ಬೆಂಗಳೂರು:ಸ್ಯಾಂಡಲ್​ವುಡ್​ನ ‘ಮಾದಕ’ ನಟಿ ರಾಗಿಣಿ ದ್ವಿವೇದಿಯ ಆಪ್ತ ರವಿಶಂಕರ್​ಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಸಿನಿಮಾ ನಟ-ನಟಿಯರಿಗೆ ಡ್ರಗ್ಸ್​ ಮಾಫಿಯಾ ನಂಟಿರುವ ಪ್ರಕರಣದ ಜಾಡು ಹಿಡಿದು ಹೊರಟ ಸಿಸಿಬಿ ಈಗಾಗಲೇ ರವಿಶಂಕರ್​, ರಾಗಿಣಿ ದ್ವಿವೇದಿ ಜತೆಗೆ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್​ನನ್ನು ಬಂಧಿಸಿದ್ದಾರೆ. ಇದೀಗ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಲೂಮ್ ಪೆಪ್ಪರ್ ಸಾಂಬಾ ಎಂಬಾತನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ಪೆಡ್ಲರ್​ ಲೂಮ್ ಪೆಪ್ಪರ್ ಸಾಂಬಾ ದಕ್ಷಿಣ ಆಫ್ರಿಕಾ ಮೂಲದವ. ಈತ ರವಿಶಂಕರ್​ಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಎಂಬುದು ಬಯಲಾಗಿದೆ.
ಇದನ್ನೂ ಓದಿರಿ‘ನಶೆ’ಯ ನಗ್ನ ಸತ್ಯ; ವಕೀಲರ ಮೊರೆ ಹೋದ ನಟಿ ಸಂಜನಾ ಗಲ್ರಾನಿ
ತಾನು ಯಾರಿಗೆಲ್ಲ ಡ್ರಗ್ಸ್​ ಸರಬರಾಜು ಮಾಡುತ್ತಿದ್ದೆ ಎಂಬುದರ ಬಗ್ಗೆ ವಿಚಾರಣೆ ವೇಳೆ ಲೂಮ್ ಪೆಪ್ಪರ್ ಸಾಂಬಾ ಬಾಯ್ಬಿಟ್ಟಿದ್ದಾನೆ. ರವಿಶಂಕರ್ ಮತ್ತು ಇತರೆ ಸೆಲೆಬ್ರಿಟಿಗಳಿಗೆ ಈತನೇ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ. ಆ ಮೂಲಕ ಸೌತ್ ಆಫ್ರಿಕಗೂ ಸ್ಯಾಂಡಲ್​ವುಡ್ ಡ್ರಗ್ಸ್​ ರಾಕೆಟ್​ಗೂ ಲಿಂಕ್ ಸಿಕ್ಕಿದೆ. ಈತ ದಂಧೆಯ ಎ7 ಆರೋಪಿಯಾಗಿದ್ದಾನೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿಶಂಕರ್​ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈತನ ಜತೆಗೆ ಮತ್ತಿಬ್ಬರು ಆರೋಪಿಗಳಾದ ರಾಹುಲ್ ಮತ್ತು ಲೂಮ್ ಪೆಪ್ಪರ್ ಸಾಂಬಾನನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದೆ.
‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
