ಬೆಂಗಳೂರು:ವೆಬ್​ಸೀರೀಸ್​ನಿಂದ ಪ್ರೇರಿತನಾಗಿ ಡಾರ್ಕ್​ನೆಟ್​ನಲ್ಲಿ ಆರ್ಡರ್ ಮಾಡಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ ವಿದೇಶದಿಂದ ಡ್ರಗ್ಸ್ ಖರೀದಿಸುತ್ತಿದ್ದ ಕುಖ್ಯಾತ ಗ್ಯಾಂಗ್​ನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್​ಸಿಬಿ) ಬಂಧಿಸಿದೆ. ಕೇರಳ ಮೂಲದ ಫಾಹೀಂ(23), ಕಾರ್ತಿಕ್ ಪ್ರಮೋದ್(25) ಹಾಗೂ ಮಂಗಳೂರು ಎ. ಹಶೀರ್ (22) ಮತ್ತು ಎಸ್.ಎಸ್ ಶೆಟ್ಟಿ (22) ಬಂಧಿತರು. ಪೆಡ್ಲರ್​ಗಳಿಂದ 750 ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜು.30ರಂದು ನೆದರ್​ಲ್ಯಾಂಡ್​ನಿಂದ ಭಾರತದ ವಿದೇಶಿ ಅಂಚೆ ಕಚೇರಿಗೆ ಪಾರ್ಸೆಲ್​ನಲ್ಲಿ ಡ್ರಗ್ಸ್ ರವಾನಿಸಲಾಗಿತ್ತು. ಪಾರ್ಸಲ್ ಸ್ವೀಕರಿಸಬೇಕಿದ್ದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು, ವಿಳಾಸ ನಮೂದು ಮಾಡಿರಲಿಲ್ಲ. ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿತ್ತು.
ಆದರೆ, ಅದರ ವಾರಸುದಾರರು ಯಾರೆಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದು ಎನ್​ಸಿಬಿ ಅಧಿಕಾರಿಗಳ ತಂಡಗಳು ತನಿಖೆ ನಡೆಸಿದಾಗ ಪಾರ್ಸಲ್ ಸ್ವೀಕರಿಸಬೇಕಿದ್ದ ಮಾದಕ ವಸ್ತು ಜಾಲದ ಆರೋಪಿ ಪ್ರಮೋದ್ ಎಂಬಾತ ಸೆರೆಸಿಕ್ಕಿದ್ದ. ಈತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಜಾಲದ ಮಾಸ್ಟರ್​ವೆುೖಂಡ್ ಫಾಹೀಂ ಮತ್ತು ಆತನ ಸಹಚರರಾದ ಎ. ಹಶೀರ್ ಮತ್ತು ಎಸ್.ಎಸ್. ಶೆಟ್ಟಿ ಎಂಬುವರು ಪತ್ತೆಯಾಗಿದ್ದಾರೆ. ಈ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ಮನೆಗಳ ಮೇಲೆ ದಾಳಿ ನಡೆಸಿದಾಗ ಮಾದಕ ದ್ರವ್ಯ ಪತ್ತೆಯಾಗಿದ್ದು, ಹಲವು ವಿಚಾರಗಳು ಬೆಳಕಿಗೆ ಬಂದಿವೆ ಎಂದು ಎನ್​ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ಫಾಹೀಂ ವೆಬ್​ಸೀರೀಸ್​ನಿಂದ ಪ್ರೇರಿತನಾಗಿ ಡಾರ್ಕ್​ನೆಟ್ ಡ್ರಗ್ಸ್ ಖರೀದಿಸುವ ಬಗ್ಗೆ ಪ್ಲಾ್ಯನ್ ಮಾಡಿ ಕಲಿತಿದ್ದಾನೆ. ಡಾರ್ಕ್​ವೆಬ್​ನಲ್ಲಿ ವಿದೇಶಿ ಪೆಡ್ಲರ್​ಗಳನ್ನು ಸಂಪರ್ಕ ಮಾಡಿ ಅವರಿಂದ ಕೊರಿಯರ್ ಮೂಲಕ ಡ್ರಗ್ಸ್ ಪಡೆಯುತ್ತಿದ್ದ. ಅದಕ್ಕೆ ಪ್ರತಿಯಾಗಿ ಬಿಟ್​ಕಾಯಿನ್​ನಲ್ಲಿ ಹಣ ಪಾವತಿಸುತ್ತಿದ್ದ. ಕಳೆದ 2 ವರ್ಷಗಳಿಂದ
ಡ್ರಗ್ಸ್ ದಂಧೆ ನಡೆಸುತ್ತಿದ್ದ ಫಾಹೀಂ, ಆರ್ಡರ್ ಮಾಡುತ್ತಿದ್ದ ಮಾದಕ ದ್ರವ್ಯವನ್ನು ಆತನ ಸಹಚರರು ಸ್ವೀಕರಿಸುತ್ತಿದ್ದರು. ಕೇರಳ, ಚೆನ್ನೈ, ಮಂಗಳೂರು, ಬೆಂಗಳೂರು ಸೇರಿ ಹಲವೆಡೆ ವಿದ್ಯಾರ್ಥಿಗಳು, ಸಾಫ್ಟ್​ವೇರ್ ಇಂಜಿನಿಯರ್​ಗಳನ್ನು ಫೇಸ್​ಬುಕ್​ನಲ್ಲಿ ಪರಿಚಯ ಮಾಡಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.
ಒಂದೇ ಕಾಲೇಜಿನ ವಿದ್ಯಾರ್ಥಿಗಳು
ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಫಾಹೀಂ, ಮೊದಲು ವೆಬ್​ಸೀರೀಸ್​ನಲ್ಲಿ ಕಲಿತು ನೆದರ್​ಲ್ಯಾಂಡ್​ನಿಂದ ಡ್ರಗ್ಸ್ ಖರೀದಿಸಿ ಸಹಪಾಠಿಗಳಿಗೆ ಮಾರಾಟ ಮಾಡಿದ್ದಾನೆ. ಇತರರು ಆತನ ಸಹಚರರಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಮಂಗಳೂರು, ಕೇರಳ ಸೇರಿ ದೇಶದ ಹಲವೆಡೆ ಇರುವ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
