ಬೆಂಗಳೂರು:ಸ್ಯಾಂಡಲ್​ವುಡ್​ ನಟ ದಿಗಂತ್​ ಮಂಚಾಲೆ, ಆಫ್ರಿಕಾದ ಶಂಕಿತ ಡ್ರಗ್ಸ್​ ಪೆಡ್ಲರ್​ ಜತೆ ಮೊಬೈಲ್​ನಲ್ಲಿ ವಿನಿಮಯ ಮಾಡಿಕೊಂಡಿರುವ ಮೆಸೇಜ್ ಸೇರದಿಂತೆ ಕೆಲ ಸಂದೇಶಗಳನ್ನು ಡಿಲೀಟ್​ ಮಾಡಿಕೊಂಡಿದ್ದಾರೆ ಎಂಬುದು ಸಿಸಿಬಿ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.
ಡ್ರಗ್ಸ್​ ಕೇಸ್​ ಸಂಬಂಧ ಈಗಾಗಲೇ ಎರಡು ಬಾರಿ ಸಿಸಿಬಿ ವಿಚಾರಣೆ ಎದುರಿಸಿರುವ ದಿಗಂತ್​ಗೆ ಅಗತ್ಯವಿದ್ದಲ್ಲಿ ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಿಂದ ಹೊರ ಹೋಗದಂತೆ ದಿಗಂತ್​ಗೆ ಸೂಚಿಸಿರುವ ಅಧಿಕಾರಿಗಳು, ಶೂಟಿಂಗ್​ ಹೊರತುಪಡಿಸಿ ಬೇರೆ ಕಡೆ ಪ್ರಯಾಣ ಕೈಗೊಳ್ಳುವುದಾದರೆ ಸಿಸಿಬಿಗೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿರಿಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​
ಡ್ರಗ್ಸ್​ ಕೇಸ್​ನ ಪ್ರಮುಖ ಆರೋಪಿ ಶೇಖ್ ಫಾಝಿಲ್​ನ ಕ್ಯಾಸಿನೋ ಪಾರ್ಟಿಗೆ ಬರುವಂತೆ ವಿಡಿಯೋ ಮೂಲಕ ನಟಿ ಐಂದ್ರಿತಾ ಗಣ್ಯರನ್ನು ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಡ್ರಗ್ಸ್​ ಕೇಸ್​ನಲ್ಲಿ ಫಾಝಿಲ್​ ಹೆಸರು ಕೇಳಿಬರುತ್ತಿದ್ದಂತೆ ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅಂದರೆ ಸೆ.16ರಂದು ತಾರಾದಂಪತಿ ಐಂದ್ರಿತಾ ಮತ್ತು ದಿಗಂತ್​ ಇಬ್ಬರಿಗೂ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಅದರಂತೆ ಅವರಿಬ್ಬರೂ ಸೆ.17ರಂದು ವಿಚಾರಣೆಗೆ ಹಾಜರ್​ ಆಗಿದ್ದರು.
ಸೆ.23ರಂದು ಮತ್ತೊಮ್ಮೆ ನೋಟಿಸ್​ ಜಾರಿ ಮಾಡಿದ್ದ ಸಿಸಿಬಿ, ದಿಗಂತ್​ ಒಬ್ಬರನ್ನು ಮಾತ್ರ ವಿಚಾರಣೆಗೆ ಕರೆದಿತ್ತು. ಅದರಂತೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದಿದ್ದ ದಿಗಂತ್​ ಸತತ 3 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಿಗಂತ್​, ಮತ್ತೊಮ್ಮೆ ಕರೆದರೆ ವಿಚಾರಣೆಗೆ ಹಾಜರ್​ ಆಗ್ತೀನಿ ಎಂದಿದ್ದರು.
ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಮತ್ತಿಬ್ಬರು ಸ್ಟಾರ್​ ನಟರಿಗೆ ಕಾದಿದೆ ಡ್ರಗ್ಸ್​ ಗಂಡಾಂತರ… ಹೊಸ ಬಾಂಬ್​ ಸಿಡಿಸಿದ ಸಂಬರಗಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
