ಹುಬ್ಬಳ್ಳಿ:ಡ್ರಗ್ಸ್​ ಮಾಫಿಯಾ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅದನ್ನ ಮಟ್ಟ ಹಾಕಲು ಪೊಲೀಸ್​ ಪಡೆ ಸನ್ನದ್ಧವಾಗಿದೆ ಎಂದು ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್ ಹೇಳಿದ್ದಾರೆ.
ರಾಜ್ಯಕ್ಕೆ ಆಂಧ್ರಪ್ರದೇಶ ಮತ್ತು ಗೋವಾದಿಂದ ಡ್ರಗ್ಸ್ ಸಪ್ಲೈ ಆಗುತ್ತಿದೆ. ಈ ಮಾಫಿಯಾ ನಿರಂತರ ಜಾಲವಾಗಿದ್ದು, ಇದನ್ನು ಬೇರು ಸಮೇತ ಕಿತ್ತೊಗೆಯಲು ಪೊಲೀಸರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ನಿರಂತರ ದಾಳಿ ನಡೆಸಿ ಡ್ರಗ್ಸ್​ ಜಾಲ ಭೇದಿಸುತ್ತಿದ್ದಾರೆ‌ ಎಂದ ಪ್ರವೀಣ್​ ಸೂದ್, ಬೆಂಗಳೂರು ಮಾತ್ರವಲ್ಲ, ರಾಜ್ಯದ ವಿವಿಧ ಪಟ್ಟಣಗಳಲ್ಲೂ ಡ್ರಗ್ಸ್​ ಮಾಫಿಯಾ ಇದೆ ಎಂದರು.ಇದನ್ನೂ ಓದಿರಿಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?
ಡ್ರಗ್ಸ್ ಮಾಫಿಯಾ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ. ಎನ್​ಸಿಬಿ ಹಾಗೂ ಸಿಸಿಬಿ ಯವರು ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಹೆಸರು ಹಾಗೂ ವಿವರಗಳನ್ನ ಬಹಿರಂಗ ಪಡಿಸಬಹುದು ಎಂದರು.
ಕೋವಿಡ್ ಸಂದರ್ಭದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದ ತಿಳಿಸಲು ರಾಜ್ಯ ಪ್ರವಾಸ ಮಾಡುತ್ತಿರುವೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯನ್ನು ಜೀರೋ ಲೇವಲ್ ಮಾಡಲು ನೇಮಕಾತಿ ಸಹ ನಡೆಯಿತ್ತಿದೆ. ಕರೊನಾ ನಂತರ ಅಪರಾಧ ಚಟುವಟಿಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಪೊಲೀಸರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ‘ಡಯಲ್ 100’ ಮತ್ತಷ್ಟು ಆ್ಯಕ್ಟೀವ್ ಆಗಬೇಕಿದೆ ಎಂದರು.
https://www.facebook.com/DighvijayNews/videos/1563976950461392/
ಎಲ್ಲವೂ ಸರ್ವನಾಶವಾಯ್ತು… ಎಂದು ಗೋಳಾಡುತ್ತಿದ್ದ ರೈತನಿಗೆ ಪಿಎಸ್ಐ ಕೊಟ್ರು ಅಚ್ಚರಿಯ ಉಡುಗೊರೆ!

ಡ್ರಗ್ಸ್ ಮಾಫಿಯಾ ಬಗ್ಗೆ ಹೊಸ ಬಾಂಬ್​ ಸಿಡಿಸಿದ ಪ್ರಮೋದ್​ ಮುತಾಲಿಕ್​

ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
