

ಔಷಧ ಗುಣಮಟ್ಟ ಹಾಗೂ ಸುರಕ್ಷತೆಗೆ ಕೈಗೊಂಡ ಕ್ರಮಗಳೇನು?
– ಔಷಧ ಮಳಿಗೆಗಳಲ್ಲಿ ಗುಣಮಟ್ಟ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಗದಿತ ದರದಲ್ಲಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡುವುದೇ ಔಷಧ ನಿಯಂತ್ರಣ ಇಲಾಖೆಯ ಉದ್ದೇಶವಾಗಿದೆ. ಅಲ್ಲದೆ, ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ನಿಬಂಧನೆಗಳನ್ನು ಜಾರಿಗೊಳಿಸಿ ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜು ಆಗುತ್ತಿರುವ ಔಷಧಗಳ ಹಾಗೂ ಕಾಂತಿ ವರ್ಧಕಗಳ ಮೇಲೆ ಇಲಾಖೆ ಕ್ರಮಕೈಗೊಳ್ಳುತ್ತಿದೆ.

ಖಾಲಿ ಔಷಧ ಬಾಟಲ್​ಗಳ ವಿಲೇವಾರಿ ಹೇಗೆ?
– ಖಾಲಿ ಔಷಧ ಬಾಟಲ್ ಹಾಗೂ ಮಾತ್ರೆಗಳನ್ನು ರಸ್ತೆ ಮೇಲೆ ಬಿಸಾಡಬಾರದು. ಬಾಟಲ್​ಗಳ ಮೇಲಿರುವ ಲೆಬಲ್​ಗಳನ್ನು ಯಾರಿಗೂ ಸಿಗದಂತೆ ಹರಿದು ಹಾಕಬೇಕು. ಒಂದೊಮ್ಮೆ ಸಿಕ್ಕಿದರೆ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ಮಕ್ಕಳಿಗೆ ಔಷಧಗಳು ಸಿಗದಂತೆ ನೋಡಿಕೊಳ್ಳಬೇಕು. ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಮೂಲಕ ನಿಯಮಾನುಸಾರ ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡಬೇಕು. ಬಳಸಿದ ಚಚ್ಚುಮದ್ದುಗಳನ್ನು ಮತ್ತೊಮ್ಮೆ ಬಳಸಬಾರದು.
ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮವೇನು?
– ಪರವಾನಗಿ ಪಡೆದಿರುವವರು ಮಾತ್ರ ಔಷಧಗಳನ್ನು ಮಾರಾಟ ಮಾಡಬೇಕು. ಬೇರೆಯವರು ಮಾರಾಟ ಮಾಡಬಾರದು. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ನಿಗದಿಪಡಿಸಿದ ದರದಲ್ಲೇ ಮಾಲೀಕರು ಔಷಧಗಳನ್ನು ಮಾರಾಟ ಮಾಡತಕ್ಕದು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ನಿಯಾಮನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಯುವಜನತೆಗೆ ನಿಮ್ಮ ಸಂದೇಶವೇನು?
– ಮಾದಕ ವಸ್ತುಗಳನ್ನು ಮಕ್ಕಳು ಬಳಸದಂತೆ ಪಾಲಕರು ನಿಗಾ ವಹಿಸಬೇಕು. ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದರೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕು. ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಸೇವಿಸಬಾರದು.
ಔಷಧಗಳ ಗಡುವು ಮೀರುವ ದಿನಾಂಕ, ನಿಗದಿತ ದರ ಪರಿಶೀಲಿಸಿದ ಬಳಿಕವಷ್ಟೇ ಸಾರ್ವಜನಿಕರು ಮಳಿಗೆಗಳಲ್ಲಿ ಔಷಧ ಖರೀದಿಸಬೇಕು. ವೈದ್ಯರ ಚೀಟಿ ಪಡೆದು ಔಷಧ ಖರೀದಿಸಬೇಕು. ನಂತರ ಔಷಧ ಮಳಿಗೆಯ ಮಾಲೀಕರು ವೈದ್ಯರು ಬರೆದುಕೊಟ್ಟಿರುವ ಚೀಟಿಯಲ್ಲಿರುವ ಆಂಶಗಳದಂತೆ ಔಷಧಗಳನ್ನು ಕೊಟ್ಟಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಂದಾಜಿನ ಮೇಲೆ ಔಷಧ ಖರೀದಿಸಬಾರದು.
|ಭಾಗೋಜಿ ಟಿ. ಖಾನಾಪುರೆಔಷಧ ನಿಯಂತ್ರಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
