ಬೆಂಗಳೂರು:ಡ್ರಗ್ಸ್ ಕೇಸ್​ ಸಂಬಂಧ ಎರಡನೇ ಬಾರಿಗೆ ಸಿಸಿಬಿ ವಿಚಾರಣೆ ಎದುರಿಸಿ ಕಚೇರಿಯಿಂದ ಹೊರ ಬಂದ ನಟ ದಿಗಂತ್, ‘ಮೂರನೇ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರ್​ ಆಗ್ತೀನಿ’ ಎಂದರು.
ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣ ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ಈ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ಕೆಲ ಆರೋಪಿಗಳ ಪಾರ್ಟಿಯಲ್ಲಿ ಐಂದ್ರಿತಾ ರೇ ಮತ್ತು ದಿಗಂತ್​ ಪಾಲ್ಗೊಂಡಿದ್ದ ಹಾಗೂ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ಹರಿದಾಡುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ತಾರಾದಂಪತಿಯನ್ನು ಸೆ.17ರಂದು ಸಿಸಿಬಿ ವಿಚಾರಣೆ ನಡೆಸಿತ್ತು. ಮತ್ತೊಮ್ಮೆ ದಿಗಂತ್​ ಒಬ್ಬರಿಗೆ ಮಾತ್ರ ನೋಟಿಸ್​ ಜಾರಿ ಮಾಡಿದ್ದ ಸಿಸಿಬಿ, ಇಂದು(ಬುಧವಾರ) ಬೆಳಗ್ಗೆ 11ಕ್ಕೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸುವಂತೆ ಸೂಚಿಸಿತ್ತು. ಶೂಟಿಂಗ್​ ಸ್ಥಳದಲ್ಲಿದ್ದ ದಿಗಂತ್​ ಅಲ್ಲಿಂದಲೇ ನೇರವಾಗಿ ಸಿಸಿಬಿ ಕಚೇರಿಗೆ ಹಾಜರ್​ ಆಗಿದ್ದರು.ಇದನ್ನೂ ಓದಿರಿಸಿಸಿಬಿ ಕಚೇರಿಗೆ ವಕೀಲರ ಜೊತೆ ಬಂದ ಐಂದ್ರಿತಾ-ದಿಗಂತ್​
ಬುಧವಾರ ಬೆಳಗ್ಗೆ 11.20ರಿಂದ ಮಧ್ಯಾಹ್ನದ 2.40ರವರೆಗೂ ದಿಗಂತ್​ರನ್ನು ತೀವ್ರ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಮಹತ್ತರ ಮಾಹಿತಿ ಪಡೆದರು. ಬಳಿಕ ಹೊರ ಬಂದ ದಿಗಂತ್​, ‘ಸಿಸಿಬಿ ಅವ್ರು ನೋಟಿಸ್ ಕೊಟ್ಟಿದ್ರು ಬಂದಿದ್ದೆ. ವಿಚಾರಣೆ ನಡೀತಾ ಇದೆ. ವಿಚಾರಣೆಗೆ ಸಹಕಾರ ಕೊಡ್ತಾ ಇದ್ದೇನೆ. ಮತ್ತೆ ವಿಚಾರಣೆಗೆ ಕರೆದ್ರೆ ಬರುತ್ತೇನೆ. ತನಿಖೆಯ ಬಗ್ಗೆ ಸಿಸಿಬಿ ಅವರನ್ನೇ ಕೇಳಿ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ‘ಮಾರಿಗೋಲ್ಡ್’ ಸಿನಿಮಾ ಶೂಟಿಂಗ್ ಸ್ಪಾಟ್​ನತ್ತ ಕೊಟ್ಟ ದಿಗಂತ್ ಹೊರಟರು.
‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

VIDEO|ಶಿರಾ ಬೈ ಎಲೆಕ್ಷನ್​: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
