ಬೆಂಗಳೂರು:ಸ್ಯಾಂಡಲ್​ವುಡ್​ನ ‘ಮಾದಕ’ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ ಐದು ದಿನ ಸಿಸಿಬಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಡ್ರಗ್ಸ್​ ಮಾಫಿಯಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ನಂಟಿದೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿರುವ ರಾಗಿಣಿಯನ್ನು ಸೆ.11ರವರೆಗೂ ಸಿಸಿಬಿ ವಶಕ್ಕೆ ಪಡೆಯುವಂತೆ 1ನೇ ಎಸಿಎಂಎಂ ಕೋರ್ಟಿನ ನ್ಯಾಯಾಧೀಶ ಜಗದೀಶ್​ ಆದೇಶಿಸಿದ್ದಾರೆ.
ಇದನ್ನೂ ಓದಿರಿಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!
ಮೂರು ದಿನವಾದರೂ ತನಿಖೆಗೆ ಸಹಕರಿಸದ ರಾಗಿಣಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಿಸಿಬಿ ಮನವಿ ಮಾಡಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ರಾಗಿಣಿಯನ್ನು ಪಡೆಯುವಂತೆ ಆದೇಶಿಸಿದರು.
ಬಂಧನಕ್ಕೂ ಮೊದಲೇ ರಾಗಿಣಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಗಿಣಿ ಪರ ಸುದರ್ಶನ್ ವಕೀಲರು ವಾಪಸ್​ ಪಡೆದಿದ್ದಾರೆ. ಈಗಾಗಲೇ ನಟಿ ಸಿಸಿಬಿ ಬಂಧನದಲ್ಲಿದ್ದಾರೆ. ಹಾಗಾಗಿ ಈ ಅರ್ಜಿಯನ್ನು ಹಿಂಪಡೆಯಲಾಗಿದೆ. ಸದ್ಯ ಜಾಮೀನು ಕೋರಿ ರಾಗಿಣಿ ಹೊಸ ಅರ್ಜಿ ಸಲ್ಲಿಸಿದ್ದಾರೆ.
‘ತುಪ್ಪ’ದ ಬೆಡಗಿ ರಾಗಿಣಿ ಮತ್ತೆ ಪೊಲೀಸ್​ ಕಸ್ಟಡಿಗೆ ಹೋಗಲು ಆ 7 ಕಾರಣ ಇಲ್ಲಿದೆ

ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
