ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ವೈಭವ್ ಜೈನ್​ನ ಎಕ್ಸ್​ಕ್ಲ್ಯೂಸಿವ್​ ಸ್ಟೋರಿ ಇದು. ಸಿಸಿಬಿ ಕಸ್ಟಡಿಯಲ್ಲಿ ಇದ್ದುಕೊಂಡೇ ಪೊಲೀಸರ ಮೊಬೈಲ್​ನಿಂದಲೇ ಗರ್ಲ್ ಫ್ರೆಂಡ್​ಗೆ ಕಾಲ್​ ಮಾಡಿದ್ದಾನೆ. ಈತನ ಪತ್ನಿ ಮರುದಿನ ಸಿಸಿಬಿ ಕಚೇರಿಗೆ ಬಂದಾಗಲೇ ಗೊತ್ತಾಗಿದ್ದು, ವೈಭವ್​ನ ಖತರ್ನಾಕ್ ಪ್ಲಾನ್.
ಡ್ರಗ್ಸ್​ ಕೇಸ್​ನಲ್ಲಿ ವೈಭವ್​ ಜೈನ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ‘ಸಾರ್, ಇಂದು ನನ್ನ ವೆಡ್ಡಿಂಗ್​ ಆನಿವರ್ಸರಿ. ಹೆಂಡತಿಗೆ ವಿಶ್ ಮಾಡ್ಬೇಕು. ಸ್ವಲ್ಪ ಮೊಬೈಲ್ ಕೊಡಿ ಅಂತಾ ಪೊಲೀಸರನ್ನು ಕೇಳಿದ್ದ. ಅದರಂತೆ ಪೊಲೀಸರೂ ಮೊಬೈಲ್​ ಕೊಟ್ಟರು. ಅಲ್ಲೇ ಕಾಲ್​ ಮಾಡಿದ ಆರೋಪಿ, ವಿಶ್​ ಮಾಡಿ ಮಾತನಾಡಿದ್ದ. ಆದರೆ ಅಸಲಿಗೆ ಆತ ಕಾಲ್​ ಮಾಡಿದ್ದು ಪತ್ನಿಗಲ್ಲ! ಈ ಸತ್ಯ ಸ್ವತಃ ಆತನ ಹೆಂಡತಿಯಿಂದಲೇ ಹೊರಬಿದ್ದಿದೆ.ಇದನ್ನೂ ಓದಿರಿಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್
ವೆಡ್ಡಿಂಗ್​ ಆನಿರ್ವಸರಿ ನೆಪದಲ್ಲಿ ಪೊಲೀಸರ ಮೊಬೈಲ್​ನಿಂದ ಕಾಲ್ ಮಾಡಿದ ಮರುದಿನವೇ ವೈಭವ್​ ಜೈನ್​ ಬಟ್ಟೆ ತೆಗೆದುಕೊಂಡುಸಿಸಿಬಿ ಕಚೇರಿಗೆ ಬಂದಿದ್ದರು. ಆಗ ‘ಏನಮ್ಮ.. ವೆಡ್ಡಿಂಗ್​ ಆನಿವರ್ಸರಿ ಅಂತೆ ನಿಮ್ದು’ ಎಂದು ಸಿಸಿಬಿ ಪೊಲೀಸರು ಕೇಳಿಯೇ ಬಿಟ್ಟರು. ‘ಸರ್.. ನಮ್ದು ಆನಿವರ್ಸರಿ ಇರಲಿಲ್ಲ’ ಎಂದು ವೈಭವ್ ಪತ್ನಿ ಹೇಳಿದ್ದಾರೆ.
ಅಸಲಿಗೆ ವೈಭವ್ ಫೋನ್ ಮಾಡಿದ್ದಾದರೂ ಯಾರಿಗೆ ಗೊತ್ತಾ? ಗರ್ಲ್ ಫ್ರೆಂಡ್​ ಗೀತಿಕಾ ಬಿಂದಾನಿಗೆ. ಲವ್ ಆನಿವರ್ಸರಿ ಪ್ರಯುಕ್ತ ವಿಶ್​ ಮಾಡಲು ಹೆಂಡತಿಯ ಹೇಸರೇಳಿಕೊಂಡು ಪೊಲೀಸರಿಂದ ಮೊಬೈಲ್​ ಪಡೆದಿದ್ದ. ಮಿಸ್ ಸೌತ್ ಆಗಿದ್ದ ಗೀತಿಕಾ ಬಿಂದಾನಿಯೇ ವೈಭವ್​ನ ಪಾರ್ಟಿ ಪಾಟ್ನರ್. ಈಕೆ​ಗಾಗಿಯೇ ಹೆಂಡ್ತಿ ಜೊತೆ ಗಲಾಟೆ ಮಾಡ್ಕೊಂಡಿದ್ದ.
ನಟಿ ಸಂಜನಾ ಗಲ್ರಾನಿ ಮತ್ತು ಡ್ರಗ್ಸ್​ ಪೆಡ್ಲರ್​ ರಾಹುಲ್​ ಜತೆಯೂ ವೈಭವ್ ಜೈನ್​ ಮತ್ತು ಗೀತಿಕಾ ಬಿಂದಾನಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಫೋಟೋಗಳು ಲಭ್ಯವಾಗಿವೆ. ಸದ್ಯ ವೈಭವ್ ಗರ್ಲ್ ಫ್ರೆಂಡ್ ಗೀತಿಕಾ ಬಿಂದಾನಿಯನ್ನೂ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.(ದಿಗ್ವಿಜಯ ನ್ಯೂಸ್​)
‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
