ಬೆಂಗಳೂರು:ಡ್ರಗ್ಸ್​ ಕೇಸ್​ ಪ್ರಕರಣ ಸಂಬಂಧ ಖ್ಯಾತ ನಿರೂಪಕಿ ಅನುಶ್ರೀಗೆ ಗುರುವಾರ ಸಿಸಿಬಿ ಸಮನ್ಸ್​ ಜಾರಿ ಮಾಡಿದೆ.
ಡ್ರಗ್ಸ್​ ರಾಕೆಟ್​ ಕೇಸ್​ನಲ್ಲಿ ಸ್ಫೋಟಕ ತಿರುವು ಪಡೆದಿದ್ದು, ನಿತ್ಯ ಹೊಸ-ಹೊಸ ಹೆಸರುಗಳು ಕೇಳಿಬರುತ್ತಿವೆ. ಇದೀಗ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್​ ಉರುಳಿನಲ್ಲಿ ಸಿಲುಕಿದ್ದು, ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರು ವಾಟ್ಸ್ಆ್ಯಪ್​ ಮೂಲಕ ನೋಟಿಸ್​ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಅನುಶ್ರೀಗೆ ಖುದ್ದು ನೋಟಿಸ್ ನೀಡಲು ಮಂಗಳೂರು ಸಿಸಿಬಿ ಪೊಲೀಸ್​ ತಂಡ ಬೆಂಗಳೂರಿಗೆ ಬರುತ್ತಿದೆ.
ಈ ಬಗ್ಗೆದಿಗ್ವಿಜಯ ನ್ಯೂಸ್​ ಜತೆ ಗುರುವಾರ ಮಧ್ಯಾಹ್ನ 3.10ರ ಸುಮಾರಿಗೆ ಮಾತನಾಡಿದ ಅನುಶ್ರೀ, ‘ನನಗೆ ಇದುವರೆಗೂ ಯಾವುದೇ ನೋಟಿಸ್​ ಬಂದಿಲ್ಲ. ಕಿಶೋರ್​ ಶೆಟ್ಟಿ ಜತೆ 10 ವರ್ಷದ ಹಿಂದೆ ಡ್ಯಾನ್ಸ್​ ಶೋನಲ್ಲಿ ಭಾಗವಹಿಸಿದ್ದೆ ಅಷ್ಟೆ. ಕಿಶೋರ್​ ನನಗೆ ಅಷ್ಟಾಗಿ ಪರಿಚಯವಿಲ್ಲ. ಈ ವಿಷಯ ಕೇಳಿ ನನ್ನ ಮನೆಯವರು ತುಂಬಾ ಭಯಪಟ್ಟಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಇತ್ತೀಚಿಗಷ್ಟೇ ಡ್ರಗ್ಸ್ ಕೇಸ್​ನಲ್ಲಿ ಡ್ಯಾನ್ಸರ್ ಕಂ ಬಾಲಿವುಡ್ ನಟ ಕಿಶೋರ್ ಅಮನ್​ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಿಶೋರ್​ಗೆ ಡ್ರಗ್ ಲೋಕದ ಬಗ್ಗೆ ಆತನ ಸ್ನೇಹಿತ ತರುಣ್‌ ಪರಿಚಯಿಸಿದ್ದ. ತರುಣ್ ಮತ್ತು ಕಿಶೋರ್​ ಇಬ್ಬರದ್ದೂ ಡ್ರಗ್ ಟೆಸ್ಟ್​ನ ವರದಿ ಪಾಸಿಟಿವ್​ ಬಂದಿದೆ. ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಕಿಶೋರ್​, ಅನುಶ್ರೀ ಜತೆ ಪಾರ್ಟಿ ಮಾಡಿದ್ದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಸಮನ್ಸ್​ ಕೊಡಲಾಗಿದೆ ಎಂದು ಗೊತ್ತಾಗಿದೆ.
ಮಂಗಳೂರಿನಲ್ಲಿ ಕಿಶೋರ್​ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀ ಭಾಗಿಯಾಗುತ್ತಿದ್ದರಂತೆ. ಈತ ಡ್ರಗ್ಸ್ ಪಾರ್ಟಿಗಳನ್ನೂ ಆಯೋಜಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಲಾಕ್​ಡೌನ್​ ವೇಳೆಯೂ ಮಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದನಂತೆ. ತರುಣ್ ಕೂಡ ಕೋರಿಯೋಗ್ರಫರ್ ಕಂ ಆ್ಯಂಕರ್. ಹಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾನೆ. ಅನುಶ್ರೀಯ ಆಪ್ತ ಸ್ನೇಹಿತ ಎಂದೂ ಹೇಳಲಾಗಿದೆ.
ಮತ್ತಿಬ್ಬರು ಸ್ಟಾರ್​ ನಟರಿಗೆ ಕಾದಿದೆ ಡ್ರಗ್ಸ್​ ಗಂಡಾಂತರ… ಹೊಸ ಬಾಂಬ್​ ಸಿಡಿಸಿದ ಸಂಬರಗಿ

ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
