| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ದೇಶ ಯಾವ ವಿಚಾರದಲ್ಲಿ ಕೊರತೆ ಎದುರಿಸುತ್ತಿದೆ ಎಂಬುದನ್ನು ಕರೊನಾವು ಭಾರತಕ್ಕೆ ಮನದಟ್ಟು ಮಾಡಿಕೊಟ್ಟ ಬೆನ್ನಲ್ಲೇ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನ ಶುರುವಾಗಿದೆ.
ಕರೊನಾ ಕಾಲಘಟ್ಟದಲ್ಲಿ ದೇಶಾದ್ಯಂತ ವೈದ್ಯಕೀಯ ಸೌಲಭ್ಯದ ಕೊರತೆ ಕಾಡುತ್ತಿರುವ ಕಾರಣ ಕೇಂದ್ರ ಸರ್ಕಾರವೀಗ ದೇಶದಲ್ಲಿ ಮೂರು ಸಗಟು ಔಷಧ ಪಾರ್ಕ್, ನಾಲ್ಕು ವೈದ್ಯಕೀಯ ಉಪಕರಣ ಪಾರ್ಕ್ ಆರಂಭಿಸಲು ನಿರ್ಧರಿಸಿದೆ. ಈ ಕಾರ್ಯಕ್ಕೆ ಅಪಾರ ಅನುದಾನವನ್ನು ಕೇಂದ್ರವೇ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಈ ಏಳು ಪಾರ್ಕ್​ಗಳ ಪೈಕಿ ಒಂದನ್ನು ತಮ್ಮಲ್ಲಿ ಆರಂಭಿಸಬೇಕೆಂದು ವಿವಿಧ ರಾಜ್ಯಗಳ ಒತ್ತಾಯ ಶುರುವಾಗಿದೆ. ಕರ್ನಾಟಕ ಕೂಡ ಸಗಟು ಔಷಧ ಪಾರ್ಕ್​ಗೆ ಕೋರಿಕೆ ಇಟ್ಟಿದ್ದು ಈಗಾಗಲೇ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರತರಲು ನಿರ್ಧರಿಸಿದ್ದು, ವಸ್ತುನಿಷ್ಠವಾಗಿ ಸ್ಥಳ ಆಯ್ಕೆಗೆ ಮಾರ್ಗಸೂಚಿ ಅನುಸರಿಸಲಾಗುತ್ತದೆ. ವೈದ್ಯಕೀಯ ಉಪಕರಣ ಮತ್ತು ಔಷಧಗಳ ದೇಶೀಯ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ಔಷಧ ಪಾರ್ಕ್ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು.
ಪ್ರತಿ ಸಗಟು ಔಷಧ ಪಾರ್ಕ್​ಗೆ ಗರಿಷ್ಠ ಒಂದು ಸಾವಿರ ಕೋಟಿ ರೂ. ಮತ್ತು ವೈದ್ಯಕೀಯ ಸಲಕರಣೆ ಪಾರ್ಕ್​ಗೆ 100 ಕೋಟಿ ರೂ.ಗಳನ್ನು ಅನುದಾನದ ರೂಪದಲ್ಲಿ ರಾಜ್ಯಗಳಿಗೆ ನೀಡಲಿದೆ. ಈ ಬಗ್ಗೆ ರಾಜ್ಯದ ಕೈಗಾರಿಕೆ ಇಲಾಖೆ ಮಾಹಿತಿ ಕಲೆ ಹಾಕಿದ್ದು, ಯಾವ ಜಿಲ್ಲೆಯಲ್ಲಿ ಈ ವೈದ್ಯಕೀಯ ಪಾರ್ಕ್​ಗೆ ಸೂಕ್ತ ವಾತಾವರಣವಿದೆ, ಒಂದೆ ಕಡೆ ಗರಿಷ್ಠ ಜಾಗದ ಲಭ್ಯತೆ ಎಲ್ಲಿದೆ ಎಂದು ಗಮನಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆೆ. ರಾಜ್ಯಕ್ಕೆ ಈ ಅವಕಾಶ ಬಳಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂಬತ್ತು ರಾಜ್ಯಗಳು ಬೇಡಿಕೆ ಇಟ್ಟಿವೆ. ಕರ್ನಾಟಕದಿಂದಲೂ ಪ್ರಸ್ತಾವನೆ ಬಂದಿದೆ. ಮಾರ್ಗಸೂಚಿ ಈಡೇರಿಸುವ ರಾಜ್ಯಕ್ಕೆ ಅವಕಾಶ ನೀಡಲಾಗುತ್ತದೆ. ಸದಾನಂದ ಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ
ತಕ್ಷಣವೇ ಸಿಗಲಿದೆ ಅನುಮತಿ
ಈ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ, ಆಯಾ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣ ಹಾಕಬೇಕಾಗುತ್ತದೆ. ಈ ಹಂಚಿಕೆ ಭಾಗ ಎಷ್ಟು, ಯಾವ ವಾತಾವರಣ ಇರಬೇಕು, ವಿದ್ಯುತ್, ನೀರು ವ್ಯವಸ್ಥೆ, ಜಾಗದ ಲಭ್ಯತೆ ಎಷ್ಟಿರಬೇಕು, ಕನೆಕ್ಟಿವಿಟಿ ಸೇರಿ ವಿವಿಧ ವಿಚಾರಗಳಲ್ಲಿ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದು ಶೀಘ್ರ ಪ್ರಕಟಿಸುತ್ತೇವೆ. ಯಾವ ರಾಜ್ಯಗಳು ಸೂಕ್ತ ವ್ಯವಸ್ಥೆ ಮಾಡಿಕೊಡಲು ತಯಾರಿರುತ್ತವೋ ಆ ರಾಜ್ಯಗಳಿಗೆ ತಕ್ಷಣವೇ ಅನುಮತಿ ನೀಡುತ್ತೇವೆಂದು ಸಚಿವ ಸದಾನಂದ ಗೌಡ ತಿಳಿಸಿದರು.
ರಾಯಚೂರು ಪ್ರಸ್ತಾವನೆ
ಔಷಧ ಪಾರ್ಕ್ ವಿಚಾರವಾಗಿ ವಿಜಯವಾಣಿಗೆ ಪ್ರತಿಕ್ರಿಯಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ, ಒಂಬತ್ತು ರಾಜ್ಯಗಳು ಮನವಿ ಸಲ್ಲಿಸಿವೆ. ಕರ್ನಾಟಕದಿಂದ ರಾಯಚೂರಿನಲ್ಲಿ ಘಟಕ ಸ್ಥಾಪಿಸುವ ಪ್ರಸ್ತಾವನೆ ಇದೆ. ಮಾರ್ಗಸೂಚಿಯಂತೆ ಎಲ್ಲಿ ಸೂಕ್ತ ವಾತಾವರಣ ಇದೆ ಎಂದು ನೋಡಿಕೊಂಡು ಅಲ್ಲಿಗೆ ಅವಕಾಶ ಕೊಡುತ್ತೇವೆ ಎಂದರು.
ಈ ಅವಕಾಶ ಬಳಸಿಕೊಳ್ಳಲು ರಾಜ್ಯ ತಯಾರಿದೆ. ಸಚಿವ ಸದಾನಂದ ಗೌಡರೊಂದಿಗೆ ಈ ಸಂಬಂಧ ಚರ್ಚೆ ನಡೆಸಲಾಗುತ್ತದೆ.
| ಜಗದೀಶ ಶೆಟ್ಟರ್ ಕೈಗಾರಿಕೆ ಸಚಿವ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + 18 =
Remember me
