ಬೆಂಗಳೂರು:ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಸಿನಿಮಾ ನಟ-ನಟಿಯರು ಮಾತ್ರವಲ್ಲ ಕೆಲ ರಾಜಕಾರಣಿಗಳ ಕುಟುಂಬಸ್ಥರ ಕೈವಾಡ ಇರುವುದು ಬೆಳಕಿಗೆ ಬರುತ್ತಿದೆ. ಬಿಬಿಎಂಪಿ ಕಾಂಗ್ರೆಸ್ ಕಾರ್ಪೋರೇಟರ್​ವೊಬ್ಬರ ಪುತ್ರನ ಹೆಸರು ಡ್ರಗ್ಸ್ ದಂಧೆಯಲ್ಲಿ ಕೇಳಿಬಂದಿದ್ದು, ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಕೆಪಿಸಿಸಿಗೆ ಎದುರಾಗಿದೆ.
ಪಕ್ಷಕ್ಕೆ ಡ್ಯಾಮೇಜ್​ ತರುವ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಿಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಡಿ. ಅವರ ತಪ್ಪಿಗೆ ನಿಮಗೆ ಟಿಕೆಟ್ ಸಿಗದಿರಬಹುದು. ಆ ಸಮಸ್ಯೆ ಆಗದಂತೆ ಎಚ್ಚೆತ್ತುಕೊಳ್ಳಿ ಎಂದು ಬೆಂಗಳೂರು ಕಾಂಗ್ರೆಸ್​ ನಾಯಕರಿಗೆ ಸೂಚಿಸಿದ್ದಾರೆ.ಇದನ್ನೂ ಓದಿರಿರಾಗಿಣಿನ‌ ಪ್ರಚಾರಕ್ಕೆ ನಾನು ಕರೆಸಿರಲಿಲ್ಲ, ಆಕೆ ಈ ರೀತಿ ಅಂತ‌ ಗೊತ್ತಿರಲಿಲ್ಲ; ನಾರಾಯಣ ಗೌಡ
ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಡ್ರಗ್ಸ್​ ಮಾಫಿಯಾದಲ್ಲಿ ಪಕ್ಷದ ನಾಯಕರ ಕುಟುಂಬಸ್ಥರ ಹೆಸರು ಬಂದರೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಅರಿತ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಮುಖಂಡರಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಗಾಂಜಾ ಮಾಫಿಯಾದಲ್ಲಿ ನಿಮ್ಮ/ನಿಮ್ಮವರ ಹೆಸರು ಕೇಳಿಬಂದ್ರೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗಲ್ಲ ಎಂದು ಎಚ್ಚರಿಸಿದ್ದಾರೆ.
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ನಟಿ ರಾಗಿಣಿ ಆಪ್ತ ರವಿಶಂಕರ್​ನ ಐಷಾರಾಮಿ ಜೀವನಕ್ಕೆ ಸಿಸಿಬಿ ಪೊಲೀಸರೇ ದಂಗು

ಸಿನಿ ತಾರೆಯರಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದವನು ಇವನೇ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + three =
Remember me
