ಹಾವೇರಿ:ಪೊಲೀಸ್​​ ಮತ್ತು ರಾಜಕಾರಣಿ ಇಲ್ಲದೆ ಡ್ರಗ್ಸ್ ಸಪ್ಲೈ ಸಾಧ್ಯನೇ ಇಲ್ಲ ಎಂದಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಡ್ರಗ್ಸ್ ಮಾಫಿಯಾದಲ್ಲಿ ಪೊಲೀಸ್ ಮತ್ತು ರಾಜಕಾರಣಿ ಇಬ್ಬರೂ ಇದ್ದಾರೆ. ಎಲ್ಲೆಲ್ಲಿ ಮಾಫಿಯಾ ನಡೆಯುತ್ತಿದೆ? ಯಾರು ಸಪ್ಲೈ ಮಾಡುತ್ತಾರೆ? ಇದರಲ್ಲಿ ಯಾರೆಲ್ಲ ಇನ್ವಾಲ್​ ಆಗಿದ್ದಾರೆ ಎಂದು ಪೊಲೀಸರಿಗೆ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಆದರೂ ಹಣ-ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ’ ಎಂದು ಪೊಲೀಸ್ ಹೇಳಲಿ. ಡ್ರಗ್ಸ್ ಮಾಫಿಯಾದವರು ಎಲ್ಲೆಲ್ಲಿದ್ದಾರೆಂದು ನಾನು ತೋರಿಸುತ್ತೇನೆ ಎಂದು ಪೊಲೀಸರಿಗೆ ಸವಾಲು ಹಾಕಿದ ಪ್ರಮೋದ್​ ಮುತಾಲಿಕ್​, ‘ಹ್ಯಾರಿಸ್ ಪುತ್ರ ಕೂಡ ಈ ಮಾಫಿಯಾದಲ್ಲಿದ್ದಾನೆ’ ಎಂದು ಹೊಸ ಬಾಂಬ್ ಸಿಡಿಸಿದರು.ಇದನ್ನೂ ಓದಿರಿಸಚಿವ ಸಿ.ಟಿ.ರವಿಗೆ ಖಡಕ್​ ವಾರ್ನಿಂಗ್ ಕೊಟ್ಟ ಎಚ್​ಡಿಕೆ !
ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ ದೊಡ್ಡ ಪ್ರಮಾಣದಲ್ಲಿದೆ. ಕೋಟಿಗಟ್ಟಲೇ ವ್ಯವಹಾರ ನಡೆಯುತ್ತಿದೆ.‌ ಶಾಲಾ-ಕಾಲೇಜು ಮಟ್ಟದವರೆಗೆ ಬಂದಿರೋದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಡ್ರಗ್ಸ್-ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ ಎಂದು 2009ರಲ್ಲೇ ನಾನು ಹೇಳಿದ್ದೆ. 2009ರಲ್ಲಿ ಒಂದು ಪಬ್ ಮೇಲೆ ದಾಳಿ ಮಾಡಿದ್ದೆವು, ಅವತ್ತು ಅಲ್ಲಿ ಡ್ರಗ್ಸ್ ಕೆಲಸ ಮಾಡುತ್ತಿತ್ತು. ಸರ್ಕಾರ ಆ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಡದೆ ನನ್ನನ್ನು ಟಾರ್ಗೆಟ್ ಮಾಡಿಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು.
https://www.facebook.com/197987604008654/videos/307785200494274/?__so__=channel_tab&__rv__=latest_videos_card
ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?

ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 + two =
Remember me
