ಬೆಂಗಳೂರು:ಡ್ರಗ್ಸ್​ ಮಾಫಿಯಾ ಉರುಳು ಖ್ಯಾತ ನಿರೂಪಕಿ ಅನುಶ್ರೀಗೂ​ ಸುತ್ತಿಕೊಳ್ಳುತ್ತಿದ್ದು, ಸಿಸಿಬಿ ನೋಟಿಸ್​ ಕೊಟ್ಟ ಹಿನ್ನೆಲೆಯಲ್ಲಿ ವಿಚಾರಣೆಗೆ ಎದುರಿಸಲು ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಇತ್ತ ತನಿಖೆ ವೇಳೆ ಡ್ರಗ್ಸ್​ ಕೇಸ್​ನ ಆರೋಪಿ ತರುಣ್ ರಾಜ್, ‘ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು’ ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ. ಮೊದ ಮೊದಲು ‘ಅನುಶ್ರೀ ಕುಡೀತಾ ಇದ್ಲು, ಡ್ರಗ್ ತಗೋತಾ ಇರಲಿಲ್ಲ’ ಎಂದು ಹೇಳುತ್ತಿದ್ದ ತರುಣ್, ‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ. ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು’ ಎಂದು ಬಾಯ್ಬಿಟ್ಟಿದ್ದಾನೆ. ಇತ್ತೀಚಿಗೆ ಬಂಧನಕ್ಕೊಳಪಟ್ಟ ತರುಣ್​ರಾಜ್​ನನ್ನು ಮಂಗಳೂರು ಸಿಸಿಬಿ ಮತ್ತು ನಾರ್ಕೋಟಿಕ್​ ಜಂಟಿಯಾಗಿ ತನಿಖೆ ನಡೆಸುತ್ತಿವೆ. ಪೊಲೀಸರ ತನಿಖೆ ಚುರುಕುಗೊಂಡ ಬಳಿಕ ಆರೋಪಿ ತರುಣ್​, ಒಂದೊಂದೇ ಬಾಯ್ಬಿಟ್ಟಿದ್ದಾನೆ. ಇತ್ತ ‘ನನಗೇನೂ ಗೊತ್ತಿಲ್ಲ. ನಾನು ಅಪರಾಧಿಯಲ್ಲ, ವಿಚಾರಣೆಗೆ ಹಾಜರ್​ ಆಗ್ತಿನಿ’ ಎನ್ನುತ್ತಿದ್ದ ಅನುಶ್ರೀ, ಗುರುವಾರ ರಾತ್ರಿ ಸಿಸಿಬಿ ಪೊಲೀಸರು ನೋಟಿಸ್​ ಜಾರಿ ಮಾಡುತ್ತಿದ್ದಂತೆ, ರಾತ್ರಿಯೇ ಲೀಗಲ್‌ ಟೀಂ ಸಲಹೆ ಪಡೆದಿದ್ದಾರೆ.ಇದನ್ನೂ ಓದಿರಿಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​
ಗುರುವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಸಿಸಿಬಿ ಪೊಲೀಸ್​ ತಂಡ ಅನುಶ್ರೀಗೆ ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್​ ಜಾರಿ ಮಾಡಿತ್ತು. ಈ ವೇಳೆ ಶುಕ್ರವಾರ ಬೆಳಗ್ಗೆ 11ಕ್ಕೆ ಬರುವುದಾಗಿ ಕೇಳಿಕೊಂಡಿದ್ದ ನಿರೂಪಕಿ, ಅದರಂತೆ ಬೆಳಗ್ಗೆ ಮಂಗಳೂರಿಗೆ ಪ್ರಯಾಣ ಬೆಳೆಸಿದರು.
ಇದಕ್ಕೂ ಮುನ್ನ ರಾತ್ರಿಯೇ ಲೀಗಲ್‌ ಟೀಂ ಸಲಹೆ ಪಡೆದ ಅನುಶ್ರೀ, ಸಿಸಿಬಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನ, ಒಂದು ವೇಳೆ ಯಾವುದಾದರೂ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡಿದ್ರೆ ಏನು ಮಾಡಬೇಕು, ತನಿಖಾಧಿಕಾರಿಗಳ ಪ್ರಶ್ನೆಗಳು ಗೊಂದಲ ಆದ್ರೆ ಹೇಗೆ ಪ್ರತಿಕ್ರಿಯಿಸಬೇಕು… ಹೀಗೆ ಹಲವಾರು ಆಯಾಮಗಳಲ್ಲಿ ಸಲಹೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

ಡ್ರಗ್ಸ್​ ಕೇಸ್​: ಮಾಧ್ಯಮಗಳಿಗೆ ನಿರೂಪಕಿ ಅನುಶ್ರೀ ಮಾಡಿಕೊಂಡರೊಂದು ಮನವಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 5 =
Remember me
