ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿನ ಪ್ರಕರಣ ಸಂಬಂಧ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ರ ಮೊದಲ ಸುತ್ತಿನ ಸಿಸಿಬಿ ವಿಚಾರಣೆ ಮುಕ್ತಾಯವಾಗಿದೆ.
ಬುಧವಾರ ಬೆಳಗ್ಗೆ 11.15ರಿಂದ ಮಧ್ಯಾಹ್ನ 2.30ರವರೆಗೂ ದಿಗಂತ್​ ಮತ್ತು ಐಂದ್ರಿತಾರನ್ನು ಪ್ರತ್ಯೇಕವಾಗಿ ನಿರಂತರ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್​ ಮಾಫಿಯಾ ಕುರಿತು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯಕ್ಕೆ ಈ ದಂಪತಿ ನಿರಾಳವಾಗಿದ್ದರೂ ಮತ್ತೊಮ್ಮೆ ಸಮನ್ಸ್​ ಕೊಡುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್​ ಪಾಟೀಲ್​ ತಿಳಿಸಿದ್ದಾರೆ.ಇದನ್ನೂ ಓದಿರಿPHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್
ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್​ ಅವರು ದಿಗಂತ್​ರನ್ನು ಮತ್ತು ಅಂಜುಮಾಲಾ ನಾಯಕ್ ಅವರು ಐಂದ್ರಿತಾ ರೇ ಅವರನ್ನು ವಿಚಾರಣೆ ನಡೆಸಿದರು. ಇಬ್ಬರ ಸ್ಟೇಟ್​ಮೆಂಟ್ಅನ್ನು ದಾಖಲಿಸಿಕೊಂಡಿದ್ದಾರೆ. ಇಬ್ಬರ ಹೇಳಿಕೆ ಹಾಗೂ ಡ್ರಗ್ಸ್​ ಕೇಸ್​ನಲ್ಲಿ ಇವರ ಪಾತ್ರದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಮತ್ತೊಂದು ನೋಟಿಸ್ ನೀಡಲಿದ್ದಾರೆ. ಸದ್ಯಕ್ಕೆ ‘ಗುಳಿಕೆನ್ನೆ’ ಜೋಡಿ ಬಂಧನ ಭೀತಿಯಿಂದ ಹೊರ ಬಂದಿದ್ದಾರೆ. ಆದ್ರೆ ಅವರಿಬ್ಬರ ಮೊಬೈಲ್​ ಸಿಸಿಬಿ ವಶದಲ್ಲಿದೆ.
ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್​ನ ಕ್ಯಾಸಿನೋ ಪಾರ್ಟಿಗಳಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರ್​ ಆಗುವಂತೆ ಮಂಗಳವಾರ ಸಂಜೆ ಕೇರಳಾದಲ್ಲಿದ್ದ ಐಂದ್ರಿತಾ ದಂಪತಿಗೆ ವಾಟ್ಸ್ಆ್ಯಪ್​ ಮೂಲಕ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದಿಗಂತ್​, ‘ನಾವು ಎಲ್ಲೂ ತಲೆ ಮರೆಸಿಕೊಂಡಿಲ್ಲ. ವಿಚಾರಣೆಗೆ ಹಾಜರಾಗ್ತೀವಿ’ ಎಂದಿದ್ದರು. ಐಂದ್ರಿತಾ ಕೂಡ, ‘ಸಿಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಿಗದಿತ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಸಿಸಿಬಿ ಕಚೇರಿಗೆ ಬರುತ್ತೇವೆ’ ಎಂದು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದರು.
ಮಂಗಳವಾರ ತಡರಾತ್ರಿಯೇ ಬೆಂಗಳೂರಿಗೆ ಬಂದ ದಿಗಂತ್- ಐಂದ್ರಿತಾ ರೇ, ಬುಧವಾರ ಬೆಳಗ್ಗೆ 11.15ಕ್ಕೆ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.
‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
