ಬೆಂಗಳೂರು:ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಮತ್ತು ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಎಲ್ಲರೂ ಭಾಗಿಯಾಗಿದ್ದಾರೆ. ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ನಾಲ್ಕು ತಿಂಗಳ ಹಿಂದೆ ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ರ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಭಾರಿ ತಲ್ಲಣ ಮೂಡಿಸಿತ್ತು. ಇದೀಗ ಡ್ರಗ್ಸ್​ ಕೇಸ್​ ವಿಚಾರವಾಗಿ ಇಂದ್ರಜಿತ್​ ಅಸಮಾಧಾನ ಹೊರಹಾಕಿದ್ದಾರೆ.
‘ಶಕೀಲ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣವನ್ನ ಎರಡು ರೀತಿ ನೋಡಬಹುದು. ಮೊದಲು ಈ‌ ಪ್ರಕರಣ ಹೊರಗೆ ಬಂದಾಗ ಕೆಲವರು ಒಪ್ಪಿಕೊಂಡಿರಲಿಲ್ಲ. ಈಗ ಹಲವರು ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ನಾನು ಮಾತನಾಡಿದ್ದು ಯಾಕೆ ಅಂತ ಅವರಿಗೆಲ್ಲ ಅರ್ಥ ಆಗಿದೆ. ಇಡೀ ಕರ್ನಾಟಕಕ್ಕೆ ಈ ಪ್ರಕರಣದಿಂದ ಮೆಸೇಜ್ ಸಿಕ್ಕಿದೆ. ತನಿಖೆ ನಡೆಯುತ್ತಿದೆ. ಆದರೆ ಜನರು ಹಲವು ಪ್ರಶ್ನೆ ಕೇಳುತ್ತಿದ್ದಾರೆ. ‘ಬರೀ ನಟಿಯರು ಮಾತ್ರ ಡ್ರಗ್ಸ್​ ತಗೋಳೋದಾ? ನಟರು ತೆಗೆದುಕೊಂಡಿಲ್ವಾ?’ ಎನ್ನುತ್ತಿದ್ದಾರೆ. ನಾನೂ ಅದನ್ನೇ ಕೇಳುವೆ. ‘ಡ್ರಗ್ ಹಿನ್ನೆಲೆ ಇರುವವರನ್ನ ಏಕೆ ಅರೆಸ್ಟ್ ಮಾಡಿಲ್ಲ?’ ಎಂದರು. ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ನನಗೂ ಅಸಮಧಾನ ಇದೆ. ಇನ್ನೂ ಸರಿಯಾದ ತನಿಖೆ‌ ನಡೆದಿಲ್ಲ ಎಂದರು.ಇದನ್ನೂ ಓದಿರಿಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಡ್ರಗ್ಸ್​ ಕೇಸ್​ನಲ್ಲಿ ಚಂದನವನದ ಮಾದಕ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಬಹುಭಾಷಾ ನಟಿ ಸಂಜನಾ ಗಲ್ರಾನಿ ಕೂಡ ಜೈಲು ಪಾಲಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸದ್ಯ ಸಂಜನಾಗೆ ಜಾಮೀನು ಸಿಕ್ಕಿದೆ.
ಇನ್ನು ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು ಇದ್ದಾರೆ. ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದಿದ್ದ ಇಂದ್ರಜಿತ್​ ಲಂಕೇಶ್​ರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನೂ ನಡೆಸಿದ್ದರು.
ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
