ಬೆಂಗಳೂರು:ಡ್ರಗ್ಸ್​ ಕೇಸ್​ ಪ್ರಕರಣ ಸಂಬಂಧ ಐಎಸ್‍ಡಿ(ಆಂತರಿಕ ಭದ್ರತಾ ವಿಭಾಗ) ನೋಟಿಸ್​ ನೀಡಿದ್ದ ಹಿನ್ನೆಲೆಯಲ್ಲಿ ಶಾಂತಿನಗರದ ಕಚೇರಿಯಲ್ಲಿ ಮಂಗಳವಾರ ವಿಚಾರಣೆ ಎದುರಿಸಿ ಹೊರ ಬಂದ ಕಿರುತೆರೆ ನಟಿ ಗೀತಾ ಭಾರತಿ ಭಟ್, ‘ನಾನು ಯಾವುದೇ ಪೆಡ್ಲರ್ ಅಲ್ಲ’ ಎಂದರು.
ಸತತ ಐದು ಗಂಟೆ ಕಾಲ ವಿಚಾರಣೆ ಎದುರಿಸಿದ ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, ಐಎಸ್​ಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ಐಎಸ್​ಡಿ ಅಧಿಕಾರಿಗಳು 40 ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ನನ್ನ ಮೊಬೈಲ್ ಸಹ ಚೆಕ್ ಮಾಡಿದ್ರು. ಇದೊಂದು ನನ್ನ ಪಾಲಿಗೆ ಹೊಸ ಎಕ್ಸ್​ಪೀರಿಯನ್ಸ್… ಎಂದರು.ಇದನ್ನೂ ಓದಿರಿಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​
ಡ್ರಗ್ಸ್​ ಕೇಸ್​ನಲ್ಲಿ ಈ ಹಿಂದೆ ಕರೆದಿದ್ದವರ ಪೈಕಿ ಒಬ್ಬರ ಬಳಿ ನನ್ನ ನಂಬರ್ ಇತ್ತಂತೆ. ಹಾಗಾಗಿ ನನ್ನನ್ನು ವಿಚಾರಣೆಗೆ ಕರೆದಿದ್ರು. ನನ್ನ ಫೋನ್ ಚೆಕ್​ ಮಾಡಿ ಅವರಿಗೆ ಬೇಕಾದ್ದು ತೆಗೆದುಕೊಂಡು ವಾಪಸ್ ಕೊಟ್ರು. ನಾನು ಯಾರಿಗೆ ಕಾಲ್ ಮಾಡಿದ್ದೇನೆ, ನನಗೆ ಯಾರ ಕಾಲ್ ಬಂದಿದೆ ಎಂಬುದರ ಬಗ್ಗೆಯೂ ಚೆಕ್ ಮಾಡಿದ್ರು. ಪಾರ್ಟಿ ಆಯೋಜನೆ, ಎಲ್ಲಿಗೆ ಹೋಗಿದ್ದೆ? ಯಾರಿಗೆ ಕಾಲ್ ಮಾಡಿದ್ದೆ? ಹೀಗೆ ನಾನಾ ರೀತಿಯ ಪ್ರಶ್ನೆ ಕೇಳಿದ್ರು. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ನನಗೂ ಸಮಾಧಾನವಾಗಿದೆ. ಅಧಿಕಾರಿಗಳಿಗೂ ನನ್ನ ಉತ್ತರ ತೃಪ್ತಿ ತಂದಿದೆ. ಎಂದು ಗೀತಾ ಭಾರತಿ ಭಟ್ ವಿವರಿಸಿದರು.
ನಾನು ಯಾವುದೇ ಪಾರ್ಟಿಗಳಿಗೆ ಹೋಗಲ್ಲ. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದ ಗೀತಾ, ಇದೊಂದು ನನ್ನ ಪಾಲಿಗೆ ಹೊಸ ಎಕ್ಸ್​ಪೀರಿಯನ್ಸ್. ಇದನ್ನು ವಿಚಾರಣೆ ಅನ್ನೋದಕ್ಕಿಂತ ಲೈವ್ಲಿ ಚಾಟ್ ಅನ್ನಬಹುದು. ಮತ್ತೆ ವಿಚಾರಣೆಗೆ ಕರೆದರೆ ಖಂಡಿತ ಬರ್ತೀನಿ ಎಂದರು.
ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
