ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಗಾಂಜಾ ಮಾರಾಟ ಜಾಲ ಸಕ್ರಿಯವಾಗಿದೆ. ನಿನ್ನೆ(ಬುಧವಾರ)ಯೂ ಒಬ್ಬ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದು, 5 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಆ.5ರಂದು ಕೆ.ಆರ್​.ಪುರ ರೈಲು ನಿಲ್ದಾಣದ ಬಳಿ ರಾಮಮೂತಿರ್ನಗರದ ನವೀನ್​(26) ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದ. ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 5 ಕೆಜಿ ಗಾಂಜಾ ಪತ್ತೆ ಆಗಿದೆ. ವಿದ್ಯಾರ್ಥಿಗಳು ಮತ್ತು ಯುವಕರೇ ಈತನ ಟಾರ್ಗೆಟ್​ ಆಗಿದ್ದು, ಅವರಿಗೆ ಗಾಂಜಾ ಮಾರಲು ಕಾಯುತ್ತಿದ್ದಾಗಿ ಪೊಲೀಸರ ಬಳಿ ಆತ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿರಿಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!
ಕರೊನಾ ಲಾಕ್​ಡೌನ್ ಸಮಯವನ್ನೇ ಬಂಡವಾಳ‌ ಮಾಡಿಕೊಂಡಿದ್ದ ಸಮಾಜಘಾತುಕರು ಯುವಸಮೂಹಕ್ಕೆ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುವಲ್ಲಿ ನಿರತರಾಗಿದ್ದರು. ಈ ವೇಳೆ ಡ್ರಗ್ಸ್​ ಜಾಲ ಸಕ್ರಿಯವಾಗಿತ್ತು. ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ 12 ದಿನಗಳಲ್ಲಿ 98 ಪ್ರಕರಣ ದಾಖಲಿಸಿ 98 ಆರೋಪಿಗಳನ್ನು ಬಂಧಿಸಿದ್ದಾರೆ.
ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
