ಬೇಲೂರು ಹರೀಶ ಬೆಂಗಳೂರು
ಕರೊನಾದಿಂದಾಗಿ ಟೆಂಡರ್ ಪ್ರಕ್ರಿಯೆ ವಿಳಂಬಗೊಂಡಿ ರುವುದು ಮತ್ತಿತರ ಕಾರಣಗಳಿಂದಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಾಗಿದೆ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್​ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್​ಡಬ್ಲ್ಯುಎಸ್) ಸಮರ್ಪಕವಾಗಿ ಔಷಧ ಸಂಗ್ರಹವಾಗದ ಪರಿಣಾಮ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ.
ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಔಷಧ ಸಂಗ್ರಹಿಸಲು ಕೆಡಿಎಲ್​ಡಬ್ಲ್ಯುಎಸ್ ಟೆಂಡರ್ ಕರೆಯುತ್ತದೆ. ಆದರೆ, ಈ ವರ್ಷ ಕರೊನಾ ಕಾರಣಕ್ಕಾಗಿ ಒಂದೂ ಟೆಂಡರ್ ಕರೆದಿಲ್ಲ. ಒಂದೊಮ್ಮೆ ಔಷಧ ಪೂರೈಕೆ ಸಂಸ್ಥೆಗಳನ್ನು ಟೆಂಡರ್​ಗೆ ಆಹ್ವಾನಿಸಿ ಪ್ರಕ್ರಿಯೆ ಮುಗಿಸಲು ಮುಂದಾದರೂ ಸರಾಸರಿ 3 ತಿಂಗಳಾದರೂ ಬೇಕಾಗುತ್ತದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧ ಸಿಗದೆ ಬಡ ರೋಗಿಗಳು ಖಾಸಗಿ ಮೆಡಿಕಲ್ ಸ್ಟೋರ್​ಗಳಿಗೆ ಹೋಗುವಂತಾಗಿದೆ.
ಏನಿದು ಕೆಡಿಎಲ್​ಡಬ್ಲ್ಯುಎಸ್?:ಆರೋಗ್ಯ ಇಲಾಖೆಯ ಅಧೀನದ ಕೆಡಿಎಲ್​ಡಬ್ಲ್ಯುಎಸ್ ಔಷಧಗಳನ್ನು ಸಂಗ್ರಹಿಸಿ 23 ಜಿಲ್ಲಾ, 161 ತಾಲೂಕು ಆಸ್ಪತ್ರೆ, 203 ಸಮುದಾಯ ಆರೋಗ್ಯ ಕೇಂದ್ರ, 2331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧ ಪೂರೈಕೆ ಮಾಡುವ ಜವಾಬ್ದಾರಿ ಹೊಂದಿದೆ.
ಇದನ್ನೂ ಓದಿಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು
ನಾಯಿ ಕಡಿತ ಔಷಧ ಸಮಸ್ಯೆ:ಜೀವರಕ್ಷಕಗಳ ಅಭಾವದ ಜತೆಗೆ ನಾಯಿ ಹಾಗೂ ಹಾವು ಕಡಿತ ಔಷಧಕ್ಕೂ ಬರ ಎದುರಾಗಿದೆ. ಕಳೆದ ವರ್ಷ ಖರೀದಿಸಿ ಸಂಗ್ರಹಿಸಿ ಅಲ್ಪಸ್ವಲ್ಪ ಉಳಿದಿರುವ ಔಷಧಗಳನ್ನೇ ಬಳಸಲಾಗುತ್ತಿದೆ.
ಯಾವೆಲ್ಲ ಔಷಧ ಖಾಲಿ?
ಶ್ವಾಸಕೋಶ, ಕರುಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋ ನಿಯಾ, ಕ್ಯಾನ್ಸರ್, ಅಸ್ತಮಾ, ಮಧುಮೇಹ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಮೂಳೆ, ತುರಿಕೆ, ಫಂಗಸ್, ಮೈಗ್ರೇನ್, ಶೀತ, ಅನಸ್ತೇಷಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪು್ಪಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸಂಬಂಧಿತ ಗಂಭೀರ ಕಾಯಿಲೆಗಳ ನಿವಾರಿಸುವ ಔಷಧ, ಮಾತ್ರೆ ಹಾಗೂ ಚುಚ್ಚುಮದ್ದು ಸಹಿತ 150ಕ್ಕೂ ಹೆಚ್ಚು ಔಷಧ ಖಾಲಿ ಆಗಿವೆ.
ಇದನ್ನೂ ಓದಿ‘ಅರ್ಜುನ್​ ರೆಡ್ಡಿ’ ಚಿತ್ರಕ್ಕೆ ಮೊದಲು ಈ ಹೀರೋನನ್ನು ಅಪ್ರೋಚ್​ ಮಾಡಿದ್ರು ನಿರ್ದೇಶಕ ಸಂದೀಪ್​!?
ಬೇಡಿಕೆ ಹೆಚ್ಚು
2017ರಲ್ಲಿ 337 ಕೋಟಿ ರೂ. ಹಾಗೂ 2018ರಲ್ಲಿ 360 ಕೋಟಿ ರೂ.ಮೊತ್ತದ ಔಷಧಗಳನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಳ ಹಾಗೂ ಆಸ್ಪತ್ರೆಗಳಿಂದ ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ 487.75 ಕೋಟಿ ರೂ. ಮೊತ್ತದ ಔಷಧಗಳನ್ನು ಕೋರಲಾಗಿದೆ. ಆದರೆ, ಕರೊನಾ ಕಾರಣದಿಂದಾಗಿ ಅಧಿಕಾರಿಗಳು ಯಾವುದೇ ಟೆಂಡರ್ ಆಹ್ವಾನಿಸಿಲ್ಲ. ನಾಮ್ೇವಾಸ್ತೆ ಎಂಬಂತೆ 4ಜಿ ಅಡಿ ಸ್ವಲ್ಪ ಪ್ರಮಾಣದಲ್ಲಿ ಔಷಧ ಖರೀದಿಸಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + six =
Remember me
