ಬಾಗಲಕೋಟೆ:ಡ್ರಗ್ಸ್​ ಕೇಸ್​ನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಶೇಖ್​ ಫಾಝಿಲ್​ ಜತೆಗೆ ಶಾಸಕ ಜಮೀರ್​ ಅಹ್ಮದ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇರುವ ಫೋಟೋ ವೈರಲ್​ ಆಗಿದೆ. ಜಮೀರ್​ ಆಪ್ತ ಶೇಖ್​ ಫಾಝಿಲ್​. ಆದ್ರೆ ಸಿದ್ದರಾಮಯ್ಯಗೂ ಆರೋಪಿಗೂ ಏನು ಸಂಬಂಧ ಎಂದು ಭಾರೀ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಉತ್ತರಿಸಿದ್ದಾರೆ.
‘ಬಾದಾಮಿ‌ ಕ್ಷೇತ್ರದ ಗೋವನಕೊಪ್ಪ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಸಿದ್ದರಾಮಯ್ಯ, ‘ಶೇಖ್ ಫಾಝಿಲ್​ ಯಾರೂ ಅಂತಾನೆ ನನ್ಗೆ ಗೊತ್ತಿಲ್ಲ. ಐ ಡೋಂಟ್ ನೋ ಹೂ ಹಿ ಇಜ್?’ ಎಂದು ಪಶ್ನಿಸಿದರು.
ಇದನ್ನೂ ಓದಿರಿ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
‘ಯಾರೋ ಬಂದು ಫೋಟೋ ತಗೋತಾರೆ.. ಏನ್ ಮಾಡೋಕಾಗುತ್ತೆ? ಕಳ್ಳರು ಬಂದು ನಮ್ಮ ಜತೆ ಫೋಟೋ ತಗೋಬಹುದು. ನಮ್ಗೇನು ಗೊತ್ತಾಗುತ್ತೆ? ಯಾರ ಜತೆ ಫೋಟೋ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದ್ದಾರಾ? ಅನ್ನೋದು ಮುಖ್ಯ. ಅವನ್ಯಾರೋ ಫಾಝಿಲ್​ ನನಗೆ ಗೊತ್ತಿಲ್ಲ. ಜಮೀರ್​ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಅನ್ನೋದ್ದಕ್ಕೆ ಎವಿಡೆನ್ಸ್ ಬೇಕು. ಸಾಕ್ಷಿ ಇದ್ರೆ ಪೊಲೀಸರು ಕ್ರಮ ಕೈಗೊಳ್ಳಲಿ’ ಎಂದು ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದರು.
‘ಬಿ.ವೈ. ವಿಜಯೇಂದ್ರ ಜತೆ ಕೆ.ಆರ್. ಪೇಟೆಯಲ್ಲಿ ನಟಿ ರಾಗಿಣಿ ಕ್ಯಾಂಪೇನ್ ಮಾಡಿದ್ದರು. ಅಷ್ಟಕ್ಕೆ ವಿಜಯೇಂದ್ರ ಕೂಡ ಡ್ರಗ್ಸ್​ ಜಾಲದಲ್ಲಿ ಇದ್ದಾರೆ ಎಂದು ಹೇಳೋಕೆ ಆಗುತ್ತಾ?’ ಎಂದು ಮರುಪ್ರಶ್ನಿಸಿದ ಸಿದ್ದರಾಮಯ್ಯ, ‘ಫಾಝಿಲ್ ಬಗ್ಗೆ ಸಾಕ್ಷಿ ಇದ್ರೆ ಕ್ರಮ‌ಕೈಗೊಳ್ಳಿ. ಯಾರು ಅಡ್ಡ ಬರ್ತಾರೆ’ ಎಂದರು.
‘ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ’

ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
