ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ನಟಿಯರಿಬ್ಬರು ಸೇರಿ ಅವರ ಆಪ್ತರನ್ನು ಸಿಸಿಬಿ ಬಂಧಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಡ್ರಗ್ಸ್​ ಮಾಫಿಯಾದಲ್ಲಿ ರಾಜಕಾರಣಿಗಳ ನಂಟಿನ ಬಗ್ಗೆಯೂ ಗುಮಾನಿ ಇದ್ದು, ಡ್ರಗ್ಸ್​ ಪೆಡ್ಲರ್​ಗಳ ಜತೆಗೆ ಪ್ರಮುಖ ನಾಯಕರು ಇರುವ ಫೋಟೋಗಳು ಒಂದೊಂದೇ ವೈರಲ್​ ಆಗುತ್ತಿವೆ. ಈ ಪೈಕಿ ಡ್ರಗ್ಸ್​ ಕೇಸ್​ನಲ್ಲಿ ತಲೆಮರೆಸಿಕೊಂಡಿರುವ ಶೇಖ್​ ಫಾಝಿಲ್​ ಜತೆಗೆ ಶಾಸಕ ಜಮೀರ್​ ಅಹ್ಮದ್​ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇರುವ ಫೋಟೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷದ ನಾಯಕರು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.
ಶಾಸಕ ಜಮೀರ್​ ಅಹ್ಮದ್​ರ ಆಪ್ತ ಶೇಖ್​ ಫಾಝಿಲ್. ಈತನ ಜತೆಗೆ ಜಮೀರ್​ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋವನ್ನು ಸೋಮವಾರ ವಿಧಾನಸೌಧದಲ್ಲಿ ಪ್ರದರ್ಶಿಸಿದ ಸಚಿವ ಸಿ.ಟಿ.ರವಿ, ‘ಈ ಫೋಟೋ ಏನನ್ನು ಹೇಳುತ್ತೆ?’ ಎಂದು ಪ್ರಶ್ನಿಸಿದರು. ಅಲ್ಲದೆ ‘ಈ ಫೋಟೋ ಜನ್ಮಜನ್ಮಾಂತರದ ಸಂಬಂಧ ಎನ್ನುತ್ತಿದೆ’ ಎಂದು ಕಿಚಾಯಿಸಿದರು.
ಇದನ್ನೂ ಓದಿರಿ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’
‘ಈ ಫೋಟೋದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಇದ್ದಾರೆ. ಇದು ಬಹಳ ಆತ್ಮೀಯ ಸಂಬಂಧ ಎಂದು ಈ ಮುಖಭಾವ ಹೇಳುತ್ತೆ. ಇದುಯಾವುದೋ ಕುಟುಂಬದ ಕಾರ್ಯಕ್ರಮ. ಇದು ಅಪರಿಚಿತರ ಜತೆ ತೆಗೆಸಿಕೊಂಡ ಫೋಟೋ ಅಂತೂ ಅಲ್ಲ’ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
‘ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳೋದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯೋದೂ ಬೇಡ. ಕಳ್ಳನ ಹೆಂಡತಿ ಯಾವತ್ತಿದ್ದರೂ ಒಂದು ದಿನ… (ಡ್ಯಾಷ್) ಆಗಲೇಬೇಕು’ ಎಂದು ಜಮೀರ್ ವಿರುದ್ಧ ಸಿ.ಟಿ. ರವಿ ಕಿಡಿಕಾರಿದರು.
ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
