ಬೆಂಗಳೂರು:ಮುದ್ದಾಗಿ ಕಾಣುವ ಟೆಡ್ಡಿ ಬೇರ್​ಗಳನ್ನು ಏನಕ್ಕೆ ಬಳಸುತ್ತಾರೆ? ಮಕ್ಕಳ ಆಟಕ್ಕೆ ಬಳಸುತ್ತಾರೆ. ಮಕ್ಕಳಾಟದ ಟೆಡ್ಡಿ ಬೇರ್​ನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್​ ಸಾಗಿಸಲು ಪ್ರಯತ್ನಿಸುತ್ತಿದ್ದ ಖತರ್ನಾಕ್​ ಕಳ್ಳ ಇದೀಗ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಹಳೆ ಶತಮಾನದ ಕಾನೂನಿಟ್ಟುಕೊಂಡು ಹೊಸ ಶತಮಾನ ನಿರ್ಮಿಸಲು ಸಾಧ್ಯವಿಲ್ಲ; ರೈತರನ್ನು ಉಲ್ಲೇಖಿಸದೆಯೇ ಪ್ರತಿಕ್ರಿಯಿಸಿದ ಮೋದಿ
ಅಸ್ಸಾಂ ಮೂಲದ ಶಾಕೀರ್ ಹುಸೇನ್(34) ಒಬ್ಬ ಅಂತರ್ ರಾಜ್ಯ ಡ್ರಗ್‌ ಪೆಡ್ಲರ್​ನನ್ನು ಟೆಡ್ಡಿ ಬೇರ್​ನಲ್ಲಿ ಡ್ರಗ್ಸ್​ ಇಟ್ಟುಕೊಂಡು ಸಾಗಿಸುತ್ತಿದ್ದ. ಈತನ ಈತನ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲಸೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನ ಬಳಿ ಇದ್ದ 28 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಲಾಗಿದೆ. 2200 ಎಂಡಿಎಂಎ ಟ್ಯಾಬ್ಲೆಟ್ಸ್, 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಈತ ಒಂದು ಎಂಡಿಎಂಎ ಮಾತ್ರೆ 3-4 ಸಾವಿರಕ್ಕೆ ಮಾರಾಟ ಮಾಡುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಡ್ರಗ್ಸ್​ ಅನ್ನು ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಕಳೆದ ಐದು ವರ್ಷಗಳ ಹಿಂದೆ ಈತ ಬೆಂಗಳೂರಿಗೆ ವಲಸೆ ಬಂದಿದ್ದು ಇಲ್ಲಿನ ಕೊತ್ತನೂರಿನ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಯಾರಿಗೂ ಅನುಮಾನ ಬರದಂತೆ ಡ್ರಗ್ಸ್​ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಅಂದು ಉಗ್ರನ ಪತ್ನಿ, ಇಂದು ಜಿಲ್ಲಾ ಅಭಿವೃದ್ಧಿ ಪರಿಷತ್ ಅಭ್ಯರ್ಥಿ! ಉಗ್ರ ಬದುಕಿನಿಂದ ಶಾಂತಿಯುತ ಬದುಕಿಗೆ ಬಂದವಳ ಕಥೆ
ಆರೋಪಿಯನ್ನು ಪತ್ತೆ ಹಚ್ಚಿ ಮಾದಕ ವಸ್ತು ವಶ ಪಡಿಸಿಕೊಂಡಿರುವ ಪೊಲೀಸ್​ ತಂಡಕ್ಕೆ 35 ಸಾವಿರ ರೂಪಾಯಿ ಬಹುಮಾನವನ್ನು ಬೆಂಗಳೂರು ಪೊಲೀಸ್​ ಆಯುಕ್ತರಾದ ಕಮಲ್​ ಪಂತ್​ ಘೋಷಿಸಿದ್ದಾರೆ.
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seven =
Remember me
