್ದು ಮಾತ್ರ ಇಂದು(ಶನಿವಾರ) ಮಧ್ಯಾಹ್ನ.ಇದನ್ನೂ ಓದಿರಿನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…
ಇನ್ನೇನ್ನು ಜೈಲಿಂದ ಮನೆಗೆ ಹೋಗುವ ತವಕದಲ್ಲಿದ್ದ ರಾಗಿಣಿಗೆ ಜಾಮೀನು‌ ಸಂಬಂಧ ಎನ್​ಡಿಪಿಎಸ್ ಕೋರ್ಟ್​ ಕೆಲ ಷರತ್ತುಗಳನ್ನ ವಿಧಿಸಿದೆ. 3 ಲಕ್ಷ ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ. ಈ ಷರತ್ತುಗಳನ್ನು ಇಂದೇ ಪೂರೈಸಲು ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಸೋಮವಾರ(ಜ.25) ಷರತ್ತು ಪೂರೈಸಿ ಬಿಡುಗಡೆಗೆ ಆದೇಶ ಪಡೆಯಲು ರಾಗಿಣಿ ಪರ ವಕೀಲರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 17 =
Remember me
